Advertisement

ಇಂಗ್ಲೆಂಡ್‌ನಿಂದ ಬಂದ ಇಬ್ಬರಲ್ಲಿ ಸೋಂಕು ದೃಢ

01:48 PM Dec 12, 2021 | Team Udayavani |

ದೇವನಹಳ್ಳಿ: ವಿದೇಶಗಳಲ್ಲಿ ಒಮಿಕ್ರಾನ್‌ ಸೋಂಕು ತಾಂಡವವಾಡುತ್ತಿದ್ದು, ಆತಂಕದ ನಡುವೆಯೂ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಗ್ಲೆಂಡ್‌ ದೇಶದಿಂದ ಪ್ರತ್ಯೇಕ ವಿಮಾನಗಳಲ್ಲಿ ಬಂದಿರುವ ಪ್ರಯಾಣಿಕರ ಪೈಕಿ ಇಬ್ಬರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಇಬ್ಬರ ಗಂಟಲ ದ್ರವ ಮಾದರಿಗಳನ್ನು ಒಮಿಕ್ರಾನ್‌ ಸೋಂಕಿನ ಕುರಿತು ಖಾತರಿಪಡಿಸಿಕೊಳ್ಳಲು ಜೀನೋಮ್‌ ಸಿಕ್ವೆನ್ಸಸ್‌ಗೆ ಕಳುಹಿಸಿದ್ದು, ಸೋಂಕಿತರನ್ನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಹೋಂ ಕ್ವಾರೈಂಟನ್‌: ಇಂಗ್ಲೆಂಡ್‌ನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಮಾತನಾಡಿ, ನಮಗೆ ಏರ್‌ ಸುವಿದಾ ಅರ್ಜಿ ತುಂಬಿಸಲಿಕ್ಕೆ ಹೇಳಿದ್ದರು. ಇಲ್ಲಿಗೆ ಬಂದ ಮೇಲೆ 10 ನಿಮಿಷಗಳಲ್ಲಿ ಎಲ್ಲ ಪರೀಕ್ಷೆಗಳನ್ನು ಮಾಡಿದ್ದಾರೆ. ಇಂಗ್ಲೆಂಡ್‌ನ‌ಲ್ಲಿ ಒಮಿಕ್ರಾನ್‌ ಸೋಂಕಿನ ಭೀತಿ ಹೆಚ್ಚಾಗಿದೆ.

ಒಂದು ವಿಮಾನದಲ್ಲಿ 136 ಮಂದಿ ಮತ್ತೂಂದು ವಿಮಾನದಲ್ಲಿ 268 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು. ವಿಮಾನ ನಿಲ್ದಾಣಕ್ಕೆ ಬಂದಿದ್ದ ಎಲ್ಲ ಪ್ರಯಾಣಿಕರನ್ನು ಆರ್‌ ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಗಳು ನೆಗೆಟಿವ್‌ ಬಂದಿರುವ ಕಾರಣ, ಅವರನ್ನು ಮನೆಗಳಿಗೆ ಕಳುಹಿಸಿ ಹೋಂ ಕ್ವಾರೈಂಟನ್‌ ಮಾಡಲಾಗಿದೆ ಎಂದರು.

ಕಠಿಣ ನಿಯಮ: ಇಂಗ್ಲೆಂಡ್‌ನಿಂದ ಬಂದಿದ್ದ ವಿಮಾನದಲ್ಲಿದ್ದ 9 ವರ್ಷದ ಬಾಲಕಿ ಹಾಗೂ ಮತ್ತೂಂದು ವಿಮಾನದಲ್ಲಿ ಪ್ರಯಾಣಿಸಿದ್ದ 22 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಯುವಕನು ತಮಿಳುನಾಡಿನ ನಿವಾಸಿ ಎಂದು ತಿಳಿದು ಬಂದಿದೆ. ಇಂಗ್ಲೆಂಡ್‌ನ‌ಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ 300ಕ್ಕೂ ಹೆಚ್ಚಿವೆ.

ಅಲ್ಲಿ ಕಠಿಣ ನಿಯಮಗಳನ್ನು ಕೈಗೊಳ್ಳುತ್ತಿದ್ದಾರೆ. ಸೆಮಿ ಲಾಕ್‌ಡೌನ್‌ ಮಾಡಲಾಗಿದೆ. ಮುಂದೆ ವಾಪಸ್‌ ಹೋಗಲಿಕ್ಕಾಗಿ ಏನೇನು ಕ್ರಮಗಳನ್ನು ಕೈಗೊಂಡಿರುತ್ತಾರೋ ಕಾದು ನೋಡಬೇಕು ಎಂದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾತನಾಡಿ, ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಸೂಕ್ಷ್ಮವಾಗಿ ಗಮನಹರಿಸಲಾಗುತ್ತಿದೆ.

Advertisement

ಇದನ್ನೂ ಓದಿ;- ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಮೊಬುಶೀರಾ ಪ್ರಥಮ

ಚಿಕ್ಕ ಮಕ್ಕಳು ಸೇರಿದಂತೆ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಎಲ್ಲ ಪ್ರಯಾಣಿಕರು ನೋಂದಣಿ ಮಾಡಿಕೊಂಡ ನಂತರ ಅವರಿಂದ ಶುಲ್ಕ ಪಡೆದುಕೊಂಡ ನಂತರ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.

3 ಸಾವಿರ ರೂ. ಶುಲ್ಕ: ಒಂದು ಬಾರಿಗೆ 6 ಕೌಂಟರ್‌ ಗಳಲ್ಲಿ ಪರೀಕ್ಷೆಗೆ ಗಂಟಲ ದ್ರವ ತೆಗೆದುಕೊಳ್ಳಲಾಗುತ್ತಿದೆ. ಒಂದೇ ಬಾರಿಗೆ ಎರಡರಿಂದ ಮೂರು ವಿಮಾನಗಳು ಬಂದರೆ ಕೌಂಟರ್‌ಗಳನ್ನು ಹೆಚ್ಚಿಸಲಾಗುತ್ತದೆ. ಒಬ್ಬ ಪ್ರಯಾಣಿಕರ ಪರೀಕ್ಷೆ ವರದಿ ಬರಲಿಕ್ಕೆ 30 ನಿಮಿಷವಾಗುತ್ತದೆ. ಒಂದು ಯಂತ್ರದಲ್ಲಿ ಅರ್ಧ ಗಂಟೆಯಲ್ಲಿ 60 ಪ್ರಯಾಣಿಕರ ಪರೀûಾ ವರದಿಗಳನ್ನು ನೀಡಲಾಗುತ್ತಿದೆ.

ಸಾಮಾನ್ಯ ಆರ್‌ಟಿಪಿಸಿಆರ್‌ ಗೆ 500 ರೂ. ರ್ಯಾಪಿಡ್‌ ಆರ್‌ಟಿಪಿಸಿಆರ್‌ಗೆ 3 ಸಾವಿರ ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ವರದಿ ವಿಳಂಬವಾದರೆ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಸ್ಥಳ ಕಾಯ್ದಿರಿಸಲಾಗಿದೆ ಎಂದು ಹೇಳಿದರು.

6 ಕೌಂಟರ್‌ನಲ್ಲಿ ಕೋವಿಡ್‌ ಪರೀಕ್ಷೆ

ಇಂಗ್ಲೆಂಡ್‌ ದೇಶದಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣಗಳು 300 ದಾಟಿದ್ದು, ಹೈರಿಸ್ಕ್ ದೇಶಗಳಿಂದ ದೇಶಕ್ಕೆ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಎಲ್ಲ ಪ್ರಯಾಣಿಕರಿಗೆ ಆರ್‌ ಟಿಪಿಸಿಆರ್‌ ಪರೀಕ್ಷೆ ನಡೆಸಲಿಕ್ಕೆ 6 ಕೌಂಟರ್‌ಗಳನ್ನು ತೆರೆಯಲಾಗಿದೆ. ಪರೀಕ್ಷೆಗೆ ಒಳಪಡುವ ಪ್ರಯಾಣಿಕರಿಗೆ 30 ನಿಮಿಷದಲ್ಲಿ ಪರೀಕ್ಷಾ ವರದಿ ನೀಡಲಾಗುತ್ತಿದೆ. ಹಾರಿಗಾ ಸಂಸ್ಥೆಯ ವತಿಯಿಂದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next