Advertisement

ಯೇನಪೊಯ ಆಸ್ಪತ್ರೆಯಲ್ಲಿ ಕೋವಿಡ್‌ ತಪಾಸಣೆ ಕೇಂದ್ರ

08:04 AM May 13, 2020 | mahesh |

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ತಪಾಸಣೆ ಚುರುಕುಗೊಳಿಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಟೆಸ್ಟ್‌ ತೆರೆಯಲು ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಆರ್‌ಎಂ) ದೇರಳಕಟ್ಟೆಯ ಯೇನಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಯೋಗಾಲಯಕ್ಕೆ ಅನುಮತಿ ನೀಡಿದ್ದು, ಪ್ರಥಮ ದಿನದಲ್ಲಿ 82 ಜನರ ಗಂಟಲ ದ್ರವದ ಸ್ಯಾಂಪಲ್‌ಗ‌ಳನ್ನು ತೆಗೆಯಲಾಗಿದೆ.

Advertisement

ಪ್ರಯೋಗಾಲಯವು ಗುಣಮಟ್ಟದ ತಂತ್ರಜ್ಞಾನ ಹೊಂದಿದ್ದು 12 ನುರಿತ ವೈದ್ಯಕೀಯ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ದಿನವೊಂದಕ್ಕೆ 240 ಮಾದರಿಗಳ ಪರೀಕ್ಷೆ ಸಾಧ್ಯವಿದೆ. ದ.ಕ. ಜಿಲ್ಲೆಯಲ್ಲಿ ಸರಕಾರಿ ವೆನ್ಲಾಕ್‌ ಆಸ್ಪತ್ರೆಯ ಬಳಿಕ ಕೋವಿಡ್‌ ತಪಾಸಣೆಯ ಎರಡನೇ ಆಸ್ಪತ್ರೆಯಾಗಿ ಯೇನಪೊಯ ಆಸ್ಪತ್ರೆಗೆ ಅನುಮತಿ ದೊಕಿದ್ದು, ದ.ಕ., ಉಡುಪಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳ ಕೋವಿದ್‌ ಪರೀಕ್ಷೆಗೆ ಒಳಪಟ್ಟವರಿಗೆ ತ್ವರಿತವಾಗಿ ಫ‌ಲಿತಾಂಶ ನೀಡಲು ಸಹಕಾರಿಯಾಗಲಿದೆ ಜತೆಗೆ ವೆನ್ಲಾಕ್ ಆಸ್ಪತ್ರೆಯ ಪರೀಕ್ಷಾಲಯದ ಒತ್ತಡ ಕಡಿಮೆಯಾಗಲಿದೆ.

ತಪಾಸಣೆಗೊಳಪಡುವವರು ವೆಬ್‌ಸೈಟ್‌ //yenepoya.healzapp.com ಅಥವಾ infectioncontrol@yenepoya.edu.in ಇಮೇಲ್‌ ಮೂಲಕ ಸಂಪರ್ಕಿಸಬಹುದು. ಕೊಡಿಯಾಲ್‌ಬೈಲ್‌ನಲ್ಲಿರುವ ಯೇನಪೊಯ ವಿಶೇಷ ಆಸ್ಪತ್ರೆಯಲ್ಲೂ ಮಾದರಿ ಸಂಗ್ರಹ ಸೌಲಭ್ಯ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next