Advertisement
ಪಾಂಡವಪುರ ಉಪಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ಪ್ರಮೋದ್ ಎಲ್.ಪಾಟೀಲ್, ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಆಸ್ಪತ್ರೆವೈದ್ಯಾಧಿಕಾರಿ ಡಾ.ಕುಮಾರ್, ತಾಪಂ ಇಒ ಆರ್.ಪಿ.ಮಹೇಶ್, ಪುರಸಭೆಮುಖ್ಯಾಧಿಕಾರಿ ಮಂಜುನಾಥ್ ಸಮ್ಮುಖದಲ್ಲಿ ಕೋವಿಡ್ ವಾರ್ಡ್ ಹಾಗೂಆಸ್ಪತ್ರೆಗಳಿಗೆ ಮಂಡ್ಯ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಕೆಲಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
Related Articles
Advertisement
ಅಂಗಡಿಗಳು ಬಂದ್: ಗುರುವಾರ ಪಾಂಡವಪುರ ಪಟ್ಟಣದಲ್ಲಿ ಸಂತೆನಡೆಯುತ್ತಿದ್ದ ಪರಿಣಾಮ ಪಟ್ಟಣದಾದ್ಯಂತ ಅತಿಹೆಚ್ಚು ಜನಸಂಖ್ಯೆ ತಿರುಗಾಡುತ್ತಿದ್ದಹಿನ್ನೆಲೆ ಹಾಗೂ ಅಂಗಡಿಗಳಲ್ಲಿ ಗುಂಪು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಪರಿಣಾಮ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗಳನ್ನು ಮುಚ್ಚಿಸಿ ಎಚ್ಚರಿಸಿದರು.
ಮುಖ್ಯಾಧಿಕಾರಿಗೆಡೀಸಿ ಎಚ್ಚರಿಕೆಜಿಲ್ಲಾಧಿಕಾರಿ ಅಶ್ವತಿ ಅವರುಪಾಂಡವಪುರ ಪಟ್ಟಣಕ್ಕೆ ಆಗಮಿಸಿದಸಂದರ್ಭದಲ್ಲಿ ಪಟ್ಟಣದ ಎಲ್ಲಾಹೋಟೆಲ್‌ಗಳಲ್ಲಿ ಹೆಚ್ಚು ಜನ ಕುಳಿತುಊಟ ಮಾಡುತ್ತಿದ್ದ ದೃಶ್ಯ ಸೇರಿದಂತೆನಿಯಮ ಪಾಲಿಸದಿರುವುದನ್ನುವೀಕ್ಷಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಕರೆದು, ಏನ್ರಿ, ನೀವೇನಾಮುಖ್ಯಾಧಿಕಾರಿ, ಕೊರೊನಾ ಮಾರ್ಗಸೂಚಿ ಯಾವಾಗ ಸರ್ಕಾರ ಹೊರಡಿಸಿದೆಎಂದು ಪ್ರಶ್ನಿಸಿದಾಗ, ತಬ್ಬಿಬ್ಟಾದಮುಖ್ಯಾಧಿಕಾರಿ, ಒಂದು ವಾರ ಆಯ್ತುಮೇಡಂ ಎಂದು ಉತ್ತರಿಸಿದರು.
ಆಶ್ಚರ್ಯಪಟ್ಟ ಜಿಲ್ಲಾಧಿಕಾರಿ, ಏನ್ರೀನೀವು ಕೆಲಸ ಮಾಡ್ತೀರಾ, ಸರ್ಕಾರದಆದೇಶ ಯಾವಾಗ ಬಂತು ಅಂತಗೊತ್ತಿಲ್ವೇನ್ರಿ ತರಾಟೆ ತೆಗೆದುಕೊಂಡರು.ಪಾಂಡವಪುರ ಪಟ್ಟಣದ ಸಂತೆಮೈದಾನದಲ್ಲಿ ಗುರುವಾರ ಸಂತೆ ನಡೆಯುತ್ತಿದೆ.ಸಂತೆಯಲ್ಲಿ ಸಾವಿರಾರು ಮಂದಿ ಸೇರಿಕೊಂಡಿದ್ದಾರೆ. ಮುಖ್ಯಾಧಿಕಾರಿ ಯಾಗಿನೀವು ಏನ್ ಮಾಡುತ್ತಿದ್ದೀರಾ, ಸ್ವಲ್ಪನೂಕೆಲಸದ ಬಗ್ಗೆ ಕಾಳಜಿ ಇಲ್ಲವೇ, ತಕ್ಷಣಸಂತೆ ಸ್ಥಗಿತಗೊಳಿಸಲು ಸೂಚಿಸಿದರು.