Advertisement
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆಏನು ಮಾಡುತ್ತಿದ್ದೀರಿ?
Related Articles
Advertisement
ಬೆಡ್ ಕೊರತೆ ಹೇಗೆ ಬಗೆ ಹರಿಸಿದ್ದೀರಿ?ಈಗಾಗಲೇ ಕ್ಷೇತ್ರದ ಖಾಸಗಿ ಕಲ್ಯಾಣ ಮಂದಿರದಲ್ಲಿ 30 ಬೆಡ್‌ಹಾಗೂ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಯಲ್ಲಿ 30 ಬೆಡ್‌ಅಳವಡಿಸಿ ಚಿಕಿತ್ಸೆಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಇವು ಶೀಘ್ರವೇ ಕೊರೊನಾ ಚಿಕಿತ್ಸೆಗೆ ಸಜ್ಜಾಗಲಿವೆ. ಕೋವಿಡ್ ಕೇರ್ ಕೇಂದ್ರಗಳನ್ನುಅಗತ್ಯವಿರುವೆಡೆ ಆರಂಭಿಸಲಾಗಿದೆ. ಪ್ರಸ್ತುತ ಶ್ರೀನಿವಾಪುರ ಪಟ್ಟಣದಸರ್ಕಾರಿ ಆಸ್ಪತ್ರೆಯಲ್ಲಿನ 30 ಬೆಡ್ ಭರ್ತಿಯಾಗಿವೆ. ಎಲ್ಲರಿಗೂಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾಲ್ಕು ವೆಂಟಿಲೇಟರ್‌ಗಳು ಕೆಲಸನಿರ್ವಹಿಸುತ್ತಿದೆ ಎಂದು ಹೇಳಿದರು. ಕೊರೊನಾ ನಿಯಂತ್ರಣ ವಿಚಾರ ಜನತೆಗೆ ಏನು ಸಲಹೆ ನೀಡುತ್ತೀರಿ? ಶ್ರೀನಿವಾಸಪುರ ಕ್ಷೇತ್ರ ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದಾಗುತ್ತಿಲ್ಲ. ಸೋಂಕಿನ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಟೆಸ್ಟ್ ಮಾಡಿಸಿಕೊಳ್ಳುವುದು ಸೂಕ್ತ. ಒಂದುದಿನಕ್ಕೆ 2 ಸಾವಿರ ಮಂದಿ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ. ಕೋವಿಡ್ ಟೆಸ್ಟ್ ಮಾಡಿದ ನಂತರ 3 ದಿನಕ್ಕೆ ಫಲಿತಾಂಶನೀಡುತ್ತಿರುವುದನ್ನು ಮುಂದಿನ ದಿನಗಳಲ್ಲಿ 24 ತಾಸುಗಳಲ್ಲಿ ನೀಡಲುಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೇತ್ರದ ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣ ಕ್ರಮಗಳೇನು? ಆಶಾ ಕಾರ್ಯಕರ್ತೆಯರ ತಂಡ ರಚಿಸಿ ಎಲ್ಲಾ ಪಂಚಾಯ್ತಿಗಳಲ್ಲಿಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಚಿಕಿತ್ಸೆ ನೀಡುವ ಮೂಲಕ ಕೊರೊನಾದಿಂದ ಮುಕ್ತಗೊಳಿಸಿ ಆರೋಗ್ಯ ಕರ್ನಾಟಕವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.ಕೋವಿಡ್ ಸೆಂಟರ್ ಮಾಡುವ ಮೂಲಕ ಓರ್ವ ವೈದ್ಯ ಹಾಗೂಸಿಬ್ಬಂದಿ ನೇಮಿಸಲಾಗುವುದು, ರೋಗಿಗಳಿಗೆ ಉತ್ತಮಗುಣಮಟ್ಟದ ಆಹಾರ ಪೂರೈಕೆಗೆ ಅವಶ್ಯಕವಾದ ಹಣ್ಣು, ತರಕಾರಿ,ಮೊಟ್ಟೆ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಲಾಗುವುದು. ಔಷಧಗಳನ್ನುಬೆಂಗಳೂರಿನ ಮೆಡಿಕಲ್ ಕಾಲೇಜಿನಿಂದ ಉಚಿತವಾಗಿ ಪೂರೈಸುವಭರವಸೆ ದೊರೆಕಿದೆ. ಸೋಂಕಿತರಿಗೆ ಟೆಲಿಕಾಸ್ಟ್ ಮೂಲಕಸಲಹೆಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿ ಆತಂಕವನ್ನು ದೂರಮಾಡಲಾಗುವುದು. ಖಾಸಗಿ ಕಲ್ಯಾಣ ಮಂಟಪ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನುಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಜಾತಿಧರ್ಮ ಭೇದಭಾವಗಳಿಲ್ಲ. ನಾವು ಇದನ್ನು ಯಾವುದೇ ರೀತಿರಾಜಕೀಯಕ್ಕಾಗಿ ಮಾಡುತ್ತಿಲ್ಲ. ಜನಪ್ರತಿನಿಧಿಯಾಗಿ ನನ್ನಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನಾಗರಾಜು ಕೆ.ವಿ.