Advertisement

ಕಾಳಜಿ ಕೇಂದ್ರದಲ್ಲಿ ಜಾನಪದ ನಿನಾದ

09:57 PM Jun 04, 2021 | Team Udayavani |

ದೋಟಿಹಾಳ: ಗ್ರಾಮದ ಬಾಲಕರ ವಸತಿ ನಿಲಯದಲ್ಲಿರುವ ಕೋವಿಡ್‌ ಕಾಳಜಿ ಕೇಂದ್ರದ ಸೋಂಕಿತರಿಗಾಗಿ ಜಾನಪದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಜೀವನಸಾಬ್‌ ಬಿನ್ನಾಳ ಅವರು ಹಲವು ಜಾನಪದ ಗೀತೆ ಹಾಡುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ಹೆಚ್ಚಿಸಿದರು.

Advertisement

ಈ ವೇಳೆ ಮಾತನಾಡಿದ ಕಲಾವಿದ ಜೀವನಸಾಬ್‌ ಬಿನ್ನಾಳ, ಇಂದು ಜಾನಪದ ಕಲೆ ಕಣ್ಮರೆಯಾಗುತ್ತಿವೆ. ಹಿಂದೆ ಹಂತಿ ಹೊಡೆಯುವಾಗ ಹಂತಿ ಪದಗಳನ್ನು, ತೊಟ್ಟಿಲು ತೂಗುವಾಗ ಜೋಗುಳ ಪದ, ಜೋಳ ಬೀಸುವಾಗ ಬೀಸುವ ಪದ, ಮದುವೆ ಕಾರ್ಯಕ್ರಮಗಳಲ್ಲಿ ಸಾಂದರ್ಭಿಕ ಜಾನಪದ ಹಾಡು ಹಾಡುತ್ತಿದ್ದರು. ಇದೀಗ ಆಧುನಿಕ ಯಂತ್ರಗಳು ಬಂದ ಮೇಲೆ ಜಾನಪದ ಹಾಡುಗಳು ಕಣ್ಮರೆಯಾಗುತ್ತಿವೆ. ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಇದೇ ಕಲಾವಿದ ಜೀವನಸಾಬ್‌ ಬಿನ್ನಾಳ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈ ವೇಳೆ ಕೋವಿಡ್‌ ಕೇಂದ್ರದ ನೋಡಲ್‌ ಅ ಧಿಕಾರಿ ಆದಪ್ಪ ಸಾಲವಾಡಗಿ, ಯುವ ಕಾಂಗ್ರೆಸ್‌ ಮುಖಂಡ ಲಾಡ್ಲೆàಮಷಾಕ್‌ ದೋಟಿಹಾಳ, ಗ್ರಾಪಂ ಸದಸ್ಯರು, ಆರೋಗ್ಯ ಸಿಬ್ಬಂದಿ ಬಸವರಾಜ ಚೌಕಾವಿ, ವಸತಿ ನಿಲಯದ ಸಿಬ್ಬಂದಿ ಮಲ್ಲಪ್ಪ ಬಿರಾದಾರ, ಶಿರಗುಂಪಿ ಗ್ರಾಪಂ ಪಿಡಿಒ, ದೋಟಿಹಾಳ ಮತ್ತು ಕೇಸೂರು ಗ್ರಾಮದ ಮುಖಂಡರು, ಯುವಕರು, ವಸತಿ ನಿಲಯದ ಸಿಬ್ಬಂದಿ ಹಾಗೂ ಕೊರೊನಾ ಸೋಂಕಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next