Advertisement

100 ಗಂಟೆಗಳಲ್ಲಿ 10 ಲಕ್ಷ ಸೋಂಕಿತರು

10:12 AM Jul 19, 2020 | sudhir |

ನ್ಯೂಯಾರ್ಕ್‌: ದಿನೇ ದಿನೆ ಕೋವಿಡ್ ಸಂಖ್ಯೆ ಏರಿಕೆ ಯಾಗುತ್ತಿದ್ದು, ವಿಶ್ವದಲ್ಲಿ ಇದೇ ಮೊದಲ ಬಾರಿಗೆ 100 ಗಂಟೆಗಳ ಅವಧಿಯಲ್ಲಿ 10 ಲಕ್ಷ ಮಂದಿ ಸೋಂಕಿತ ರಾಗಿದ್ದಾರೆ. ಚೀನದಲ್ಲಿ ಜನವರಿ ಆರಂಭದಲ್ಲಿ ಮೊದಲ ಬಾರಿಗೆ ಕೋವಿಡ್ ವೈರಸ್‌ ಕಾಣಿಸಿ ಕೊಂಡಿತ್ತು. ಪ್ರಾರಂಭದಲ್ಲಿ ಜಾಗತಿಕವಾಗಿ 10 ಲಕ್ಷ ಪ್ರಕರಣಗಳು ತಲುಪಲು ಮೂರು ತಿಂಗಳು ಸಮಯ ತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಕೇವಲ ನಾಲ್ಕು ದಿನಗಳಲ್ಲಿ 10 ಲಕ್ಷ ಪ್ರಕರಣಗಳು ಕಂಡು ಬಂದಿವೆ. ಇದು ದಾಖಲೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1.4 ಕೋಟಿ ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಮೆರಿಕವೊಂದರಲ್ಲೇ ಕಳೆದ 24 ಗಂಟೆಗಳ ಅವಧಿಯಲ್ಲಿ 77,638 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next