ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ತಾಲೂಕಿನ ಸಾತನೂರು ಹೋಬಳಿಯ ಕಬ್ಬಾಳು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಒಬ್ಬರಲ್ಲಿ ಸೋಂಕುಬತ್ತೆಯಾಗಿತ್ತು. 3-4 ದಿನಗಳಲ್ಲಿ ಸುಮಾರು 15 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಓರ್ವ ಮೃತ ಪಟ್ಟಿದ್ದಾನೆ.
ಪಿಡಿಒ ಲೋಕೇಶ್ ಸೋಂಕಿನ ನಿಯಂತ್ರಣಕ್ಕೆ ಗ್ರಾಮವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ ಮುಖ್ಯ ರಸ್ತೆಯನ್ನು ಮೈಕ್ರೋ ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಿದ್ದಾರೆ. ಗ್ರಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ :ಕೋವಿಡ್: ಬಾಗಲಕೋಟೆಯಲ್ಲಿ ಶೂನ್ಯ ಪ್ರಕರಣ; ರಾಜ್ಯದಲ್ಲಿಂದು 3045 ಸೋಂಕಿತರು ಗುಣಮುಖ
130ಕ್ಕೂ ಹೆಚ್ಚು ಮಂದಿಯ ಸ್ವಾಬ್ ಟೆಸ್ಟ ವರದಿ ಬರಬೇಕಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಮನೆ ಮಾಡಿದೆ. ಕೋವಿಡ್ ಕರ್ಫ್ಯೂ ವಿಧಿಸಿದ ನಂತರ ಸೋಂಕು ಕಡಿಮೆಯಾಗಿತ್ತು. ಇದೀಗ ಕರ್ಫ್ಯೂ ಸಡಿಲಿಕೆ ನಂತರ ಮತ್ತೆ ಸೋಂಕು ಉಲ್ಬಣಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.