Advertisement

ಹುಬ್ಬಳ್ಳಿಯಲ್ಲಿ ಕೋವಿಡ್ ರಣಕೇಕೆ

01:15 PM Jul 04, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರ ಸಹ 38 ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 465ಕ್ಕೆ ಏರಿಕೆಯಾಗಿದೆ.

Advertisement

ಜೊತೆಗೆ 20 ಸೋಂಕಿತರು ಗುಣಮುಖವಾಗಿ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 216ಕ್ಕೆ ಏರಿಕೆ ಆಗಿದೆ. 241 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇನ್ನೂ 884 ಜನರ ಪ್ರಯೋಗಾಲಯದ ವರದಿ ಬರುವುದು ಬಾಕಿ ಇದೆ. ಶುಕ್ರವಾರ ಪತ್ತೆಯಾದ 38 ಜನ ಸೋಂಕಿತರಲ್ಲಿ 18 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆ ಆಗಬೇಕಿದೆ.

ಸಂಪರ್ಕ ಪತ್ತೆಗಾಗಿ ಹುಡುಕಾಟ: ಹುಬ್ಬಳ್ಳಿ ತಾಲೂಕಿನ ಭಂಡಿವಾಡದ 45 ವರ್ಷದ ಪುರುಷ (ಪಿ-18679), ಅದರಗುಂಚಿಯ 1 ವರ್ಷದ ಬಾಲಕ (ಪಿ-18682), ಹುಬ್ಬಳ್ಳಿಯ ವಿಜಯನಗರದ ವಡ್ಡರ ಓಣಿಯ 83 ವರ್ಷದ ವೃದ್ಧ (ಪಿ-18684), ಹುಬ್ಬಳ್ಳಿಯ ಮಂಟೂರ ರಸ್ತೆಯ ಮಿಲ್ಲತ್‌ ನಗರದ 39 ವರ್ಷದ ಪುರುಷ (ಪಿ-18686), ಹುಬ್ಬಳ್ಳಿಯ ಈಶ್ವರ ನಗರದ 4ನೇ ಕ್ರಾಸ್‌ನ 30 ವರ್ಷದ ಪುರುಷ (ಪಿ-18687), ಎಂ.ಡಿ. ಕಾಲೋನಿಯ ಯಲ್ಲಾಪೂರ ಓಣಿಯ 38 ವರ್ಷದ ಪುರುಷ (ಪಿ-18688), ದೊಡ್ಡಮನಿ ಕಾಲೋನಿಯ 1ನೇ ಕ್ರಾಸ್‌ನ 30 ವರ್ಷದ ಮಹಿಳೆ (ಪಿ-18689), ಪಿಂಜಾರ ಓಣಿಯ 33 ವರ್ಷದ ಪುರುಷ (ಪಿ-18692), ವಾರ್ಡ್‌ ನಂ.63 ರ ನೇಕಾರ ಓಣಿಯ 56 ವರ್ಷದ ಪುರುಷ (ಪಿ-18693), ಪಿಂಜಾರ ಓಣಿಯ ಅಕ್ಕಿಹೊಂಡದ 40 ವರ್ಷದ ಪುರುಷ (ಪಿ-18694), ಹುಬ್ಬಳ್ಳಿ ತಾಲೂಕಿನ ದೇವರ ಗುಡಿಹಾಳದ 49 ವರ್ಷದ ಮಹಿಳೆ (ಪಿ-18695), ಹಳೆಹುಬ್ಬಳ್ಳಿ ನಾರಾಯಣ ಸೋಫಾ ನಿವಾಸಿ 50 ವರ್ಷದ ಪುರುಷ (ಪಿ-18696), ಹುಬ್ಬಳ್ಳಿ ದೇಸಾಯಿ ಓಣಿಯ 42 ವರ್ಷದ ಪುರುಷ (ಪಿ-18697), ಹುಬ್ಬಳ್ಳಿ ಕೌಲಪೇಟ ಮೋಬಿನ್‌ ಪ್ಲಾಟ್‌ನ 48 ವರ್ಷದ ಪುರುಷ (ಪಿ- 18698), ಹುಬ್ಬಳ್ಳಿ ಯಲ್ಲಾಪುರ ಓಣಿಯ 22 ವರ್ಷದ ಪುರುಷ (ಪಿ-18699), ದೇಸಾಯಿ ಓಣಿ ನಿವಾಸಿ 18 ವರ್ಷದ ಯುವಕ (ಪಿ-18700), ಹುಬ್ಬಳ್ಳಿ ಗಣೇಶಪೇಟೆಯ ಬಿಂದರಗಿ ಓಣಿಯ 28 ವರ್ಷದ ಪುರುಷ (ಪಿ-18701), ಹುಬ್ಬಳ್ಳಿಅರಳಿಕಟ್ಟಿ ಓಣಿ ನಿವಾಸಿ 35 ವರ್ಷದ ಪುರುಷ (ಪಿ-18702), ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿಯ ಕಲ್ಲಾಪುರ ಓಣಿ ನಿವಾಸಿ 22 ವರ್ಷದ ಪುರುಷ (ಪಿ-18714) ಸೋಂಕು ಪತ್ತೆಯಾಗಿದೆ. ಈ ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಸಂಪರ್ಕದ ನಂಜು: ಪಿ-13475 ಸಂಪರ್ಕದಿಂದ ಹುಬ್ಬಳ್ಳಿಯ 27 ವರ್ಷದ ಪುರುಷ (ಪಿ-18680), ಪಿ-11401 ಸಂಪರ್ಕದಿಂದ ಹುಬ್ಬಳ್ಳಿಯ ನವನಗರದ 25 ವರ್ಷದ ಮಹಿಳೆ (ಪಿ-18683), ಪಿ-11406 ಸಂಪರ್ಕದಿಂದ ಹುಬ್ಬಳ್ಳಿ ತಾಲೂಕಿನ ಛಬ್ಬಿಯ 40 ವರ್ಷದ ಪುರುಷ (ಪಿ-18691), ಪಿ-12127 ಸಂಪರ್ಕದಿಂದ ಹುಬ್ಬಳ್ಳಿ ಕೃಷಿ ಕಾರ್ಮಿಕರ ನಗರ ನಿವಾಸಿ 58 ವರ್ಷದ ಪುರುಷ (ಪಿ-18706), ಪಿ-13478 ಸಂಪರ್ಕದಿಂದ ಹುಬ್ಬಳ್ಳಿ ಗಣೇಶ ಪೇಟೆ ಚೋಟಿ ಮಸೀದಿ ಹತ್ತಿರ ನಿವಾಸಿ 26 ವರ್ಷದ ಪುರುಷ (ಪಿ-18711), ಪಿ-15610 ಸಂಪರ್ಕದಿಂದ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗಣೇಶ ನಗರ ನಿವಾಸಿ 62 ವರ್ಷದ ಪುರುಷ (ಪಿ-18708), ಪಿ-12127 ಸಂಪರ್ಕದಿಂದ ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರ ನಿವಾಸಿ 57 ವರ್ಷದ ಮಹಿಳೆ (ಪಿ-18709)ಗೆ ಸೋಂಕು ಹರಡುವಂತಾಗಿದೆ.

ಅಂತರ್‌ ಜಿಲ್ಲಾ ಪ್ರವಾಸ ನಂಟು: ದಾವಣಗೆರೆ ಮತ್ತು ಕಲಬುರ್ಗಿ ಜಿಲ್ಲಾ ಪ್ರಯಾಣ ಹಿನ್ನೆಲೆಯ ಹುಬ್ಬಳ್ಳಿ ವಿದ್ಯಾನಗರದ 25 ವರ್ಷದ ಪುರುಷ (ಪಿ-18681), ಬಾಗಲಕೋಟೆ ಜಿಲ್ಲಾ ಪ್ರಯಾಣದ ಧಾರವಾಡದ ಶಿವಗಿರಿಯ ಶಿವಾಲಯದ ಹತ್ತಿರದ ನಿವಾಸಿ 22 ವರ್ಷದ ಯುವಕನಲ್ಲಿ (ಪಿ-18703) ಸೋಂಕು ಪತ್ತೆಯಾಗಿದೆ.

Advertisement

ತಪಾಸಣೆಯಲ್ಲಿ ದೃಢ: ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ ಮೂರು ಸಾವಿರ ಮಠದ ಹಿಂಭಾಗದ ಗುರುಸಿದ್ದೇಶ್ವರ ನಗರದ 38 ವರ್ಷದ ಪುರುಷ (ಪಿ-18685), ಹಳೇ ಹುಬ್ಬಳ್ಳಿಯ ಇಸ್ಲಾಂಪುರದ ಎನ್‌.ಎ. ನಗರದ 23 ವರ್ಷದ ಪುರುಷ (ಪಿ-18690), ಹುಬ್ಬಳ್ಳಿ ಮಂಟೂರ ರಸ್ತೆ ಗ್ಯಾಲಕ್ಸಿ ಅಪಾರ್ಟ್‌ ಮೆಂಟ್‌ ನಿವಾಸಿ 45 ವರ್ಷದ ಮಹಿಳೆ (ಪಿ-18704), ಹುಬ್ಬಳ್ಳಿ ಅಂಚಟಗೇರಿ ಓಣಿ ಎಂ.ವಿ. ಗಲ್ಲಿ ನಿವಾಸಿ 42 ವರ್ಷದ ಪುರುಷ (ಪಿ-18705), ಧಾರವಾಡದ ನವಲೂರು ಭಟ್ಟರ ಓಣಿ ನಿವಾಸಿ 2 ವರ್ಷದ ಮಗು (ಪಿ-18707), ಹುಬ್ಬಳ್ಳಿ ಗೋಪನಕೊಪ್ಪ ಗವಿಸಿದ್ದೇಶ್ವರ ಕಾಲೋನಿ ನಿವಾಸಿ 8 ತಿಂಗಳ ಮಗು (ಪಿ-18710) ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವಲಗುಂದ ತಾಲೂಕಿನ ಮೊರಬ ಗ್ರಾಮದ 50 ವರ್ಷದ ಪುರುಷ (ಪಿ- 18712), ಶಿರಕೋಳ ಗ್ರಾಮದ 34 ವರ್ಷದ ಪುರುಷ (ಪಿ-18713), ಸವದತ್ತಿ ತಾಲೂಕಿನ ಯಡಹಳ್ಳಿ ನಿವಾಸಿ 49 ವರ್ಷದ ಪುರುಷ (ಪಿ-18715), ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ನಿವಾಸಿ 55 ವರ್ಷದ ಪುರುಷ (ಪಿ-18716)ನಲ್ಲಿ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next