Advertisement

ಕೋವಿಡ್: ದ.ಕ.: 3 ಸಾವು, 374 ಪಾಸಿಟಿವ್‌; ಉಡುಪಿ: 7 ಸಾವು, 247 ಪಾಸಿಟಿವ್‌

02:34 AM Sep 09, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 374 ಮಂದಿಗೆ ಕೋವಿಡ್ ದೃಢಪಟ್ಟಿದೆ. 232ಮಂದಿ ಗುಣಮುಖರಾಗಿ ದ್ದಾರೆ. ಮೂವರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 412ಕ್ಕೇರಿದೆ.  236 ಮಂದಿ ಇನ್‌ಫ್ಲೂಯೆನ್ಜಾ ಲೈಕ್‌ ಇಲ್‌ನೆಸ್‌, 18 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ತಗಲಿದೆ. 120 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಪೀಡಿತರಲ್ಲಿ 219 ಮಂದಿ ಮಂಗಳೂರು, 61 ಮಂದಿ ಬಂಟ್ವಾಳ, 36 ಮಂದಿ ಪುತ್ತೂರು, 6 ಮಂದಿ ಸುಳ್ಯ, 32 ಮಂದಿ ಬೆಳ್ತಂಗಡಿ ಹಾಗೂ 20 ಮಂದಿ ಹೊರ ಜಿಲ್ಲೆಯವರು.

Advertisement

164 ಮಂದಿ ಪುರುಷರು, 90 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 60 ಮಂದಿ ಪುರುಷರು, 60 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಪುತ್ತೂರಿನ ಓರ್ವ ಹಾಗೂ ಇಬ್ಬರು ಇತರ ಜಿಲ್ಲೆಯವರು.

ಮೂಲ್ಕಿ: 13 ಪ್ರಕರಣ
ಮೂಲ್ಕಿ: ತಾಲೂಕು ಕಚೇರಿ ವ್ಯಾಪ್ತಿಯಲ್ಲಿ ಮಂಗಳವಾರ 13 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಹಳೆಯಂಗಡಿ ಸಂತೆ ಕಟ್ಟೆ ಬಳಿಯ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು, ಮೂಲ್ಕಿ ಕೊಳಚಿಕಂಬಳ ರಸ್ತೆಯ ಇಬ್ಬರು ಪುರುಷರು, ಕಟೀಲು ಶೇರಿ ಗುರಿಯ ಇಬ್ಬರು ಮಹಿಳೆಯರು ಮತ್ತು ಪುರುಷ, ಕೆಮ್ರಾಲ್‌ ಪಕ್ಷಿಕೆರೆಯ ಇಬ್ಬರು ಪುರುಷರು ಬಾಧಿತರು.

ಉಡುಪಿ: 7 ಸಾವು, 247 ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 247 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಕುಂದಾಪುರ ತಾಲೂಕಿನ ಮಹಿಳೆ, ಉಡುಪಿಯ ಐವರು ಪುರುಷರು, ಒರ್ವ ಮಹಿಳೆ ಸಹಿತ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ದೃಢಪಟ್ಟವರಲ್ಲಿ ಉಡುಪಿ ತಾಲೂಕಿನ 115, ಕುಂದಾಪುರದ 83, ಕಾರ್ಕಳದ 45, ಅನ್ಯ ಜಿಲ್ಲೆಯ 4 ಮಂದಿ ಸೇರಿದ್ದಾರೆ. ಸೋಂಕು ಲಕ್ಷಣವಿರುವ 82 ಪುರುಷರು, 48 ಮಹಿಳೆಯರು, ಸೋಂಕು ಲಕ್ಷಣ ಇಲ್ಲದ 61 ಪುರುಷರು, 57 ಮಹಿಳೆಯರು ಇದರಲ್ಲಿ ಸೇರಿದ್ದಾರೆ. ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಇತರ ಆಸ್ಪತ್ರೆಗಳಲ್ಲಿ 77, ಹೋಂ ಐಸೋಲೇಷನ್‌ನಲ್ಲಿ 170 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

1,424 ಮಾದರಿ ಸಂಗ್ರಹ
ಸೋಂಕು ಲಕ್ಷಣವುಳ್ಳ 1146, ಸೋಂಕಿತರ ಸಂಪರ್ಕವಿರುವ 134, ಸುಸ್ತು ಹಾಗೂ ಇನ್ನಿತರ ಸಮಸ್ಯೆಯುಳ್ಳ 80, ಹಾಟ್‌ಸ್ಪಾಟ್‌ ಸಂಪರ್ಕದ 64 ಸಹಿತ ಒಟ್ಟು 1424 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 1,057 ವರದಿಗಳು ನೆಗೆಟಿವ್‌ ಬಂದಿವೆ. ಆಸ್ಪತ್ರೆಯಲ್ಲಿದ್ದ 77 ಮಂದಿ, ಹೋಂ ಐಸೊ ಲೇಶನ್‌ನಲ್ಲಿದ್ದ 101 ಸಹಿತ ಒಟ್ಟು 178 ಮಂದಿ ಗುಣಮುಖರಾಗಿದ್ದಾರೆ.

Advertisement

ಕಾಸರಗೋಡು: 166 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 166 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 163 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ ಇಬ್ಬರು ಹಾಗೂ ವಿದೇಶದಿಂದ ಬಂದ ಒಬ್ಬರು ಬಾಧಿತರಲ್ಲಿದ್ದಾರೆ. 92 ಮಂದಿ ಗುಣಮುಖರಾಗಿದ್ದಾರೆ.
ಚೆಮ್ನಾಡ್‌-17, ಉದುಮ-6, ಈಸ್ಟ್‌ ಎಳೇರಿ-2, ಅಜಾನೂರು-14, ಪಿಲಿಕೋಡ್‌-23, ಚೆಂಗಳ-22, ಮೊಗ್ರಾಲ್‌ಪುತ್ತೂರು-1, ನೀಲೇಶ್ವರ-4, ಕುಂಬಳೆ-4, ಕಾಂಞಂಗಾಡ್‌-12, ಎಣ್ಮಕಜೆ-3, ಮಧೂರು-3, ಬದಿಯಡ್ಕ-3, ತೃಕ್ಕರಿಪುರ-6, ಮಡಿಕೈ-2, ಕಾಸರಗೋಡು-4, ಮಂಜೇಶ್ವರ-8, ಪಡನ್ನ-3, ಕಿನಾನೂರು-1, ಕೋಡೋಂ ಬೇಳೂರು-5, ಪುಲ್ಲೂರು-10, ಪಳ್ಳಿಕೆರೆ-1, ಪುತ್ತಿಗೆ-7, ಪೈವಳಿಕೆ-3, ಕಳ್ಳಾರ್‌-1, ಕಾರಡ್ಕ-1 ಎಂಬಂತೆ ರೋಗ ಬಾಧಿಸಿದೆ.

ಕೇರಳದಲ್ಲಿ 3,026 ಪ್ರಕರಣ
ಕೇರಳದಲ್ಲಿ ಮಂಗಳವಾರ 3,026 ಮಂದಿಗೆ ಸೋಂಕು ದೃಢವಾಗಿದೆ. ರೋಗ ಬಾಧಿತರಲ್ಲಿ 49 ಮಂದಿ ವಿದೇಶದಿಂದ ಮತ್ತು 163 ಮಂದಿ ಇತರ ರಾಜ್ಯಗಳಿಂದ ಬಂದವರು. 2,723 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 89 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಇಬ್ಬರು ಸಿಐಎಸ್‌ಎಫ್‌ ಸಿಬಂದಿಯನ್ನು ಬಾಧಿಸಿದೆ. 1,862 ಮಂದಿ ಗುಣಮುಖರಾಗಿದ್ದಾರೆ.

ಕೊಡಗು ಜಿಲ್ಲೆ: ಓರ್ವ ಸಾವು, 24 ಪಾಸಿಟಿವ್‌
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ಗೆ ಮತ್ತೂಂದು ಸಾವು ಸಂಭವಿಸಿದೆ. 24 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಗೋಣಿಕೊಪ್ಪ ನಿವಾಸಿ 70 ವರ್ಷದ ಪುರುಷ ಮೃತಪಟ್ಟವರು. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಸೆ. 2ರಂದು ಕೋವಿಡ್‌ ಸೋಂಕು ದೃಢಪಟ್ಟಿತ್ತು. ಮಡಿಕೇರಿಯ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಮೃತಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next