Advertisement

ಶಿವಮೊಗ್ಗದಲ್ಲಿ ಕೋವಿಡ್ ಬಲೆಗೆ ಬಲಿಯಾದ 12 ಮಂದಿ : 765 ಮಂದಿಗೆ ತಟ್ಟಿದ ಸೋಂಕು

08:28 PM May 02, 2021 | Suhan S |

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕೋವಿಡ್ ಸ್ಪೋಟಗೊಂಡಿದ್ದು ಬರೋಬ್ಬರಿ 765 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಜಿಲ್ಲೆಯಲ್ಲಿಂದು ಸೋಂಕಿಗೆ 12 ಜನರು ಸಾವನ್ನಪ್ಪಿದ್ದಾರೆ.

Advertisement

ಇಂದು 422 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ‌ ಸಕ್ರೀಯ ಪ್ರಕರಣಗಳ ಸಂಖ್ಯೆ 3170 ಕ್ಕೆ ಏರಿಕೆಯಾಗಿದೆ. 765 ಪ್ರಕರಣಗಳ ಪೈಕಿ 32 ವಿದ್ಯಾರ್ಥಿಗಳು ಹಾಗೂ 11 ಸಿಬ್ಬಂದಿಗೂ ಕೋವಿಡ್ ಸೋಂಕು.

ಇದನ್ನೂ ಓದಿ : ರಾಜ್ಯದಲ್ಲಿಂದು 37733 ಕೋವಿಡ್ ಪ್ರಕರಣ : 217 ಮಂದಿ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿಗೆ 398 ಜನರು ಬಲಿಯಾಗಿದ್ದಾರೆ.

ಕರ್ನಾಟಕದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 37733 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 217 ಮಂದಿ ಸೋಂಕಿನ ಬಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next