Advertisement

ಒಂದೇ ಕುಟುಂಬದ ಐವರಲ್ಲಿ ಕೋವಿಡ್ ಪತ್ತೆ

02:48 PM Mar 14, 2021 | Team Udayavani |

ರಾಯಬಾಗ: ತಾಲೂಕಿನ ಬಾವನ ಸೌಂದತ್ತಿಯ ಒಂದೇ ಕುಟುಂಬದ ಐವರಲ್ಲಿಕೋವಿಡ್ ಪಾಸಿಟಿವ್‌ ಪತ್ತೆ ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆರೋಗ್ಯ ಅಧಿಕಾರಿಗಳ ತಂಡ ಜನರನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಿದೆ.

Advertisement

ಗ್ರಾಮದ 97 ವರ್ಷದ ಅಜ್ಜ ಮೃತ ಪಟ್ಟಿದ್ದು, ಮರಣದ ನಂತರ ಕೋವಿಡ್ಟೆಸ್ಟ್‌ ಮಾಡಿಸಿದಾಗ ಅದೇ ಕುಟುಂಬದ ಐವರಲ್ಲಿ ಕೋವಿಡ್ ಪಾಸಿಟಿವ್‌ ಪತ್ತೆ ಆಗಿದೆ. ಇದರಿಂದ ಗ್ರಾಮಸ್ಥರು ಹಾಗೂ ಮೃತಪಟ್ಟ ಅಜ್ಜನ 48 ಜನ ಇರುವ ಅವಿಭಕ್ತ ಕುಟುಂಬದವರು ಆತಂಕ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ ಸಂಬಂಧಿಕರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಕೋವಿಡ್ ಬಂದಿರುವ ಶಂಕೆ ವ್ಯಕ್ತವಾಗಿದೆ.

ಅಜ್ಜನ ಸಾವಿನ ನಂತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳುವುದಕ್ಕೆ ಗ್ರಾಮಸ್ಥರು ಭೇಟಿ ನೀಡಿದ್ದರು. ಆದರೆ ಇದೀಗ ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆ ಆದ ಹಿನ್ನೆಲೆಯಲ್ಲಿ ಎಲ್ಲರೂ ಆತಂಕ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಜನರು ಸ್ವಯಂಪ್ರೇರಿತವಾಗಿ ಬಂದು ಟೆಸ್ಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಈಗಾಗಲೆ 361 ಜನರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ರ್ಯಾಪಿಡ್‌ ಟೆಸ್ಟ್‌ನಲ್ಲಿ ಇಂದು ಎರಡು ಪ್ರಕರಣಗಳು ಪತ್ತೆ ಆದ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ತಾಲೂಕಾ ವೈದ್ಯಾಧಿಕಾರಿ ಎಸ್‌.ಎಸ್‌. ಬಾನೆ, ಶಂಕರ ಪಾಟೀಲ, ಸುರೇಶ ಪಾಟೀಲ, ಡಾ| ಗಜಾನನ್‌ ಕುಲಕರ್ಣಿ, ಡಾ| ಸಂದೀಪಚೌಗಲಾ, ಸಿಡಿಪಿಒ ಸಂತೋಷಕುಮಾರಕಾಂಬಳೆ, ಡಾ| ತೇಜಸ್ವೀನಿ, ಡಾ| ಪ್ರಿಯಾಂಕ, ಡಾ| ಸುರೇಶ ಪಾಟೀಲ ಸೇರಿ ಅನೇಕರು ಉಪಸ್ಥಿತರಿದ್ದರು.

Advertisement

ಒಂದೇ ಕುಟುಂಬದಲ್ಲಿ ಐವರಿಗೆ ಕೋವಿಡ್ ಪಾಸಿಟಿವ್‌ ಬಂದ ಮೇಲೆ ನಾವು ತುರ್ತಾಗಿ ಎಲ್ಲರನ್ನು ತಪಾಸಣೆ ಮಾಡುತ್ತಿದ್ದೇವೆ. ಅಲ್ಲದೇ ಅವಿಭಕ್ತ ಕುಟುಂಬ ಇರುವುದರಿಂದ ಹೋಮ್‌ ಕ್ವಾರಂಟೈನ್‌ ಮಾಡಿದ್ದೇವೆ. ಪರೀಕ್ಷಾ ಕಾರ್ಯ ರವಿವಾರವೂ ಮುಂದುವರಿಯಲಿದೆ. –ಮೋಹನ್‌ ಭಸ್ಮೆ, ತಹಶೀಲ್ದಾರ್‌, ರಾಯಭಾಗ

ಕೋವಿಡ್ ಟೆಸ್ಟ್‌ ಕಾರ್ಯ ಗ್ರಾಮದಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬರೂ ಟೆಸ್ಟ್‌ ಮಾಡಿಕೊಳ್ಳಬೇಕು. ಯಾವುದೇ ರೀತಿಯಾಗಿ ಭಯಭೀತರಾಗಬೇಡಿ. ಈಗಾಗಲೇ ಗ್ರಾಮದಲ್ಲಿ ಐದು ತಂಡ ರಚಿಸಿ ತಪಾಸಣೆ ಮಾಡಲಾಗುತ್ತಿದೆ. – ಎಸ್‌.ಎಸ್‌. ಗಡೇದ, ಎಡಿಎಚ್‌ಒ, ಚಿಕ್ಕೋಡಿ

Advertisement

Udayavani is now on Telegram. Click here to join our channel and stay updated with the latest news.

Next