Advertisement

ಜಿಲ್ಲೆಯಲ್ಲಿ 2,013 ಮಕ್ಕಳಿಗೆ ಕೊರೊನಾ: ಡಿಎಚ್‌ಒ

01:00 PM Jan 29, 2022 | Team Udayavani |

ಮೈಸೂರು: ಜಿಲ್ಲೆಯಲ್ಲಿ 2,013 ಮಕ್ಕಳು ಸೋಂಕಿತರಿದ್ದಾರೆ. 14 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 40 ಮಕ್ಕಳು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದರೆ 1,959 ಮಕ್ಕಳು ಹೋಂಐಸೋಲೇಷನ್‌ನಲ್ಲಿದ್ದಾರೆ ಎಂದು ಡಿಎಚ್‌ಒ ಡಾ.ಕೆ.ಎಚ್‌ .ಪ್ರಸಾದ್‌ ವಿವರಿಸಿದರು.

Advertisement

ಜಿಲ್ಲೆಯಲ್ಲಿ ದಿನದಿನವೂ ಮಕ್ಕಳಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಚ್‌.ಪ್ರಸಾದ್‌ ಶುಕ್ರವಾರ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶಾಲೆ ಮಕ್ಕಳಲ್ಲಿ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿವೆ. ಕೊರೊನಾ ಸೋಂಕಿಗೆ ತುತ್ತಾದ ಮಗುವಿನ ಶಾಲೆಯನ್ನು ಐದು ದಿನಗಳ ಕಾಲ ಮುಚ್ಚಲು ಸರ್ಕಾರದ ಗೈಡ್‌ ಲೈನ್‌ ಇದೆ. ನಿಯಮಗಳ ಪಾಲನೆ ಜತೆಗೆ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿ ಮುಂಜಾಗ್ರತೆ ಬಗ್ಗೆ ತಿಳಿವಳಿಕೆ ನೀಡಿರುವುದಾಗಿ ಹೇಳಿದರು.

ಆರೋಗ್ಯಾಧಿಕಾರಿಗಳ ತಂಡದೊಂದಿಗೆ ನಗರದ ವಿಜಯನಗರ ಎನ್‌ಪಿಎಸ್‌ ಮತ್ತು ಸರಸ್ವತಿಪುರಂ ರೋಟರಿ ಪಶ್ಚಿಮ ಶಾಲೆಗಳಿಗೆ ಭೇಟಿ ನೀಡಿದ ಡಿಎಚ್‌ಒ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯ ವಿಚಾರಿಸಿದರು. ಶಾಲೆಗಳಲ್ಲಿ ಕೈಗೊಂಡಿರುವ ಕೊರೊನಾ ನಿಯಮ ಪಾಲನೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಶಾಲೆಗಳಿಗೆ ಭೇಟಿ ನೀಡಿದ ವೈದ್ಯರ ತಂಡ ಶಾಲೆ ಆಡಳಿತ ಮಂಡಳಿಗೆ ಕೊರೊನಾ ನಿಯಮ ಪಾಲನೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಾಸ್ಕ್ ಯಾವ ರೀತಿ ಧರಿಸಬೇಕು. ಜ್ವರ ಪರೀಕ್ಷಿಸಬೇಕು. ದಿನಬಿಟ್ಟು ದಿನ ಸ್ಯಾನಿಟೈಸ್‌ ಮಾಡಬೇಕು. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಯಾವ ರೀತಿ ಮನವರಿಕೆ ಮಾಡಬೇಕು ಎಂದು ತಿಳಿಸಿದರು. ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮೈಸೂರು ನಗರ ಮತ್ತು ತಾಲೂಕು ವ್ಯಾಪ್ತಿಯ ಶಾಲೆಗಳ ಭೌತಿಕ ತರಗತಿಗಳನ್ನು ರದ್ದು ಮಾಡಿದ್ದರು. ವಸತಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next