Advertisement

ತಿಂಗಳ ಮೊದಲ 4 ದಿನದಲ್ಲಿ 74 ಸಾವಿರ ಪ್ರಕರಣ

05:56 PM Sep 07, 2020 | Suhan S |

ಮುಂಬಯಿ, ಸೆ. 6: ಕೋವಿಡ್‌ ಪ್ರಕರಣಗಳಲ್ಲಿ ಮಹಾರಾಷ್ಟ್ರವು ಸೆಪ್ಟಂಬರ್‌ ತಿಂಗಳ ಮೊದಲ ನಾಲ್ಕು ದಿನಗಳಲ್ಲಿ 74 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ವರದಿ ಮಾಡಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ಸೆ. 1, 2 ಮತ್ತು 3ರಂದು ಮಹಾರಾಷ್ಟ್ರದಲ್ಲಿ ಕ್ರಮವಾಗಿ 15,765, 17,433ಮತ್ತು 18,105 ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಇಲಾಖೆಯ ನಿದ್ದೆಗೆಡಿಸಿದೆ.

Advertisement

ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಪ್ರಕರಣಗಳು : ರಾಜ್ಯದ ಹಾಟ್‌ಸ್ಪಾಟ್‌ಗಳಲ್ಲಿ ಪ್ರಕರಣ ಹೆಚ್ಚಳವಾಗಿದ್ದು, ಇದರ ಜತೆ ಗ್ರಾಮೀಣ ಪ್ರದೇಶಗಳಲ್ಲಿ ಗಮನಾರ್ಹ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಜೂನ್‌ 3ರಂದು, ರಾಜ್ಯವು ತನ್ನ ಮಿಷನ್‌ ಬಿಗಿನ್‌ ಎಗೇನ್‌ ಯೋಜನೆಯಡಿಯಲ್ಲಿ ಹಂತ ಹಂತವಾಗಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದಾಗ, ಹೆಚ್ಚಿನ ಪ್ರಕರಣಗಳು ನಗರಗಳಿಂದ ವರದಿಯಾಗಿದ್ದವು. ಮುಂಬಯಿ, ಥಾಣೆ, ನವಿಮುಂಬಯಿ, ಕಲ್ಯಾಣ್‌-ಡೊಂಬಿವಲಿ, ಉಲ್ಲಾಸ್‌ನಗರ, ಭಿವಂಡಿ-ನಿಜಾಂಪುರ, ಮೀರಾ-ಭಯಾಂದರ್‌, ವಸಾಯಿ-ವಿರಾರ್‌, ಪುಣೆ, ಸೋಲಾಪುರ, ಔರಂಗಾಬಾದ್‌, ನಾಸಿಕ್‌, ಮಾಲೆಗಾಂವ್‌, ಧುಲೆ, ಜಲ್ಗಾಂವ್‌, ಅಕೋಲಾ, ಅಮಾಲಾಇನ್ನಿತರ ನಗರಗಳಿಂದ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದವು.

ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯ ದುರ್ಬಲ : ಆರೋಗ್ಯ ಮೂಲಸೌಕರ್ಯ ದುರ್ಬಲವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡಿದ್ದು, ಜನರಲ್ಲಿ ಜಾಗೃತಿ ಮೂಡಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ| ಸಂಜಯ್‌ ಪ್ಯಾಟಿವಾರ್‌ ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡಿರುವುದರಿಂದ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ಸ್ಥಳಗಳನ್ನು ಪಟ್ಟಿಗೆ ಸೇರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಮೂಲಸೌಕರ್ಯ ಇನ್ನೂ ದುರ್ಬಲವಾಗಿದ್ದು, ರೋಗದ ಗಂಭೀರತೆಯ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ ಎಂದು ಪಟಿವಾರ್‌ ಹೇಳಿದ್ದಾರೆ.

ದೈನಂದಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಮತ್ತು ವಿಶ್ಲೇಷಿಸುವಲ್ಲಿ ರಾಜ್ಯ ಸರಕಾರವು ವೈದ್ಯಕೀಯ ಕಾಲೇಜುಗಳನ್ನು ಸಹ ಒಳಗೊಳ್ಳಬೇಕು ಎಂದುಹೇಳಿದ ಅವರು, ಪ್ರತಿ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವನ್ನು ಜಿಲ್ಲೆಗೆ ನಿಯೋಜಿಸಿ ಅವರು ಪರಿಸ್ಥಿತಿಯನ್ನು ವಿಶ್ಲೇಷಿಸುವಂತೆ ಮಾಡಬೇಕು. ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಮತ್ತು ವಿಷಯಗಳನ್ನು ನಿಯಂತ್ರಣಕ್ಕೆ ತರಬಹುದು ಎಂದು ಸಲಹೆ ನೀಡಿದ್ದಾರೆ.

ನನ್ನ ಮನೆ-ನನ್ನ ಕುಟುಂಬ ಮನೆ ಮನೆ ಸಮೀಕ್ಷೆ  : ಈ ಮಧ್ಯೆ ಸೆಪ್ಟಂಬರ್‌ 15ರಿಂದ ನನ್ನಕುಟುಂಬ, ನನ್ನ ಜವಾಬ್ದಾರಿ ಮನೆ-ಮನೆಗೆ ಸಮೀಕ್ಷೆಯನ್ನು ಪ್ರಾರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ತಂಡ ಪ್ರತಿಯೊಬ್ಬ ವ್ಯಕ್ತಿಯನ್ನು ಪರೀಕ್ಷಿಸುತ್ತದೆ ಮತ್ತು ಸೋಂಕಿತರಿಗೆ ಲಭ್ಯವಿರುವ ಸೇವೆಗಳನ್ನು ಸೂಚಿಸುತ್ತಾರೆ.

Advertisement

2.25 ಕೋಟಿ ಕುಟುಂಬಗಳ ಸಮೀಕ್ಷೆ : ಸಮೀಕ್ಷೆಯ ಸಂದರ್ಭ ರಾಜ್ಯವು ತಿಂಗಳಿಗೆ ಎರಡು ಬಾರಿ 2.25 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಲಿದೆ. ಮೊದಲ ಹಂತವನ್ನು ಸೆಪ್ಟಂಬರ್‌ 15 ಮತ್ತು ಅಕ್ಟೋಬರ್‌ 10ರ ನಡುವೆ ಮತ್ತು ಎರಡನೇ ಹಂತವನ್ನು ಅಕ್ಟೋಬರ್‌  12ರಿಂದ ಅಕ್ಟೋಬರ್‌ 24ರ ವರೆಗೆ ನಡೆಸಲಾಗುವುದು. ಈ ಸಮೀಕ್ಷೆಯು ಎಲ್ಲ ನಾಗರಿಕರ ಡೇಟಾವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಇದು ರಾಜ್ಯಕ್ಕೆ ಕೋವಿಡ್‌ ಸಾವುಗಳನ್ನು ತಗ್ಗಿಸಲು ಸಾಧ್ಯವಾಗುತ್ತದೆ. ಸಮೀಕ್ಷೆಯ ಬಗ್ಗೆ ಪ್ರಸ್ತುತಿಯನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಶುಕ್ರವಾರ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next