Advertisement

ಕೋವಿಡ್ ನಿಯಂತ್ರಣ ಗಡಿ ದಾಟಿದ ದಕ್ಷಿಣ ಕನ್ನಡ

12:15 AM Aug 02, 2021 | Team Udayavani |

ಬೆಂಗಳೂರು: ಒಂದು ವಾರದಿಂದ ದಕ್ಷಿಣ ಕನ್ನಡ, ಉಡುಪಿ ಸಹಿತ ಗಡಿ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಶೇ. 5 ಆಸುಪಾಸಿಗೆ ಹೆಚ್ಚಳವಾಗಿದೆ. ದಕ್ಷಿಣ ಕನ್ನಡ ದಲ್ಲಿ ಪಾಸಿಟಿವಿಟಿ ದರ ಶೇ. 5ರ ಗಡಿ ದಾಟಿದೆ.

Advertisement

ಜುಲೈ ಕೊನೆಯ ವಾರ ರಾಜ್ಯದಲ್ಲಿ ಸರಾಸರಿ ಶೇ. 1.42ರಷ್ಟು ಪಾಸಿಟಿವಿಟಿ ದರ ಇತ್ತು. ಈ ಅವಧಿಯಲ್ಲಿ ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರ ಶೇ. 5.64, ಚಿಕ್ಕ ಮಗಳೂರಿನಲ್ಲಿ ಶೇ. 4.82, ಕೊಡಗಿನಲ್ಲಿ ಶೇ. 4.69, ಉಡುಪಿಯಲ್ಲಿ ಶೇ. 4.27ರಷ್ಟಿತ್ತು. ಜುಲೈ 3ನೇ ವಾರದಲ್ಲಿ ಪಾಸಿಟಿ ವಿಟಿ ದರ ಕೊಡಗಿನಲ್ಲಿ ಶೇ. 3.6, ಉಡುಪಿಯಲ್ಲಿ ಶೇ. 2.9, ದಕ್ಷಿಣ ಕನ್ನಡದಲ್ಲಿ ಶೇ. 3.6ರಷ್ಟಿತ್ತು.

ತಿಂಗಳ ಬಳಿಕ ನಿಯಂತ್ರಣ ತಪ್ಪಿತು :

ಕೊರೊನಾ ತಜ್ಞರ ಪ್ರಕಾರ ಒಂದು ಪ್ರದೇಶದಲ್ಲಿ ಸೊಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇದ್ದರೆ ಅಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ. ಹೀಗಾಗಿ ಅನ್‌ಲಾಕ್‌ ಸಂದರ್ಭದಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಬಂದ ಜಿಲ್ಲೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಸದ್ಯ ದಕ್ಷಿಣ ಕನ್ನಡದಲ್ಲಿ ಒಂದೇ ವಾರದಲ್ಲಿ ಪಾಸಿಟಿವಿಟಿ ದರ ಶೇ. 2ರಷ್ಟು ಏರಿದೆ.

ಅರ್ಧದಷ್ಟು ಜಿಲ್ಲೆಗಳಲ್ಲಿ ಶೇ. 1ಕ್ಕಿಂತ ಕಡಿಮೆ :

Advertisement

ಕಳೆದ ವಾರ ಹಾಸನ, ಶಿವಮೊಗ್ಗ, ಚಾಮರಾಜ ನಗರ, ಮೈಸೂರು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 2 ಆಸುಪಾಸಿನಲ್ಲಿತ್ತು. 8 ಜಿಲ್ಲೆಗಳು ಶೇ. 1, 15 ಜಿಲ್ಲೆಗಳು ಶೇ. 1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಹೊಂದಿದ್ದವು.

ಬೆಂಗಳೂರಿಗಿಂತ ದ.ಕ.ದಲ್ಲಿ ಹೆಚ್ಚು :

ರವಿವಾರ ದಕ್ಷಿಣ ಕನ್ನಡದಲ್ಲಿ ಬೆಂಗಳೂರಿ ಗಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ವರದಿ ಯಾಗಿವೆ. ಒಂದು ವಾರದ ಅವಧಿ ಯಲ್ಲಿ ಬೆಂಗಳೂರಿನಲ್ಲಿ 2,744 ಮಂದಿಗೆ, ದಕ್ಷಿಣ ಕನ್ನಡದಲ್ಲಿ 2,430 ಮಂದಿಗೆ ಸೋಂಕು ತಗಲಿದೆ. ಮೈಸೂರು ಮತ್ತು ಉಡುಪಿಯಲ್ಲಿ ಒಂದು ಸಾವಿರದ ಆಸುಪಾಸಿನಲ್ಲಿ ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳು ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡದಲ್ಲಿ 2,943 ಇದ್ದು, ಸೋಮವಾರ ಮೂರು ಸಾವಿರಕ್ಕೆ ಹೆಚ್ಚುವ ಸಾಧ್ಯತೆಗಳಿವೆ. ಈ ಮೂಲಕ ರಾಜಧಾನಿಯಷ್ಟೇ ದಕ್ಷಿಣ ಕನ್ನಡವೂ ಸೋಂಕಿನ ಅಪಾಯದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next