Advertisement

57 ಕೋವಿಡ್‌ ಪ್ರಕರಣ ದೃಢ; ಕಾರವಾರದಲ್ಲೇ ಅಧಿಕ

01:41 PM Aug 05, 2020 | Suhan S |

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ 57 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕಾರವಾರದಲ್ಲಿ 21, ಕುಮಟಾದಲ್ಲಿ ಮೂವರು, ಭಟ್ಕಳ, ಯಲ್ಲಾಪುರದಲ್ಲಿ ತಲಾ ನಾಲ್ವರು, ಶಿರಸಿಯಲ್ಲಿ ಐವರು, ಮುಂಡಗೋಡದಲ್ಲಿ 10, ಹಳಿಯಾಳದಲ್ಲಿ 9 ಹಾಗೂ ಜೋಯಿಡಾದ ಓರ್ವನಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ.

Advertisement

ಮಂಗಳವಾರ ಒಬ್ಬರೂ ಗುಣಮುಖರಾಗಿಲ್ಲ. ಈತನಕ ಜಿಲ್ಲೆಯ 2,284 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,554 ಮಂದಿ ಗುಣಮುಖರಾಗಿದ್ದಾರೆ. 26 ಮಂದಿ ಸಾವನ್ನಪ್ಪಿದ್ದು, 626 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. 78 ಸೋಂಕಿತರು ಹೋಮ್‌ ಐಸೋಲೇಶನ್‌ನಲ್ಲಿದ್ದಾರೆ

10 ಜನರಿಗೆ ಸೋಂಕು : ತಾಲೂಕಿನಲ್ಲಿ ಮಂಗಳವಾರ ರ್ಯಾಪಿಡ್‌ ಪರೀಕ್ಷೆಯಲ್ಲಿ 6 ಜನರಿಗೆ ಹಾಗೂ ಗಂಟಲು ದ್ರವದ ಪರೀಕ್ಷೆಯಲ್ಲಿ ನಾಲ್ವರಿಗೆ ಒಟ್ಟೂ 10 ಜನರಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ. ಕಿಲ್ಲಾ ಗಲ್ಲಿಯ ವೃದ್ಧ, ಗುತ್ತಿಗೇರಿ ಗಲ್ಲಿಯ 66 ವರ್ಷದ ವೃದ್ಧ, ಮರಡಿ ಗುಡ್ಡ ಭಾಗದ 20 ವರ್ಷದ ಯುವಕ, ಸದಾಶಿವ ನಗರದ 45 ವರ್ಷದ ಪುರುಷನಿಗೆ ಸೋಂಕು ತಾಕಿದೆ. ಮುರ್ಕವಾಡ ಗ್ರಾಮದ 16ವರ್ಷದ ಯುವತಿ, ಕರ್ಲಕಟ್ಟ ಗ್ರಾಮದ 20 ವರ್ಷದ ಯುವಕ, ಅಡಿಕೆ ಹೊಸೂರಿನ ಇಬ್ಬರು ವೃದ್ಧರು, ತೆರಗಾಂವ ಗ್ರಾಮದ 65 ಮತ್ತು 54 ವರ್ಷದ ಪುರುಷರಿಗೂ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next