Advertisement

ಕೋವಿಡ್ : ಚೀನ ಹಿಂದಿಕ್ಕಿದ ಹಾಂಕಾಂಗ್‌

12:16 AM Mar 19, 2022 | Team Udayavani |

ಹಾಂಕಾಂಗ್‌: ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿರುವ ಹಾಂಕಾಂಗ್‌ನಲ್ಲಿ ಫೆಬ್ರವರಿಯಿಂದ ಇಲ್ಲಿಯವರೆಗೆ ಸಂಭವಿಸಿರುವ ಒಟ್ಟು ಸಾವಿನ ಸಂಖ್ಯೆ, ಚೀನದ ಮೈನ್‌ಲ್ಯಾಂಡ್‌ನ‌ಲ್ಲಿ ಸಂಭವಿಸಿರುವ ಕೊರೊನಾ ಸಾವಿಗಿಂತ ಅಧಿಕವಾಗಿದೆ.

Advertisement

ಫೆ.9ರಿಂದ ಮಾ.18ರ ವರೆಗೆ ಸುಮಾರು 5,200 ಜನರು ಹಾಂಕಾಂಗ್‌ನಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಮೈನ್‌ಲ್ಯಾಂಡ್‌ನ‌ಲ್ಲಿ 4,636 ಸಾವು ಸಂಭವಿಸಿತ್ತು. ಶುಕ್ರವಾರದ ಹೊತ್ತಿಗೆ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20,079ರಷ್ಟಿದೆ. ಆ ಮೂಲಕ, ಹಾಂಕಾಂಗ್‌ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,16,944ಕ್ಕೇರಿದೆ.

ಚೀನದಲ್ಲಿ ಶೋಚನೀಯ ಸ್ಥಿತಿ: ಮೈನ್‌ಲ್ಯಾಂಡ್‌ನ‌ಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ಮಿತಿಮೀರಿದ್ದು ಹೊಸ ಪ್ರಕರಣಗಳ ಸಂಖ್ಯೆ ಸುಮಾರು 74 ಲಕ್ಷ ಮೀರಿದೆ. ಆಸ್ಪತ್ರೆಗಳಲ್ಲಿ ಒಮಿಕ್ರಾನ್‌ ಸೋಂಕಿತರು ತುಂಬಿ ತುಳುಕುವಂತಾಗಿದೆ.

ರಾಜ್ಯಗಳಿಗೆ ಕೇಂದ್ರದ ಸೂಚನೆ: ನೆರೆಯ ಚೀನದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಎಚ್ಚರಿಕೆಯಿಂದಿರುವಂತೆ ಹೇಳಿದೆ. ಅಲ್ಲದೆ, ಕೊರೊನಾ ತಡೆಗೆ ಐದು ಹಂತಗಳ ತಂತ್ರಗಾರಿಕೆಯಾದ ಪರೀಕ್ಷೆ, ಪರಿವೀಕ್ಷಣೆ, ಚಿಕಿತ್ಸೆ, ಲಸಿಕೆ ಹಾಗೂ ಕೊರೊನಾ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕೇಂದ್ರ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next