Advertisement

ದೇವನಗರಿಯಲ್ಲಿ ತಗ್ಗಿದ ಕೋವಿಡ್ ಸೋಂಕು

05:47 PM Oct 10, 2020 | Suhan S |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ಅಬ್ಬರಿಸಿದ್ದ ಕೋವಿಡ್ ಈಗ ಗಣನೀಯವಾಗಿ ಇಳಿಕೆಯಾಗುತ್ತಿದೆ.

Advertisement

ಸೋಂಕು ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿ ಹೊರ ಜಿಲ್ಲೆಯ ಎರಡು ಪ್ರಕರಣ ಸೇರಿದಂತೆ ಮೂರು ಪ್ರಕರಣಗಳಿದ್ದ ದಾವಣಗೆರೆ ಜಿಲ್ಲೆ ಹಸಿರು ವಲಯದತ್ತ ಸಾಗುತ್ತಿತ್ತು. ಏ.29ರಂದು ದಾವಣಗೆರೆಯಲ್ಲೇ ಮೊದಲ ಪ್ರಕರಣ ವರದಿಯಾದ ನಂತರ ಏರಿಕೆ ಪ್ರಮಾಣ ಹೆಚ್ಚಾಗಿತ್ತು. ಮೇ 3ರಂದು ಒಂದೇ ದಿನ 21 ಪ್ರಕರಣ ಪತ್ತೆಯಾಗುವ ಮೂಲಕ ಏರಿಕೆ ಪ್ರಮಾಣ ಹೆಚ್ಚಾಗುತ್ತಲೇ ಸಾಗಿತ್ತು. ಇಲ್ಲಿನ ಜಾಲಿನಗರದಲ್ಲಿ 100ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳಿದ್ದವು. ತಿಂಗಳುಗಟ್ಟಲೆ ಕಂಟೈನ್ಮೆಂಟ್‌ ಝೋನ್‌ ಆಗಿತ್ತು. ಇದರ ತೆರವಿಗಾಗಿ ಜನ ಪ್ರತಿಭಟನೆ ಸಹ ನಡೆಸಿದ್ದರು. ಜಾಲಿನಗರ, ಬೇತೂರು ರಸ್ತೆ, ಇಮಾಂ ನಗರ, ಕೆಟಿಜೆ ನಗರ, ಆಜಾದ್‌ ನಗರ, ಅಹಮ್ಮದ್‌ ನಗರ, ಬಾಷಾ ನಗರ ಇತರೆ ಭಾಗಗಳು ಹಲವಾರು ತಿಂಗಳವರೆಗೆ ಕಂಟೈನ್ಮೆಂಟ್‌ ಝೋನ್‌ ಗಳಾಗಿದ್ದು ಕೊರೊನಾ ಅಬ್ಬರಕ್ಕೆ ಸಾಕ್ಷಿ.

ಆದರೆ ಸದ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದೆ. ಜೂನ್‌ -ಜುಲೈ ತಿಂಗಳ ಎರಡನೇ ವಾರದವರೆಗೆ ಪ್ರತಿ ನಿತ್ಯ 300ಕ್ಕಿಂತಲೂ ಹೆಚ್ಚಿನ ಪ್ರಕರಣ ಪತ್ತೆ ಆಗುತ್ತಿದ್ದವು. ಆಗಸ್ಟ್‌ ಎರಡನೇ ಮತ್ತು ಮೂರನೇ ವಾರದ ಹೊತ್ತಿಗೆ ಶೇ.25ರಿಂದ 30ರಂತೆ ಪ್ರತಿ ದಿನ ಸೋಂಕಿತರ ಪ್ರಮಾಣ 250ರ ಆಸುಪಾಸಿಗೆ ಇಳಿಯಿತು.

ಗಣನೀಯ ಪ್ರಮಾಣ ಇಳಿಕೆ: ಸೆಪ್ಟೆಂಬರ್‌ ತಿಂಗಳಲ್ಲಿ ಇಳಿಕೆ ಪ್ರಮಾಣ ಗಣನೀಯವಾಗಿದೆ. ಅಕ್ಟೋಬರ್‌ ಮೊದಲ ವಾರದಲ್ಲೂ ಕೋವಿಡ್ ಸೋಂಕಿತರ ಪ್ರಮಾಣ ಇಳಿಮುಖವಾಗ ತೊಡಗಿದೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಈವರೆಗೆ ಶೇ. 40ರಿಂದ 50 ರಷ್ಟು ಸೋಂಕಿನ ಪ್ರಮಾಣ ಇಳಿಕೆ ಆಗಿದೆ. ಕೊರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದರನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುತ್ತಿರುವುದು. ವಾರ್ಡ್‌, ಗ್ರಾಮಟಾಸ್ಕ್ಫೋರ್ಸ್‌ ಮೂಲಕ ಸೋಂಕಿನ ಲಕ್ಷಣ ಇದ್ದವರು, ಇಲ್ಲದೇಇರುವರಿಗೂ ಪರೀಕ್ಷೆಗೆ ಒಳಪಡಿಸುತ್ತಿರುವುದು. ಸೋಂಕಿನಿಂದಗುಣಮುಖರಾದವರಿಗೆ ಕಟ್ಟುನಿಟ್ಟಾಗಿ ಹೋಂ ಐಸೋಲೇಷನ್‌ಮಾಡುವ ಜತೆಗೆ ಔಷಧೋಪಚಾರ ಮುಂದುವರಿಸುವುದುಒಳಗೊಂಡಂತೆ ಹಲವಾರು ಕ್ರಮ ಕೈಗೊಂಡಿರುವ ಪರಿಣಾಮ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ.

ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಪ್ರತಿ ದಿನ ಸಾವಿನ ಪ್ರಕರಣ ವರದಿಯಾಗುತ್ತಲೇ ಇದ್ದವು. ಒಂದೇ ದಿನ 10 ಜನ ಮೃತಪಟ್ಟ ದಾಖಲೆಯೂ ಇದೆ. ಶೇ.3ರಿಂದ 4ರಷ್ಟಿದ್ದಂತಹ ಸಾವಿನ ಸಂಖ್ಯೆ ಪ್ರಮಾಣ ಈಗ ಶೇ.1ಕ್ಕಿಂತಲೂ ಕಡಿಮೆ ಆಗಿದೆ. ದಾವಣಗೆರೆಜಿಲ್ಲೆಯಲ್ಲಿ ಅ.8ಕ್ಕೆ ಒಟ್ಟಾರೆಯಾಗಿ 17,537 ಪ್ರಕರಣಗಳಲ್ಲಿ 15,476 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 243 ಮಂದಿ ಮೃತಪಟ್ಟಿದ್ದಾರೆ. 1818 ಸಕ್ರಿಯ ಪ್ರಕರಣಗಳಿವೆ.

Advertisement

 

-ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next