Advertisement
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಸಹಜವಾಗಿ ಏರಿಕೆಯಾಗಿತ್ತು. ಇದೇ ವೇಳೆ ರಾಜ್ಯ ಸರ್ಕಾರ ಕೋವಿಡ್ ಕರ್ಫ್ಯೂ ಜಾರಿ ಮಾಡಿದ್ದರಿಂದ ಬೇರೆಡೆಯಿಂದ ವಲಸೆ ಹೋಗಿದ್ದವರು ಹಳ್ಳಿಗಳಿಗೆವಾಪಾಸಾಗಿದ್ದಾರೆ. ಬೆಂಗಳೂರು ಮತ್ತಿತರೆಡೆಗಳಿಂದ ಜಿಲ್ಲೆಗೆ ವಲಸೆ ಬಂದವರ ಪ್ರಾಥಮಿಕ ಅಂಕಿ ಅಂಶಆರೋಗ್ಯ ಇಲಾಖೆಗೆ ಲಭ್ಯವಾಗಿದ್ದು, 2718 ಮಂದಿ ಹಳ್ಳಿಗಳಿಗೆ ಮರಳಿದ್ದಾರೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹೊರಗಿನಿಂದ ಬಂದವರ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಸಿಕ್ಕಿರುವ ಮಾಹಿತಿ ಆಧರಿಸಿ ಹೊರಗಿನಿಂದ ಬಂದವರಿಗೆ ಕೋವಿಡ್ ಪರೀಕ್ಷೆ ಮಾಡಿಸುವ ಕೆಲಸ ಮಾಡುತ್ತಿದ್ದು, ಪರೀಕ್ಷೆ ಮುಗಿಯುವವರೆಗೆ ಹೊರಗಿನಿಂದ ಬಂದವರು ಮನೆಯಲ್ಲೇ ಪ್ರತ್ಯೇಕವಾಗಿರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆಶಾ ಕಾರ್ಯಕರ್ತೆಯರ ಮೂಲಕ ವಲಸಿಗರ ಮಾಹಿತಿ ಪಡೆದು ಅವರ ಗಂಟಲು ದ್ರವಪರೀಕ್ಷೆಗೆ ಕಳಿಸುವ ಕೆಲಸ ಎಲ್ಲಾ ತಾಲೂಕುಗಳಲ್ಲಿ ಭರದಿಂದ ಸಾಗುತ್ತಿದೆ.
Related Articles
Advertisement
ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗುವ ಇಂತಹ ಅಂಶಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅತೀ ಶೀಘ್ರದಲ್ಲಿ ಹಾಸ್ಟೆಲ್‌ಗಳಲ್ಲಿ ಊಟ,ವಸತಿ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದೆ.
ಹೋಂ ಐಸೋಲೇಶನ್‌ನಲ್ಲಿರುವವರ ಓಡಾಟದಿಂದ ಆತಂಕ :
ಕೋವಿಡ್ ಸೋಂಕು ತಗುಲಿರುವವರಿಗೆ ಅದರ ಪ್ರಮಾಣ ಕಡಿಮೆ ಇದ್ದಾಗ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಜತೆಗೆ ಕೋವಿಡ್ ಮೊದಲ ಅಲೆಯಂತೆ ಸೋಂಕಿತರ ಮನೆ ಬಳಿ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ವಿಧಿಸುವುದನ್ನು ಮಾಡುತ್ತಿಲ್ಲ. ಇದರ ಲಾಭ ಪಡೆಯುತ್ತಿರುವ ಸೋಂಕಿತರು ಬೆಳಗಿನ ನಿರ್ಬಂಧ ಸಡಿಲಿಕೆ ಅವಧಿಯಲ್ಲಿ ಮಾರುಕಟ್ಟೆ, ಅಂಗಡಿ ಮತ್ತಿತರೆಡೆಗಳಲ್ಲಿ ಅಡ್ಡಾಡುತ್ತಿದ್ದಾರೆ. ಇದು ಕೂಡ ಸೋಂಕು ವೇಗವಾಗಿ ಹರಡಲು ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿಸಚಿವ ಬಿ. ಶ್ರೀರಾಮುಲು ಕೂಡ ಇದೇ ಆತಂಕ ವ್ಯಕ್ತಪಡಿಸಿದ್ದರು. ಹೋಂ ಐಸೋಲೇಶನ್ ರದ್ದುಮಾಡಿ ಸಣ್ಣ ಪ್ರಮಾಣದ ಸೋಂಕಿತರಿಗಾಗಿ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಚಿತ್ರದುರ್ಗ ಜಿಲ್ಲೆಗೆ ಬೆಂಗಳೂರುಮತ್ತಿತರೆಡೆಗಳಿಂದ 2718 ಮಂದಿವಲಸೆ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ನಡೆಸಿ ಕೋವಿಡ್ ಪರೀಕ್ಷೆಮಾಡಿಸಲಾಗುತ್ತಿದೆ.– ಡಾ ಸಿ.ಎಲ್. ಪಾಲಾಕ್ಷ, ಜಿಲ್ಲಾ ಆರೋಗ್ಯಾಧಿಕಾರಿ
ತಿಪ್ಪೇಸ್ವಾಮಿ ನಾಕೀಕೆರೆ