Advertisement
ತಮಿಳುನಾಡು ರಾಜ್ಯ ಆರೋಗ್ಯ ಇಲಾಖೆಯ ವರದಿ ಪ್ರಕಾರ ಜನವರಿಯಲ್ಲಿ 20,326 ಮಕ್ಕಳಿಗೆ ಸೋಂಕು ದೃಢವಾಗಿತ್ತು. ಮೇಯಲ್ಲಿ 2ನೇ ಅಲೆ ಅವಧಿಯಲ್ಲಿ 71,555 ಮಕ್ಕಳಲ್ಲಿ ಅದು ಕಂಡುಬಂದಿತ್ತು. ಒಟ್ಟಾರೆಯಾಗಿ ಹೇಳುವು ದಿದ್ದರೆ ಸೋಂಕು ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೂ ಮಕ್ಕಳ ಲ್ಲಿನ ಪ್ರಕರಣಗಳ ಸಂಖ್ಯೆ ಜೂನ್‌ನಲ್ಲಿ ಶೇ.8.8, ಜುಲೈಯಲ್ಲಿ ಶೇ.9.5, ಆಗಸ್ಟ್‌ನಲ್ಲಿ ಶೇ.10ಕ್ಕೆ ಏರಿಕೆಯಾಗಿದೆ. ಎಂಟು ತಿಂಗಳ ಅವಧಿಯಲ್ಲಿ 24 ಮಕ್ಕಳು ಸೋಂಕಿನಿಂದ ಅಸುನೀಗಿದ್ದಾರೆ.
Related Articles
Advertisement
ಕೋರ್ಬಿವ್ಯಾಕ್ಸ್ ಲಸಿಕೆಯನ್ನು 5ರಿಂದ 18 ವರ್ಷದೊಳಗಿನವರ ಮೇಲೆ 2 ಮತ್ತು 3ನೇ ಹಂತದ ಪ್ರಯೋಗ ನಡೆಸಲು ಹೈದರಾ ಬಾದ್‌ನ ಬಯಲಾಜಿಕಲ್ ಇ ಕಂಪ ನಿಗೆ ಡಿಸಿಜಿಐ ಅನುಮತಿ ನೀಡಿದೆ. ವಿಷಯ ತಜ್ಞರ ಸಮಿತಿಯ ಶಿಫಾ ರಸಿನ ಮೇರೆಗೆ ಒಪ್ಪಿಗೆ ನೀಡಲಾ ಗಿದ್ದು, ಒಟ್ಟು 10 ಪ್ರದೇಶಗಳಲ್ಲಿ ಈ ಪ್ರಯೋಗ ನಡೆಯಲಿದೆ. ಇದೇ ವೇಳೆ, ಝೈಡಸ್ ಕ್ಯಾಡಿ ಲಾದ ಸೂಜಿ ರಹಿತ ಕೊರೊನಾ ಲಸಿಕೆ ಝೈಕೋವ್-ಡಿ ತುರ್ತು ಬಳಕೆಗೆ ಈಗಾಗಲೇ ಒಪ್ಪಿಗೆ ಸಿಕ್ಕಿದ್ದು, ಅಕ್ಟೋಬರ್ ಮೊದಲ ವಾರದಿಂದಲೇ 12-18ರ ವಯೋಮಾನದ ಮಕ್ಕಳಿಗೆ ವಿತರಣೆ ಆರಂಭವಾಗಲಿದೆ.
ಆರ್‌ಟಿ-ಪಿಸಿಆರ್ ಕಡ್ಡಾಯ ;
ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸಾ$Ìನಾ, ಚೀನ, ಮಾರಿಷಸ್, ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ಗಳಿಂದ ಆಗಮಿಸುವವರಿಗೆ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯ ಗೊಳಿಸಲಾಗಿದೆ.
ಶೇ.16 ಮಂದಿಗೆ ಎರಡೂ ಡೋಸ್ ಲಸಿಕೆ ಪೂರ್ಣ :
ದೇಶಾದ್ಯಂತ ಶೇ.16ರಷ್ಟು ವಯಸ್ಕ ಜನಸಂಖ್ಯೆಗೆ ಕೊರೊನಾ ಸೋಂಕಿನ ಎರಡೂ ಡೋಸ್ ಲಸಿಕೆ ವಿತರಣೆ ಪೂರ್ಣಗೊಳಿಸ ಲಾಗಿದೆ. ಶೇ.54ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಪಡೆದು ಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಆಗಸ್ಟ್‌ನಲ್ಲೇ 18.38 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶಗಳಲ್ಲಿ ಶೇ.100ರಷ್ಟು ಮಂದಿಗೆ(18+ ಜನಸಂಖ್ಯೆ) ಮೊದಲ ಡೋಸ್ ವಿತರಣೆ ಪೂರ್ಣಗೊಂಡಿದೆ ಎಂದರು.
ಕೇರಳದಲ್ಲಿ 1 ಲಕ್ಷ ಸಕ್ರಿಯ ಪ್ರಕರಣ :
ಒಂದು ಲಕ್ಷಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಏಕೈಕ ರಾಜ್ಯವೆಂದರೆ ಅದು ಕೇರಳ. ಇನ್ನು, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ 10 ಸಾವಿರದಿಂದ 1 ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿವೆ. ಉಳಿದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಖ್ಯೆ 10 ಸಾವಿರಕ್ಕಿಂತ ಕೆಳಗಿದೆ ಎಂದೂ ಭೂಷಣ್ ಮಾಹಿತಿ ನೀಡಿದ್ದಾರೆ. ಜೂನ್ ತಿಂಗಳಲ್ಲಿ 279 ಜಿಲ್ಲೆಗಳಲ್ಲಿ ಪ್ರತೀ ದಿನ 100ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಆಗಸ್ಟ್ 30ರ ವೇಳೆಗೆ 42 ಜಿಲ್ಲೆಗಳಲ್ಲಿ ಮಾತ್ರ 100ಕ್ಕಿಂತ ಹೆಚ್ಚು ಕೇಸುಗಳು ಪತ್ತೆಯಾಗುತ್ತಿವೆ ಎಂದರು.
ಚೀನದ ಲಸಿಕೆ ತಿರಸ್ಕರಿಸಿದ ಉ.ಕೊರಿಯಾ! :
ಚೀನದ ಕೊರೊನಾ ಲಸಿಕೆ ಸೈನೋವ್ಯಾಕ್‌ನ 30 ಲಕ್ಷದಷ್ಟು ಡೋಸ್‌ಗಳನ್ನು ಉತ್ತರ ಕೊರಿಯಾ ತಿರಸ್ಕರಿಸಿದೆ. ಅಷ್ಟೇ ಅಲ್ಲ, ಈ ಲಸಿಕೆಯನ್ನು ಕೊರೊನಾದಿಂದ ತೀವ್ರ ಬಾಧೆಗೊಳಗಾದ ದೇಶಗಳಿಗೆ ನೀಡುವಂತೆ ತಿಳಿಸಿದೆ. ಉತ್ತರ ಕೊರಿಯಾವು ಕಳೆದ ವರ್ಷದ ಜನವರಿಯಲ್ಲೇ ತನ್ನೆಲ್ಲ ಗಡಿಗಳನ್ನೂ ಮುಚ್ಚಿ, ಚೀನದಿಂದ ಸೋಂಕು ತಮ್ಮ ದೇಶದೊಳಕ್ಕೆ ಪ್ರವೇಶಿಸದಂತೆ ಕ್ರಮ ಕೈಗೊಂಡಿತ್ತು. ಅಲ್ಲಿ ಈವರೆಗೆ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಎಂದು ಉ. ಕೊರಿಯಾ ಹೇಳಿಕೊಂಡಿದೆ!