Advertisement
ಜಿಲ್ಲೆಯಲ್ಲಿ ಲಸಿಕೆ ಪಡೆಯುವಲ್ಲಿ ಹಿರಿಯ ನಾಗರಿಕರೇ ಮುಂದಿದ್ದಾರೆ. 19,194 ಮಂದಿ 60 ವರ್ಷದ ಮೇಲಿನ ಹಿರಿಯ ನಾಗರಿಕರು ಮೊದಲ ಡೋಸ್ ಪಡೆದಿದ್ದಾರೆ. ಆರೋಗ್ಯ ಸಮಸ್ಯೆ ಇರುವ 45ರಿಂದ 60 ವರ್ಷದೊಳಗಿನ 3,698 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
Related Articles
Advertisement
ಜಿಲ್ಲೆಯ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನಿಗದಿಪಡಿಸಿರುವ ಗುರಿ ಅನುಸಾರ ಲಸಿಕೆ ನೀಡುವಕಾರ್ಯ ಪ್ರಗತಿಯಾಗಿರಲಿಲ್ಲ. ಇಂತಹ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲಾಗುವುದಿಲ್ಲ. ಲಸಿಕೆ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸದೆ ಉದಾಸೀನ ತೋರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಯಾವ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿಲಸಿಕೆ ನೀಡುವ ಗುರಿ ತಲುಪುತ್ತಿಲ್ಲವೋ ಅಂತಹ ಕಡೆ ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಪ್ರಗತಿಪರಿಶೀಲಿಸಬೇಕು. ಪ್ರತಿ ದಿನ ಲಸಿಕೆ ನೀಡುವ ಕಾರ್ಯಹೆಚ್ಚಿನ ಪ್ರಮಾಣದಲ್ಲಿ ನಡೆಯುವಂತೆ ನೋಡಿಕೊಳ್ಳ ಬೇಕು ಎಂದು ಸೂಚಿಸಲಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯಾ ಮುಖ್ಯಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಲಸಿಕಾ ಅಭಿಯಾನವನ್ನುವಿಶೇಷವಾಗಿ ಪರಿಗಣಿಸಿ ಹೆಚ್ಚಿನ ಪ್ರಗತಿಯಾಗುವಂತೆನಿಗಾವಹಿಸಬೇಕು. ಜಾಗೃತಿ ಮೂಡಿಸುವಕಾರ್ಯಕ್ರಮಗಳು ಮುಂದುವರಿಯಬೇಕು.ವಾರ್ಡ್ ಸಭೆ ಇನ್ನಿತರ ವಿಧಾನಗಳ ಮೂಲಕ ಲಸಿಕೆಪಡೆಯಲು ಉತ್ತೇಜಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಪರೀಕ್ಷೆ ಹೆಚ್ಚಳ ಮಾಡಿದ ಆರೋಗ್ಯ ಇಲಾಖೆ :
ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿನಡೆಯುತ್ತಿತ್ತು. ಹೆಚ್ಚಿನ ಸಂಖ್ಯೆಯ ಪರೀಕ್ಷೆ ನಡೆಯದ ಬಗ್ಗೆ ಉದಯವಾಣಿ ಪತ್ರಿಕೆಯಮಾ. 16ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಈಗ ದಿನನಿತ್ಯದ ಪರೀಕ್ಷಾಸಂಖ್ಯೆಯನ್ನು 700ಕ್ಕಿಂತ ಹೆಚ್ಚು ನಡೆಸುತ್ತಿದೆ. ಇದಕ್ಕೂ ಮುಂಚೆ 225 ರಿಂದ 300 ಮಾದರಿಗಳನ್ನು ಪರೀಕ್ಷಿಸಲಾಗುತ್ತಿತ್ತು. ಮಾ. 17ರಂದು 775 ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 4 ಪಾಸಿಟಿವ್ ಆಗಿವೆ.ಮಾ.18ರಂದು 733 ಪರೀಕ್ಷೆ ನಡೆಸಲಾಗಿದ್ದು, 5 ಪಾಸಿಟಿವ್ ಆಗಿವೆ. ಮಾ. 19ರಂದು 750 ಪರೀಕ್ಷೆ ನಡೆಸಲಾಗಿದ್ದು, 8ಪ್ರಕರಣ ಪಾಸಿಟಿವ್ ಆಗಿವೆ. 20ರಂದು673 ಪರೀಕ್ಷೆ ನಡೆಸಲಾಗಿದ್ದು, 3 ಪಾಸಿಟಿವ್ ಆಗಿವೆ. ಜಿಲ್ಲೆಯಲ್ಲಿ ಇದುವರೆಗೆ 7035ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಇವರಲ್ಲಿ 6878 ಮಂದಿ ಗುಣಮುಖರಾಗಿದ್ದಾರೆ. 26 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 4 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 132 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಲಸಿಕೆ ಪ್ರಗತಿ ವಿವರ :
5417 ಮಂದಿ ಆರೋಗ್ಯ ಸೇವಾ ಸಿಬ್ಬಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ
2965 ಮಂದಿ ಆರೋಗ್ಯ ಸೇವಾ ಸಿಬ್ಬಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ
2618 ಮಂದಿ ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದಾರೆ
390 ಮಂದಿ ಮುಂಚೂಣಿ ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ
3,698 ಮಂದಿ ಆರೋಗ್ಯ ಸಮಸ್ಯೆ ಇರುವ 45 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ಮೊದಲ ಡೋಸ್ ಪಡೆದಿದ್ದಾರೆ
19,194 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮೊದಲ ಡೋಸ್ ಪಡೆದಿದ್ದಾರೆ.
ಕೋವಿಡ್ ಎರಡನೇ ಅಲೆ ತಡೆಯಲು ಜನರು ಸಮುದಾಯವಾಗಿ ಜವಾಬ್ದಾರಿ ವಹಿಸಬೇಕು. ಮಾಸ್ಕ್ಧರಿಸುವಿಕೆ, ಅಂತರ ಕಾಪಾಡುವಿಕೆ, ಗುಂಪುಸೇರದಿರುವಿಕೆ, ಸ್ಯಾನಿಟೈಸರ್ ಬಳಸಬೇಕು. ಲಸಿಕೆ ಹಾಕಿಸಿಕೊಳ್ಳಲು ಜನರು ಇತ್ತೀಚೆಗೆಸ್ವಯಂಪ್ರೇರಣೆಯಿಂದ ಬರುತ್ತಿದ್ದಾರೆ. ಲಸಿಕೆ ಪಡೆಯುವುದರಿಂದ ಕೋವಿಡ್ ತಡೆಗಟ್ಟಬಹುದು. ಬೇರೆಯವರಿಗೆ ಬರದಂತೆಯೂ ತಡೆಯಬಹುದು. ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ,ಸಮುದಾಯ ಆರೋಗ್ಯ ಕೇಂದ್ರ,ತಾಲೂಕು ಮತ್ತು ಜಿಲ್ಲಾಸ್ಪತ್ರೆಗೆ ಬಂದರೆ ಲಸಿಕೆ ನೀಡಲಾಗುವುದು. -ಡಾ. ಎಂ.ಸಿ.ರವಿ, ಜಿಲ್ಲಾ ಆರೋಗ್ಯಾಧಿಕಾರಿ
-ಕೆ.ಎಸ್. ಬನಶಂಕರ ಆರಾಧ್ಯ