Advertisement

ಬೀದರಗೆ ಬೆಂಬಿಡದ ಮಹಾ ಕಂಟಕ

06:15 AM Jun 03, 2020 | Suhan S |

ಬೀದರ: ಬಿಸಿಲು ನಾಡು ಬೀದರಗೆ ಮಹಾರಾಷ್ಟ್ರದ ಕಂಟಕ ಬೆಂಬಿಡದೇ ಕಾಡುತ್ತಿದ್ದು, ಮಂಗಳವಾರ ಜಿಲ್ಲೆಯಲ್ಲಿ ಮತ್ತೆ ಬಾಲಕಿ ಸೇರಿದಂತೆ 10 ಹೊಸ ಕೋವಿಡ್ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.

Advertisement

ಹೊಸ 10 ಸೋಂಕಿತರಲ್ಲಿ 9 ಜನ ಬಸವಕಲ್ಯಾಣ ತಾಲೂಕಿನವರಾಗಿದ್ದರೆ, ಇನ್ನೊಬ್ಬರು ಬೀದರ ತಾಲೂಕಿಗೆ ಸೇರಿದ್ದಾರೆ. ಎಲ್ಲರೂ ಮಹಾರಾಷ್ಟ್ರ ಸಂಪರ್ಕ ಹೊಂದಿದ್ದಾರೆ. ಒಟ್ಟು ಜನರಲ್ಲಿ 7 ಜನ ಪುರುಷರಿದ್ದರೆ 3 ಮಂದಿ ಮಹಿಳೆಯರಿದ್ದಾರೆ. ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮದ 4, ಧಾಮುರಿ ಮತ್ತು ರಾಜೋಳ ಗ್ರಾಮದ ತಲಾ 2, ರಾಜೋಳ ಗ್ರಾಮದ 1 ಹಾಗೂ ಬೀದರ ತಾಲೂಕು ಜನವಾಡಾ ಗ್ರಾಮದ ಒಬ್ಬರು ಇದ್ದಾರೆ.

15 ವರ್ಷದ ಬಾಲಕಿ ಪಿ- 3409, 53 ವರ್ಷದ ವ್ಯಕ್ತಿ ಪಿ- 3426, 31 ವರ್ಷದ ವ್ಯಕ್ತಿ ಪಿ- 3427, 29 ವರ್ಷದ ಯುವತಿ ಪಿ- 3428, 35 ವರ್ಷದ ವ್ಯಕ್ತಿ ಪಿ- 3429, 44 ವರ್ಷದ ವ್ಯಕ್ತಿ ಪಿ- 3430, 38 ವರ್ಷದ ವ್ಯಕ್ತಿ ಪಿ- 3431, 32 ವರ್ಷದ ಮಹಿಳೆ ಪಿ-3432, 26 ವರ್ಷದ ಯುವಕ ಪಿ- 3233 ಮತ್ತು 20 ವರ್ಷದ ಯುವಕ ಪಿ- 3434 ಸಂಖ್ಯೆಯ ರೋಗಿಗಳಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಿಡಿಯಾ ಬುಲೇಟಿನ್‌ ದೃಢಪಡಿಸಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 175 ಕೋವಿಡ್ ಪಾಸಿಟಿವ್‌ ಪ್ರಕರಣಗಳು ಪತ್ತೆಯಾದಂತಾಗಿದೆ. 5 ಜನ ಸಾವನ್ನಪ್ಪಿದ್ದರೆ, 41 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದು, ಇನ್ನೂ 125 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next