Advertisement

ಸ್ಲಂಗಳಲ್ಲಿ ಸೋಂಕಿನ ಪ್ರಮಾಣ ಗಣನೀಯ ಇಳಿಕೆ

12:07 PM Jun 09, 2021 | Team Udayavani |

ತುಮಕೂರು: ನಗರದ ಮಾಜಿ ಶಾಸಕ ಡಾ.ಎಸ್‌. ರಫೀಕ್‌ ಅಹಮದ್‌ ಮಂಗಳವಾರ ಕೊಳಗೇರಿಗಳಲ್ಲಿ ಕೋವಿಡ್ ಜಾಗೃತಿ ಮೂಡಿಸಿ, ಸೋಂಕಿನ ಪ್ರಮಾಣ ಇಳಿಕೆಗೆ ಶ್ರಮಿಸಿದ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರಿಗೆ, ಸಂಪಾದನೆ ಮಠದ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್‌ ವಿತರಿಸಿದರು.

Advertisement

ಮಾಜಿ ಶಾಸಕ ಡಾ.ಎಸ್‌. ರಫೀಕ್‌ ಅಹಮದ್‌ ಮಾತನಾಡಿ, ಕೊಳಗೇರಿ ಸಮಿತಿ ಕಾರ್ಯಕರ್ತರ ತಂಡ ಕೊರೊನಾ 2ನೇ ಅಲೆಯಲ್ಲಿ ತನ್ನ ಸಮುದಾಯಗಳನ್ನು ರಕ್ಷಿಸಿಕೊಳ್ಳಲು ಹಗಲಿರುಳು ಶ್ರಮಿಸಿದ್ದು, ಇದರಿಂದ ಹಲವಾರು ಸ್ಲಂಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದರು.

ಸಂಕಷ್ಟದಲ್ಲಿರುವ ಬಡವರಿಗೆ ಮತ್ತು ಸೋಂಕಿಗೆ ಒಳಪಟ್ಟರವರಿಗೆ ಜಾಗೃತಿ ಮೂಡಿಸಿ ಲಸಿಕೆಗಳನ್ನು ಪಡೆಯುವಂತೆ ಮಾಡಿರುವುದು ಪ್ರಶಂಸನೀಯ. ಹಸಿವಿನಿಂದಿರುವವರಿಗೆ ಆಹಾರ ಕಿಟ್‌ಗಳನ್ನು ಸಂಗ್ರಹಿಸಿ ನೀಡುತ್ತಿರುವುದು ಈ ಸಂದರ್ಭದಲ್ಲಿ ನಗರದಲ್ಲಿರುವ ವಂಚಿತ ಸಮುದಾಯಗಳಿಗೆ ಅನುಕೂಲವಾ ಗಿದೆ. ನನ್ನ ಅವಧಿಯಲ್ಲಿ ಸಮಿತಿಯ ಸಹಕಾರ ದೊಂದಿಗೆ ಹಲವಾರು ಸ್ಲಂಗಳನ್ನು ಮಾದರಿ ಸ್ಲಂಗಳಾಗಿ ಪರಿವರ್ತಿಸಲಾಗಿದೆ ಎಂದರು.

ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್‌: ಸ್ಲಂಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ನಮ್ಮ ಕಾರ್ಯಕರ್ತರ ಮತ್ತು ಸಂಘಟನೆಯ ಕೆಲಸವನ್ನು ಗುರುತಿಸಿ ಸಂಕಷ್ಟದ‌ಲ್ಲಿರುವ ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸಂಪಾದನೆ ಮಠ ಸ್ಲಂ ನಿವಾಸಿಗಳಿಗೆ ದಿನಸಿ ಕಿಟ್‌ನ್ನು ನೀಡಿದೆ. ಲಾಕ್‌ಡೌನ್‌ ಅವಧಿಯಲ್ಲಿ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ದಿಬ್ಬೂರು ಅಲೆಮಾರಿಗಳಿಗೆ ಇಸ್ಮಾಯಿಲ್‌ ನಗರ ಹಂದಿಜೋಗಿಗಳಿಗೆ ಹಾಗೂ ಪಡಿತರ ಚೀಟಿ ಇಲ್ಲದವರಿಗೆ ನೀಡಿದ್ದು, ರಫೀಕ್‌ ಅಹಮದ್‌ ಶಾಸಕರಾಗಿದ್ದ ಅವಧಿಯಲ್ಲಿ ಸಮಿತಿಯ ಪ್ರಮುಖ ಒತ್ತಾಯಗಳನ್ನು ಈಡೇರಿಸಿದ್ದಾರೆ. ಇಂದು ತುಮಕೂರು ನಗರದಲ್ಲಿ ಕೊಳಗೇರಿಗಳ ಅಭಿವೃದ್ಧಿಗೆ ರಫೀಕ್‌ ಅಹ್ಮದ್‌ ರವರ ಕೊಡುಗೆ ಪ್ರಮುಖವಾಗಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆಟೋ ರಾಜು ಮತ್ತು ಸಮಿತಿಯ ಪದಾಧಿಕಾರಿ ಅರುಣ್‌, ಶಂಕರಯ್ಯ, ಹಯಾತ್‌ಸಾಬ್‌, ಕಣ್ಣನ್‌, ಮೋಹನ್‌, ಟಿಆರ್‌, ಶಾರದಮ್ಮ, ರಂಗನಾಥ್‌, ಶಾಬುದ್ಧಿನ್‌, ಕೆಂಪಣ್ಣ, ಸಂಪದನೆ ಮಠ ಶಾಖಾ ಸಮಿತಿಯ ಗೌರಮ್ಮ, ಮಹಾದೇವಮ್ಮ, ರಂಗ, ದೇವರಾಜ್‌,ಜಗ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next