ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಸೂಚನೆ ಎಂಬಂತೆ ಇಂದು ಗುರುವಾರ 38,083 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 17,717 ಹೊಸ ಪ್ರಕರಣಗಳು ದೃಢಪಟ್ಟಿವೆ. :49 ಮಂದಿ ಸೋಂಕಿತರ ಮರಣಗಳು ವರದಿಯಾಗಿದ್ದು, ಆ ಪೈಕಿ 12 ಮಂದಿ ಬೆಂಗಳೂರಿನವರಾಗಿದ್ದಾರೆ.
ರಾಜ್ಯದಲ್ಲಿ 20.44% ಪಾಸಿಟಿವಿಟಿ ದರ ಇದೆ. ಇಂದು 67,236 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
3,28,711 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, ಬೆಂಗಳೂರಿನಲ್ಲಿ 1 ಲಕ್ಷದ 89 ಸಾವಿರ ಪ್ರಕರಣಗಳಿವೆ. ಇಂದು 1,86,313 ಮಂದಿಗೆ ಪರೀಕ್ಷೆಗಳನ್ನು ಮಾಡಲಾಗಿದೆ.
ಬಳ್ಳಾರಿ, ಮೈಸೂರಿನಲ್ಲಿ ತಲಾ 5 ಮಂದಿ , ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ ನಾಲ್ವರು,ಮಂಡ್ಯ, ರಾಯಚೂರು, ಉಡುಪಿ, ತುಮಕೂರು ಮತ್ತು ಉತ್ತರಕನ್ನಡದ ತಲಾ ಇಬ್ಬರು, ಬಾಗಲಕೋಟೆ, ಬೆಳಗಾವಿ,ಚಿತ್ರದುರ್ಗ, ಧಾರವಾಡ, ಕೆಲಬುರಗಿ, ಕೊಡಗು, ರಾಮನಗರ ಮತ್ತು ಶಿವಮೊಗ್ಗದಲ್ಲಿ ದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ರಾಜಧಾನಿಯಲ್ಲಿ ಇಂದುರೂಪಾಂತರಿಯ 185 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.ಅರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂದು 185 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,115 ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
ಬುಧವಾರ ರಾಜ್ಯದಲ್ಲಿ 48,905 ಪ್ರಕರಣಗಳು ಪತ್ತೆಯಾಗಿದ್ದವು ಮತ್ತು 39 ಮಂದಿ ಸೋಂಕಿತರು ಸಾವನ್ನಪ್ಪಿದ್ದರು.