Advertisement

ಬೈಲಹೊಂಗಲದಲ್ಲಿ 19 ಪ್ರಕರಣ

02:19 PM Aug 08, 2020 | Suhan S |

ಬೈಲಹೊಂಗಲ: ಪಟ್ಟಣ 5 ಸೇರಿದಂತೆ ತಾಲೂಕಿನಲ್ಲಿ ಶುಕ್ರವಾರ 19 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಪಟ್ಟಣದ ತಿಗಡಿ ಗಲ್ಲಿಯ 55 ವರ್ಷದ ಪುರುಷ, ಕೋತಂಬ್ರಿ ಗಲ್ಲಿಯ 65 ವರ್ಷದ ಪುರುಷ, ಮೌನೇಶ್ವರ ನಗರದ 52 ವರ್ಷದ ಮಹಿಳೆ, ಶಿವಾನಂದ ಭಾರತಿ ನಗರದ 1ನೇ ಕ್ರಾಸಿನ 33 ವರ್ಷದ ಪುರುಷ, ಪ್ರಭು ನಗರದ 44 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

Advertisement

ತಾಲೂಕಿನ ಕಿತ್ತೂರ-3, ದೇವಲಾಪುರ-1, ದೇಗಾಂವ- 3, ಗಿರಿಯಾಲ-2, ಹೊನ್ನಾಪುರ-1 ಬೆಳವಡಿ-1, ಎಂ.ಕೆ. ಹುಬ್ಬಳ್ಳಿ-1, ಚನ್ನಾಪುರ-1, ತಿಮ್ಮಾಪುರ-1 ಪ್ರಕರಣ ದೃಢಪಟ್ಟಿವೆ. ಈ ವರೆಗೆ ಬೈಲಹೊಂಗಲ, ಕಿತ್ತೂರ ತಾಲೂಕಿನಾದ್ಯಂತ 279 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 74 ಸಕ್ರಿಯವಾಗಿವೆ. ಪಟ್ಟಣದ ಮೊರಾರ್ಜಿ ವಸತಿ ಶಾಲೆಯ ಕೋವಿಡ್‌ ಕೇಂದ್ರದಲ್ಲಿ-19, ಎನ್‌ಎನ್‌ ವಿವಿಎಸ್‌ ಕೇಂದ್ರ-18, ಸಾರ್ವಜನಿಕ ಆಸ್ಪತ್ರೆ-13, ಹೋಂ ಕ್ವಾರಂಟೈನ್‌ನಲ್ಲಿ 24 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಎನ್‌ಎನ್‌ವಿವಿಎಸ್‌ ಚಿಕಿತ್ಸಾ ಕೇಂದ್ರದಿಂದ 10 ಜನ ಬಿಡುಗಡೆಯಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಎಸ್‌.ಎಸ್‌. ಸಿದ್ದನ್ನವರ ತಿಳಿಸಿದ್ದಾರೆ.

ಗೋಕಾಕ-ಮೂಡಲಗಿಯಲ್ಲಿ 87 ಪ್ರಕರಣ : ಗೋಕಾಕ ಹಾಗೂ ಮೂಡಲಗಿ ತಾಲೂಕಿಗೆ ಶುಕ್ರವಾರ ಅಶುಭ ದಿನವಾಗಿದೆ. ಒಂದೆಡೆ ಸತತ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು ನೆರೆ ಹಾವಳಿ ಎದುರಾಗುವ ಸಂಭವವಿದ್ದರೆ, ಇನ್ನೊಂದೆಡೆ ಕೋವಿಡ್ ಪಾಸಿಟಿವ್‌ ಪ್ರಕರಣಗಳ ಹೆಚ್ಚಾಗುತ್ತಿವೆ. ಶುಕ್ರವಾರ ಒಟ್ಟು ಎರಡು ತಾಲೂಕಿನಲ್ಲಿ 87 ಕೋವಿಡ್ ಸೋಂಕಿನ ಪ್ರಕರಣಗಳು ಕಂಡು ಬಂದಿದ್ದು ಅದರಲ್ಲಿ 7 ಜನ ವೈದ್ಯರು ಹಾಗೂ 24 ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದೆ. ಗೋಕಾಕ ನಗರ-47, ಅಂಕಲಗಿ-18, ಮೂಡಲಗಿ-5, ಕೊಣ್ಣೂರ-5, ಸುಣಧೋಳಿ-2, ಶಿಂದಿಕುರಬೇಟ, ಮಲ್ಲಾಪುರ ಪಿ.ಜಿ, ಅಡಿಬಟ್ಟಿ, ಮುಸಗುಪ್ಪಿ, ಉದಗಟ್ಟಿ, ಯಾದವಾಡ, ಮಮದಾಪುರ, ನಾಗನೂರ, ಹುಣಶ್ಯಾಳ, ಘಟಪ್ರಭಾದಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡು ಬಂದಿವೆ. ಸೋಂಕಿತರು ವಾಸಿಸುವ 50 ಮೀ. ಪ್ರದೇಶಗಳನ್ನು ಸೀಲ್‌ ಡೌನ್‌ ಮಾಡಲಾಗಿದ್ದು, ಸೋಂಕಿತರಿಗೆ ಆಯಾ ಸಮೀಪದ ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next