ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಸೋಮವಾರವೂ ಅಬ್ಬರಿಸಿರುವ ಕೋವಿಡ್ ಸೋಂಕು ಮತ್ತೆ 69 ಹೊಸ ಜನರಿಗೆ ವಕ್ಕರಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3646ಕ್ಕೆ ಏರಿಕೆ ಆಗಿದೆ. ಬೀದರ್ ನಗರ, ತಾಲೂಕಿನ 25 ಜನ, ಭಾಲ್ಕಿ ತಾಲೂಕಿನ 20 ಮಂದಿ, ಬಸವಕಲ್ಯಾಣ- ಹುಲಸೂರು ತಾಲೂಕಿನ 14 ಜನ, ಔರಾದ- ಕಮಲನಗರ ತಾಲೂಕಿನ 5 ಮಂದಿ, ಹುಮನಾಬಾದ-ಚಿಟಗುಪ್ಪ ತಾಲೂಕಿನ 4 ಜನ ಹಾಗೂ ಅನ್ಯ -ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಇಂದಿನ 69 ಜನ ಸೋಂಕಿತರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 3646ಗೆ ಏರಿಕೆಯಾಗಿದೆ. ಈ ಪೈಕಿ 108 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಸೋಮವಾರ 12 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರಗೆ ಗುಣಮುಖರಾಗಿ ಬಿಡುಗಡೆ ಯಾದವರ ಸಂಖ್ಯೆ 2517ಗೆ ಹೆಚ್ಚಿದೆ. ಇನ್ನೂ 1017 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಈ ವರೆಗೆ 57,397 ಜನರ ಗಂಟಲು ಮಾದರಿ ತಪಾಸಣೆ ಮಾಡಲಾಗಿದ್ದು, ಈ ಪೈಕಿ 53,384 ಮಂದಿಯದ್ದು ನೆಗೆಟಿವ್ ಬಂದಿದ್ದು, ಇನ್ನೂ 376 ಜನರ ವರದಿ ಬರಬೇಕಿದೆ.