Advertisement

ಕಾಸರಗೋಡು: 3 ಮಂದಿಗೆ ಸೋಂಕು

10:50 AM Jun 16, 2020 | sudhir |

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ಮೂವರಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. 4 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

Advertisement

ಕುವೈಟ್‌ನಿಂದ ಆಗಮಿಸಿದ್ದ 21 ವರ್ಷದ ವ್ಯಕ್ತಿ, ಅಬುಧಾಬಿಯಿಂದ ಬಂದಿದ್ದ 38 ವರ್ಷದ ವ್ಯಕ್ತಿ ಮತ್ತು ಕೋಲ್ಕತಾದಿಂದ ಆಗಮಿಸಿದ್ದ 31 ವರ್ಷದ ವ್ಯಕ್ತಿಗೆ ಕೋವಿಡ್‌ ಸೋಂಕು ಖಚಿತವಾಗಿದೆ.

ಜಿಲ್ಲೆಯಲ್ಲಿ 3,538 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3,196 ಮಂದಿ, 342 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ಹೊಸದಾಗಿ 20 ಮಂದಿಯ ಸ್ಯಾಂಪಲ್‌ ತಪಾಸಣೆಗೆ ಕಳುಹಿಸಲಾಗಿದೆ. 243 ಮಂದಿಯ ಫಲಿತಾಂಶ ಲಭಿಸಿಲ್ಲ.

82 ಮಂದಿಗೆ ಸೋಂಕು
ಕೇರಳದಲ್ಲಿ ಸೋಮವಾರ 82 ಮಂದಿಗೆ ಸೋಂಕು ದೃಢೀಕರಿಸಲಾಗಿದೆ. ತಿರುವನಂತಪುರ ವಂಜಿಯೂರು ನಿವಾಸಿ ಎಸ್‌.ರಮೇಶನ್‌(67) ಜೂ. 12ರಂದು ಸಾವಿಗೀಡಾಗಿದ್ದು ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next