Advertisement

ದ.ಕ.: 44 ದಿನಗಳಲ್ಲಿ 125 ಮಂದಿ ಸಾವು; ಕೋವಿಡ್‌ ಇಳಿಮುಖಗೊಂಡರೂ ಸಾವಿನ ಪ್ರಮಾಣ ಏರಿಕೆ

10:57 PM Feb 16, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈನಿಕ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೊನಾ 3ನೇ ಅಲೆಯಲ್ಲಿ ಒಂದೂವರೆ ತಿಂಗಳಿನಲ್ಲಿ ಇಲ್ಲಿ 125 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 41 ಮಂದಿ ಹೊರ ಜಿಲ್ಲೆಯವರು.

Advertisement

ದ.ಕ. ಜಿಲ್ಲೆಯಲ್ಲಿ ಸಾವ ನ್ನಪ್ಪಿದ ಹೊರ ಜಿಲ್ಲೆಯವರಲ್ಲಿ ಉಡುಪಿ ಜಿಲ್ಲೆಯ 11 ಮಂದಿ, ಬೆಂಗಳೂರು, ಬಳ್ಳಾರಿ, ದಾವಣಗೆರೆ, ಹಾಸನ, ಹಾವೇರಿ ಜಿಲ್ಲೆಯ ತಲಾ ಒಬ್ಬರು, ಕೊಡಗಿನ ಇಬ್ಬರು, ಚಿತ್ರ ದುರ್ಗ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಯ ತಲಾ ನಾಲ್ವರು, ಚಿಕ್ಕಮಗಳೂರಿನ ಐವರು, ಶಿವಮೊಗ್ಗ ಜಿಲ್ಲೆಯ 6 ಮಂದಿ ಸೇರಿ ದ್ದಾರೆ. ಉಳಿದಂತೆ ಮಂಗಳೂರಿನ 50, ಬಂಟ್ವಾಳ ತಾಲೂಕಿನ 17, ಪುತ್ತೂರಿನ 9, ಬೆಳ್ತಂಗಡಿಯ 6, ಸುಳ್ಯದ ಇಬ್ಬರಿದ್ದಾರೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ಕೋವಿಡ್‌ ಹೆಲ್ತ್‌ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನ ಪ್ರಾಯೋಗಿಕ ಯೋಜನೆಗೆ ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಯನ್ನು ಸರಕಾರ ಆಯ್ಕೆ ಮಾಡಿದೆ. ದ.ಕ. ಜಿಲ್ಲೆಯಲ್ಲಿ ಸದ್ಯ ಪಾಸಿಟಿವ್‌ ಪ್ರಕರಣ, ಗುಣಮುಖ, ಸಾವು ಎಲ್ಲವೂ ರಿಯಲ್‌ ಟೈಂನಲ್ಲಿ ಅಂತರ್ಜಾಲದಲ್ಲಿ ಅಪ್‌ಡೇಟ್‌ ಆಗುತ್ತಿದೆ. ಅದರ ಆಧಾರದಲ್ಲಿಯೇ ಪ್ರತೀ ದಿನ ರಾಜ್ಯ ಸರಕಾರ ಕೋವಿಡ್‌ ಹೆಲ್ತ್‌ ಬುಲೆಟೆನ್‌ ಬಿಡುಗಡೆಯಾಗುತ್ತದೆ. ಹೊರ ಜಿಲ್ಲೆಯ ಮಂದಿ ದ.ಕ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದರೆ ಅದು ಜಿಲ್ಲೆಯ ಸಾವಿನ ಅಂಕಿಅಂಶಕ್ಕೆ ಸೇರುತ್ತದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಸದ್ಯ ಜಿಲ್ಲೆಯಲ್ಲಿ ಕೋವಿಡ್‌ನಿಂದ ದಾಖಲಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ. 90ರಷ್ಟು ಮಂದಿ ಅನ್ಯ ಕಾಯಿಲೆಯಿಂದ ಬಳಲುತ್ತಿರುವವರು. ಇತರ ಕಾಯಿಲೆಯ ಪರಿಣಾಮ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಅವರಿಗೆ ತಪಾಸಣೆ ನಡೆಸಿದಾಗ ಕೋವಿಡ್‌ ದೃಢಪಡುತ್ತದೆ. ಅನ್ಯ ಕಾಯಿಲೆಯ ಪರಿಣಾಮ ಸಾವನ್ನಪ್ಪಿದರೂ ಕೋವಿಡ್‌ ಸಾವು ಎಂದೇ ದಾಖಲಾಗುತ್ತದೆ.

ಮರಣ ಪ್ರಮಾಣ ದರ ಏರಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಣ ಪ್ರಮಾಣ ದರದಲ್ಲಿ ಆಗಸ್ಟ್‌ ಬಳಿಕ ಏರಿಳಿತ ಕಂಡುಬರುತ್ತಿದೆ. ಆಗಸ್ಟ್‌ ನಲ್ಲಿ ಶೇ. 1.53, ಸಪ್ಟೆಂಬರ್‌ನಲ್ಲಿ ಶೇ. 2.01ಕ್ಕೆ ಏರಿಕೆಯಾಗಿತ್ತು. ಅಕ್ಟೋಬರ್‌ನಲ್ಲಿ ಶೇ. 2.30, ನವೆಂಬರ್‌ನಲ್ಲಿ ಶೇ. 2.23, ಡಿಸೆಂಬರ್‌ನಲ್ಲಿ ಶೇ. 1.40 ಇತ್ತು. ಈ ವರ್ಷದ ಜನವರಿಯಲ್ಲಿ ಶೇ. 0.35ರಷ್ಟಕ್ಕೆ ಇಳಿಮುಖಗೊಂಡಿತು. ಆದರೆ ಫೆಬ್ರವರಿಯಲ್ಲಿ ಶೇ. 2.81ರಷ್ಟು ದಾಖಲಾಗಿದ್ದು, ಐದು ತಿಂಗಳಲ್ಲಿ ಅತೀ ಹೆಚ್ಚು ಮರಣ ದರ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದ್ದು, ಸಾವಿನ ಸಂಖ್ಯೆ ಏರುತ್ತಿದೆ. ಸದ್ಯ ಸಾವನ್ನಪ್ಪುವ ಶೇ. 90ರಷ್ಟು ಮಂದಿ ಅನ್ಯ ಕಾಯಿಲೆಯಿಂದ ಬಳಲುತ್ತಿರುವವರು. ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಲ್ಲಿ ದಾಖಲಾದ 125 ಮಂದಿಯಲ್ಲಿ 41 ಮಂದಿ ಹೊರ ಜಿಲ್ಲೆಯವರು. ಜನರು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಲಸಿಕೆ ಪಡೆಯದವರು ಬೇಗನೆ ಪಡೆದುಕೊಳ್ಳಬೇಕು
– ಡಾ| ಕಿಶೋರ್‌ ಕುಮಾರ್‌,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next