Advertisement

ಔರಾದ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲರ ಪುತ್ರ ಕೋವಿಡ್ ಸೋಂಕಿಗೆ ಬಲಿ

06:30 PM Sep 06, 2020 | sudhir |

ಬೀದರ್ : ಔರಾದ ತಾಲೂಕಿನ ಸಂತಪೂರ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಶಾಸಕ ಗುಂಡಪ್ಪ ವಕೀಲ ಅವರ ಪುತ್ರ ಅನೀಲ ಗುಂಡಪ್ಪ ಬಿರಾದಾರ (47) ಹೆಮ್ಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

Advertisement

ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನೀಲ ರವಿವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕೋವಿಡ್ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಬೀದರಿನಲ್ಲಿ ಆರಂಭಿಕ ಚಿಕಿತ್ಸೆ ಪಡೆದು, ನಂತರ ಕಳೆದ 10 ದಿನಗಳಿಂದ ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ತೀವ್ರವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಮೃತ ಅನೀಲ್ ಇಬ್ಬರು ಪತ್ನಿಯರು, ಮಕ್ಕಳನ್ನು ಅಗಲಿದ್ದಾರೆ.

ಇತ್ತಿಚೆಗೆ ಮಾಜಿ ಶಾಸಕ ಗುಂಪ್ಪ ವಕೀಲ ಅವರಲ್ಲೂ ಕೋವಿಡ್ ವೈರಾಣು ಪತ್ತೆಯಾಗಿತ್ತು. ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅನೀಲ್ ಅವರ ತಾಯಿಗೂ ಸೋಂಕು ತಗುಲಿದ್ದು, ಅವರೂ ಸಹ ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next