ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈವರೆಗೆ5 3ಕೋವಿಡ್ ಆರೈಕೆ ಕೇಂದ್ರ ತೆರೆದು, 10 ಸಾವಿರ ಹಾಸಿಗೆ ಸಿದ್ಧಮಾಡಿ, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಆದಿಚುಂಚನ ಗಿರಿಮಠದಿಂದ ಮಂಚನ ಬಲೆಬಿಜಿಎಸ್ ವಿದ್ಯಾನಿಕೇತನ ಶಾಲೆಯಲ್ಲಿ ತೆರೆದಿರುವ 100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಿ ಮಾತನಾಡಿ,ಈ ಕೇಂದ್ರದಲ್ಲಿ ದಾಖಲಾಗುವ ಸೋಂಕಿತರಿಗೆಆಹಾರ, ವೈದ್ಯರು, ಸಹಾಯಕ ಸಿಬ್ಬಂದಿಯನ್ನುಮಠದಿಂದಲೇ ಒದಗಿಸಲಾಗುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆ54ಕ್ಕೇರಿದೆ ಎಂದು ವಿವರಿದರು.
ಜಿಲ್ಲೆಯಲ್ಲಿ ಸೋಂಕಿತರ ಹೋಂಐಸೋಲೇಷನ್ ಆದಷ್ಟು ಕಡಿಮೆ ಮಾಡಲಾಗುತ್ತಿದೆ. ಶೇ.80ಸೋಂಕಿತರನ್ನು ಕೇರ್ ಸೆಂಟರ್‌ಗೆ ದಾಖಲುಮಾಡಲಾಗುತ್ತಿದೆ. ಈವರೆಗೆ 1500 ಮಂದಿ ಚಿಕಿತ್ಸೆಪಡೆಯುವಂತೆ ಮಾಡಲಾಗಿದೆ. ಈ ಮೂಲಕ 2ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಇಳಿಮುಖವಾಗುತ್ತಿದೆ ಎಂದು ವಿವರಿಸಿದರು.ಕಿಟ್, ಬಸ್ ವ್ಯವಸ್ಥೆ: ಶ್ರೀ ಮಠದಿಂದ 1 ಸಾವಿರಆರೋಗ್ಯ ಕಿಟ್ ಜಿಲ್ಲಾಡಳಿತಕ್ಕೆ ನೀಡಿದ್ದು,ಸೋಂಕಿನಿಂದ ಗುಣಮುಖರಾದವರನ್ನು ಅವರಮನೆಗೆ ತಲುಪಿಸಲು ಪ್ರತಿ ತಾಲೂಕಿಗೂಒಂದೊಂದುಬಸ್‌ವ್ಯವಸ್ಥೆ ಮಾಡಿದ್ದಾರೆ.
ಇದರಿಂದ ಜಿಲ್ಲಾಡಳಿತಕ್ಕೆ ಸಾಕಷ್ಟು ಅನುಕೂಲ ಆಗಿದೆ ಎಂದುಸ್ವಾಮೀಜಿಯವರಿಗೆಕೃತಜ್ಞತೆ ತಿಳಿಸಿದರು.ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ,ತಾಪಂ ಇಒ ಹರ್ಷವರ್ಧನ್, ತಾಲೂಕುಆರೋಗ್ಯಾಧಿಕಾರಿ ಮಂಜುಳಾ, ಗ್ರಾಪಂ ಅಧ್ಯಕ್ಷೆಗಾಯಿತ್ರಮ್ಮ, ಉಪಾಧ್ಯಕ್ಷ ಶ್ರೀಧರ್, ಪಿಡಿಒಮಂಜುನಾಥಾಚಾರಿ, ಪ್ರಾಂಶುಪಾಲ ಗಂಗಾಧರ್ ಇತರರಿದ್ದರು.