ಚಾಮರಾಜನಗರ: ನಗರದ ಸರ್ಕಾರಿ ವೈದ್ಯ ಕೀಯ ಕಾಲೇಜಿನ ಒಂದು ಭಾಗದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೇಂದ್ರವನ್ನು ತಾತ್ಕಾಲಿವಾಗಿ ಸಜ್ಜುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಅವರು, ಸೋಂಕಿತರಿಗೆ ಚಿಕಿತ್ಸೆ ನೀಡುವ ಮತ್ತೂಂದು ಕೇಂದ್ರವನ್ನು ತುರ್ತಾಗಿ ಆರಂಭಿಸುವ ಸಂಬಂಧ ಪರಿಶೀಲಿಸಿದರು.
ಈ ಹಿಂದೆ ಕಾಲೇಜಿನಲ್ಲಿ ಕೋವಿಡ್ ಕೇಂದ್ರಆರಂಭಿಸಿದ್ದ ಸಮಯದಲ್ಲಿ ಖರೀದಿಸಲಾಗಿರುವ ಹಾಸಿಗೆಗಳು, ಇತರೆ ಪೀಠೊಪಕರಣಗಳನ್ನು ಪ್ರಸ್ತುತ ನಡೆಸಲಾಗುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕಲೂ ಬಳಸಿ ಕೊಳ್ಳಬೇಕು. ಉಳಿದಂತೆ ಅಮ್ಲಜನಕ ಸೌಲಭ್ಯವುಳ್ಳ ಹಾಸಿಗೆ, ಕೋವಿಡ್ ರೋಗಿಗಳ ಚಿಕಿತ್ಸೆ ಆರೈಕೆ ಗಾಗಿ ಅವಶ್ಯಕವಿರುವ ಇತರೆ ಎಲ್ಲಾ ಸೌಲಭ್ಯಗಳ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಬೇಕೆಂದರು.
ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸಬೇಕು. ಇತರೆ ಆರೋಗ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು. ರೋಗಿಗಳಿಗೆ ಮೆನು ಪ್ರಕಾರವೇ ಆಹಾರ ನೀಡಬೇಕು. ಯಾವುದೇಕೊರತೆ ಬಾರದಂತೆ ಕೈಗೊಳ್ಳಬೇಕೆಂದರು. ನಿರ್ಮಾಣ ಪೂರ್ಣಗೊಳ್ಳುತ್ತಿರುವ ವೈದ್ಯಕೀಯಕಾಲೇಜಿನ ಆಸ ³ತ್ರೆ ಕಟ್ಟಡಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿ, ಇಲ್ಲಿನ ಕಟ್ಟಡದ ಒಂದು ಭಾಗದ ಮೊದಲೆರಡು ಮಹಡಿಯಲ್ಲಿ 200 ಹಾಸಿಗೆಯುಳ್ಳ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸುವ ಸಂಬಂಧ ಪರಿಶೀಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ, ವೈದ್ಯಕೀಯ ಕಾಲೇಜಿನ ನಿರ್ದೇಶಕರು ಹಾಗೂ ಡೀನ್ ಡಾ. ಸಂಜೀವ್, ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ.ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕಎಂಜಿನಿಯರ್ ಪೂರ್ಣಚಂದ್ರ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಮತ್ತಿತರರಿದ್ದರು.