Advertisement

ಗ್ರಾಪಂ ಮಟ್ಟದಲ್ಲಿ ಕೋವಿಡ್‌ ಕೇರ್‌ ಸೆಂಟರ್‌

03:20 PM May 19, 2021 | Team Udayavani |

ಚಿಕ್ಕೋಡಿ: ಕೊರೊನಾ ತಡೆಗಟ್ಟುವ ಸಲುವಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿಯೇ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

Advertisement

ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿ ಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ ಕೇರ್‌ ಕೇಂದ್ರಗಳಿಗೆ ಜನರು ಬರುತ್ತಿಲ್ಲ. ಕೆಲವರು ಮನೆಯಲ್ಲಿಯೇ ಹೊಂ ಐಸೊಲೇಶನ್‌ ಆಗುತ್ತೇವೆಂದು ಹೇಳಿ ಹೊಂ ಐಸೊಲೇಶನ್‌ ಆಗದೇ ಹೊರಗಡೆ ತಿರುಗಾಡುತ್ತಿದ್ದಾರೆ. ಇದರಿಂದ ಕರೊನಾ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು.

ಹಳ್ಳಿಯಲ್ಲಿರುವ ಸೋಂಕಿತರ ಮನವೊಲಿಸಿ ಅವರನ್ನು ಕೋವಿಡ್‌ ಕೇರ್‌ ಕೇಂದ್ರಗಳಿಗೆ ತರುವ ಕೆಲಸ ಮಾಡುವ ಉದ್ದೇಶದಿಂದ ಹಳ್ಳಿಗಳಲ್ಲಿಯೇ ಒಳ್ಳೆಯ ಗಾಳಿ, ಬೆಳಕು ಇರುವ ಸ್ಥಳದಲ್ಲಿ ಕೋವಿಡ್‌ ಕೇರ್‌ ಕೇಂದ್ರ ಆರಂಭಿಸಲು ಆಡಳಿತ ಯಂತ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರತಿ ಹಳ್ಳಿಗಳಲ್ಲಿ 30 ರಿಂದ 50 ಹಾಸಿಗೆಯ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ದಾದಿಯರು, ಡಿ ಗ್ರುಪ್‌ ಸಿಬ್ಬಂದಿ ಜೊತೆಗೆ ಒಬ್ಬರು ಯೋಗ ಶಿಕ್ಷಕರನ್ನು ನೇಮಕ ಮಾಡಿ ಕರೊನಾ ಸೋಂಕಿತರಿಗೆ ಪ್ರೋಟಿನ್‌ ಯುಕ್ತ ಆಹಾರ ಕೊಡುವ ವ್ಯವಸ್ಥೆಯನ್ನು ಮಾಡುವಂತೆ ಅಧಿ ಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಕರೊನಾ ಸೋಂಕಿತರು ಹಳ್ಳಿಗಳಲ್ಲಿ ತೆರೆಯುವ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಹೋದರೆ ಅವರ ಮನೆಯವರಿಗೆ ರೋಗ ಹಬ್ಬುವುದಿಲ್ಲ. ಹೊರಗಿನ ಸಮುದಾಯಕ್ಕೂ ಕರೊನಾ ವೈರಸ್‌ ಹಬ್ಬುವುದನ್ನು ತಡೆಯಲು ಾಧ್ಯವಾಗುತ್ತದೆ ಎಂದು ಹೇಳಿದರು. ಚಿಕ್ಕೋಡಿ ಉಪವಿಭಾಗದಲ್ಲಿ ಕರೊನಾ ಪರೀಕ್ಷೆ ಮಾಡಲು 16 ಟೆಕ್ನಿಶಿಯನ್‌ಗಳಿದ್ದಾರೆ. ತಲಾ ಒಬ್ಬರು ಪ್ರತಿ ನಿತ್ಯ 30ಕಿಂತ ಹೆಚ್ಚು ಕರೊನಾ ಪರೀಕ್ಷೆ ಮಾಡುವಂತೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.

Advertisement

ಈಗಿರುವ ಕೆಲವು ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಕೊರೊನಾ ಸೊಂಕಿತರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಇಲ್ಲಿ ಲಾಕ್‌ಡೌನ್‌ ಕಾಟಾಚಾರಕ್ಕೆಂಬಂತೆ ಪಾಲನೆ ಮಾಡಲಾಗುತ್ತಿದೆ. ಕರೊನಾ ನಿಯಂತ್ರಿಸುವಲ್ಲಿ ತಾಲೂಕಾ ಆಡಳಿತ ಸಂಪೂರ್ಣ ವಿಫಲವಾಗಿದೆ. ತಾಲೂಕಾ ಆಡಳಿತ ಇದ್ದೂ ಇಲ್ಲದಂತಾಗಿದೆ. ಹೀಗಾಗಿ ಹಳ್ಳಿಗಳಲ್ಲಿ ಕರೊನಾ ವ್ಯಾಪಕವಾಗಿ ಹರಡುತ್ತಿದೆ. ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಧಿಕಾರಿಗಳು ಅದರ ಬಗ್ಗೆ ಸರಿಯಾದ ಮಾಹಿತಿ ಪಡೆದು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.

ಕರೊನಾ ಸೋಂಕಿತರಿಗೆ ಆಕ್ಸಿಜನ್‌ ಮತ್ತು ರೆಮ್‌ಡೆಸಿವಿಯರ್‌ ಚುಚ್ಚುಮದ್ದು ದೊರೆಯದೆ ಪರದಾಡುವಂತಾಗಿದೆ ಎಂದು ಸುದ್ದಿಗಾರರು ಕೇಳಿದಾಗ, ಎಲ್ಲಿಯೂ ಆಕ್ಸಿಜನ್‌ ಮತ್ತು ಇಂಜೆಕ್ಷನ್‌ ಕೊರತೆಯಿಲ್ಲ. ಸಮರ್ಪಕ ಪೂರೈಕೆಯಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿ ದರ್ಶನ ಎಚ್‌.ವಿ, ಉಪವಿಭಾಗಾ ಧಿಕಾರಿ ಯುಕೇಶಕುಮಾರ, ಡಿಎಚ್‌ಓ ಡಾ.ಸದಾಶಿವ ಮುನ್ಯಾಳ, ತಹಶೀಲ್ದಾರ್‌ ಪ್ರವೀಣ ಜೈನ್‌, ಪುರಸಭೆ ಮುಖ್ಯಾ ಧಿಕಾರಿ ಡಾ.ಸುಂದರ ರೋಗಿ ಹಾಗೂ ಚಿಕ್ಕೋಡಿ ಉಪವಿಭಾಗ ಮಟ್ಟದ ಅಧಿ ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next