Advertisement

ಪೋಲಿಸರಿಂದ ಕೋವಿಡ್ ಬಗ್ಗೆ ಜಾಗೃತಿ

03:23 PM Apr 25, 2021 | Team Udayavani |

ಚೇಳೂರು: ಕೋವಿಡ್ ಸೋಂಕು ರಾಜ್ಯದ ಜನತೆಯನ್ನು ಭಯಭೀತಗೊಳಿಸಿದ್ದು, ಸರ್ಕಾರ ಹಲವುಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ, ವ್ಯಾಪಕವಾಗಿ ಅರಿವನ್ನೂ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲೂ ನಾಗರಿಕರಿಗೆ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಪಾಲಿಸಲು ಪೊಲೀಸರು ವಿದ್ಯಾರ್ಥಿಗಳ ಜೊತೆ ಜಾಗೃತಿ ಜಾಥಾ ನಡೆಸಿದರು.

Advertisement

ಪ್ರತಿಯೊಬ್ಬರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಕೊರೊನಾ ಸೋಂಕಿನಿಂದ ದೂರವಿರ ಬೇಕು, ಮಾಸ್ಕ್ ಧರಿಸಿ, ವೈಯಕ್ತಿಕ ಮತ್ತು ಮನೆಯಲ್ಲೂಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಸಹಕಾರ ನೀಡಬೇಕು. ಬೇರೆ ಗ್ರಾಮಗಳ ಜನರನ್ನು ಹಾಗೂ ಸಂಬಂಧಿಕರನ್ನು ನಿಮ್ಮಮನೆಗಳಿಗೆ ಸೇರಿಸಕೊಳ್ಳಬೇಡಿ ಎಂದು ಪೊಲೀಸರು ಮನವಿ ಮಾಡಿದರು. ಚೇಳೂರು ಪಟ್ಟಣದ ಬಸ್‌ ನಿಲ್ದಾಣದಿಂದ ಮಾನಸ ಕಾಲೇಜು ವಿದ್ಯಾರ್ಥಿಗಳ ಜೊತೆಪೊಲೀಸರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸಿದರು.

ಕೋವಿಡ್ ವೈರಸ್‌ ತಡೆಗಟ್ಟಲು ಅಧಿಕಾರಿಗಳು ಎಚ್ಚರದಿಂದ ಇರಬೇಕು. ಹೋಬಳಿಯ ಕೆಲ ಗ್ರಾಮಗಳಜನರು ಜೀವನೋಪಾಯಕ್ಕಾಗಿ ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ವ್ಯಾಪಾರ ಸಂಬಂಧ ಹೋಗಿ ಬರುತ್ತಿರುತ್ತಾರೆ. ಚೇಳೂರಿಗೂ ಮುಂಬೈ, ದೇಶದಇತರೆ ಮಹಾನಗರಗಳಿಂದ ಬರುತ್ತಾರೆ. ಅಂತಹವರುಕಂಡು ಬಂದರೆ ಅಕ್ಕ ಪಕ್ಕದವರು ಸಮೀಪದ ಸರ್ಕಾರಿಆಸ್ಪತ್ರೆಗೆ ಸೇರಿಸಿ ತಪಾಸಣೆ ಮಾಡಿಸಬೇಕು ಎಂದು ಪೊಲೀಸರು ಹೇಳಿದರು.

ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಗಮನಹರಿಸಿ ಗ್ರಾಮಗಳಿಗೆ ಭೇಟಿ ನೀಡಿ, ಸಮಗ್ರ ತನಿಖೆ ನಡೆಸಿ, ಕೋವಿಡ್ ವೈರಸ್‌ ತಡೆಗಟ್ಟಲು ಮುಂಜಾಗ್ರತೆ ಕ್ರಮವಹಿಸಲಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕಾರನೀಡಬೇಕಾಗಿದೆ ಎಂದು ತಿಳಿಸಿದರು. ಜನಜಾಗೃತಿಮೆರವಣಿಗೆಯಲ್ಲಿ ಎಎಸ್‌ಐ ಎಸ್‌.ಕೆ. ಅಮರೇಶ್‌ಬಾಬು, ಡಿ.ಜಿ. ನಾಗರಾಜ್‌, ಮುಖ್ಯ ಪೇದೆ ರವಣಪ್ಪ,ಇನಾಯತ್ತುಲ್ಲ, ವಿಧ್ಯಾಧರ್‌, ಲಿಂಗರಾಜ್‌, ಅಂಜಿನಪ್ಪ,ಮಾನಸ ಕಾಲೇಜು ಕಾರ್ಯದರ್ಶಿ ಟಿ.ಪಿ.ಆಶೋಕ್‌, ಶಿಕ್ಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next