Advertisement

ಸಾಮಾಜಿಕ ಅಂತರ ಪಾಲನೆ ನಿಯಮ ರೂಢಿಸಿಕೊಳ್ಳಿ

06:49 PM Nov 16, 2020 | Suhan S |

ಬೀದರ: ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಮೇಲಿಂದ ಮೇಲೆ ತಿಳಿಸುತ್ತಿದ್ದರೂ ಕೆಲವು ಜನರು ಮಾಸ್ಕ್ ಧರಿಸುವುದಾಗಲಿ, ಸಾಮಾಜಿಕ ಅಂತರ ಪಾಲನೆ ನಿಯಮಗಳನ್ನು ರೂಢಿಸಿಕೊಳ್ಳುತ್ತಿಲ್ಲ.

Advertisement

ಹೀಗಾಗಿ ಜನಜಾಗೃತಿ ಮೂಡಿಸುವ ವಾಹನಗಳು ಖುದ್ದು ಆಯಾ ಗ್ರಾಮಗಳಿಗೆ ತೆರಳಿ, ಜನರ ಮನೆಬಾಗಿಲ ಮುಂದೆ ನಿಂತು ಜನಜಾಗೃತಿ ಮೂಡಿಸಲು ವಾತಾ ಇಲಾಖೆಯ ಮೂಲಕ ಜನಜಾಗೃತಿ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.

ವಾರ್ತಾ ಇಲಾಖೆಯು ಹಮ್ಮಿಕೊಂಡಿರುವ ಕೋವಿಡ್‌-19 ಜಾಗೃತಿ ಕುರಿತಂತೆ ಪ್ರಚಾರ ಕಾರ್ಯ ನಡೆಸಲಿರುವ ಬೃಹತ್‌ ಎಲ್‌ಇಡಿ ಪರದೆ ಹೊಂದಿರುವ ವಾಹನಗಳಿಗೆ ಶನಿವಾರ ಔರಾದ ತಾಲೂಕಿನ ಘಮಸುಬಾಯಿ ತಾಂಡಾದಲ್ಲಿ ಹಸಿರು ನಿಶಾನೆ ತೋರಿದರು.

ಬೀದಿ ನಾಟಕಗಳ ಕಲಾ ತಂಡಗಳ ಮೂಲಕ ವಾರ್ತಾ ಇಲಾಖೆಯು ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜನರು ಈಗಾಗಲೇ ನೋಡಿದ್ದಾರೆ. ಆದರೆ, ಈಗ ಕೋವಿಡ್‌-19 ಹಿನ್ನೆಲೆಯಲ್ಲಿ ಕಲಾವಿದರ ಆರೋಗ್ಯದ ಹಿತದೃಷ್ಟಿಯಿಂದ ಎಲ್‌ಇಡಿ ವಾಹನಗಳ ಮೂಲಕ ಕೋವಿಡ್‌-19ರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪಿಡಿಒಗಳಿಗೆ ಸೂಚನೆ: ಈ ಎಲ್‌ಇಡಿ ಪರದೆಯ ವಾಹನವು ಆಯಾ ತಾಲೂಕುಗಳಲ್ಲಿ ಸಂಚರಿಸುವಾಗ ಸಂಬಂಧಿಸಿದ ಪಿಡಿಒಗಳು ಈ ಬಗ್ಗೆ ಗಮನ ಹರಿಸಿ, ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೋವಿಡ್‌-19 ಮುಂಜಾಗ್ರತಾ ಕ್ರಮದ ಸಂದೇಶ ತಲುಪುವ ಹಾಗೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

Advertisement

ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿದರು. ಜಿ.ಪಂ ಸದಸ್ಯ ಮಾರುತಿ ಚವ್ಹಾಣ, ಮುಖಂಡರಾದ ಬಸವರಾಜ ಸ್ವಾಮಿ, ಚಂದ್ರಕಾಂತ ಪಾಂಚಾಳ, ಮಾರುತಿ ಗುಳೆ, ಸಂಜೀವ ಪಾಂಚಾಳ ಹಾಗೂ ಇತರರು ಇದ್ದರು. ಶನಿವಾರ ವಾಹನಗಳು ಬೀದರ ತಾಲೂಕಿನ ಅಷ್ಟೂರ್‌, ಮಾಳೇಗಾಂವ್‌, ಚಿಲ್ಲರ್ಗಿ, ಚೀಮಕೋಡ್‌ ಮತ್ತು ಗಾದಗಿ ಗ್ರಾಮಗಳಲ್ಲಿ ಮತ್ತು ಔರಾದ ತಾಲೂಕಿನ ಸಂಗಮ, ಬಳತ್‌ (ಬಿ), ಬಳತ್‌ (ಕೆ), ಚಾಂದೋರಿ ಮತ್ತು ಹಾಲಹಳ್ಳಿ ಗ್ರಾಮಗಳಲ್ಲಿ ಸಂಚಾರ ನಡೆಸಿ, ಜನಜಾಗೃತಿ ಮೂಡಿಸಿದವು.

ರವಿವಾರ ಕಾರ್ಯಕ್ರಮ ಎಲ್ಲೆಲ್ಲೆ?: ಎಲ್‌ಇಡಿ ಪರದೆಯ ವಾಹನಗಳು ನ. 15 ರಂದು ಬೀದರ ತಾಲೂಕಿನ ಚಿಕ್ಕಪೇಟ್‌, ಮರಖಲ್‌, ಜನವಾಡ, ಚಾಂಬೋಳ ಮತ್ತು ಹಳೆಂಬರ್‌ ಗ್ರಾಮಗಳಲ್ಲಿ ಹಾಗೂ ಔರಾದ ತಾಲೂಕಿನಲ್ಲಿ ಠಾಣಾಕುಶನೂರ, ನಿಡೋದಾ, ರಕ್ಷಾಳ (ಬಿ), ರಕ್ಷಾಳ (ಕೆ) ಮತ್ತು ಹೆಡಗಾಪುರ ಗ್ರಾಮಗಳಲ್ಲಿ ಸಂಚಾರ ನಡೆಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next