Advertisement
ನ್ಯಾ| ಬಿ.ಎಸ್. ರೇಖಾ ಅವರು ಮಾತನಾಡಿ, ಮಹಾಮಾರಿ ಕೋವಿಡ್-19 ಹರಡುವಿಕೆ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ನ್ಯಾಯಾಲಯ, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು ಮತ್ತು ಎಲ್ಲೆಡೆ ಮಾಸ್ಕ್ ಹಾಕಿಕೊಳ್ಳದೇ ಇರುವವರಿಗೆ ಕಾನೂನಿನ ರೀತಿಯಲ್ಲಿ ತಿಳಿ ಹೇಳುವುದು, ಜನರಲ್ಲಿಇದರ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ “ಕೋವಿಡ್-19 ಪ್ರಚಾರಾಂದೋಲನ’ “ಸುರಕ್ಷಿತರಾಗಿರಿ ಮತ್ತುಇತರರನ್ನು ಸುರಕ್ಷಿತವಾಗಿರಿಸಿ’ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Related Articles
Advertisement
ಕುಷ್ಟಗಿ: ಕೋವಿಡ್ ವೈರಸ್ ಸಮುದಾಯಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ನ್ಯಾಯಾಲಯಗಳು ಕೋವಿಡ್-19 ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದನ್ವಯ ಜಾಗೃತಿ ಆಂದೋಲನಕ್ಕೆ ಹಿರಿಯ ಶ್ರೇಣಿ ನ್ಯಾಯಾಲಯಗಳ ನ್ಯಾಯಾಧೀಶರಾದಬಿ.ಎಸ್. ಹೊನ್ನುಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಸಾರ್ವಜನಿಕರಿಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಪಾಲಿಸುವ ಕುರಿತು ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಸಾಂಕೇತಿಕವಾಗಿ ಕೋವಿಡ್ ಜಾಗೃತಿ ಕರಪತ್ರ ವಿತರಿಸಿದರು.
ನಂತರ ಮಾತನಾಡಿದ ನ್ಯಾಯಾಧೀಶರಾದ ಹೊನ್ನುಸ್ವಾಮಿ ಅವರು, ಕೋವಿಡ್ ವೈರಸ್ ಶೂನ್ಯವಾಗುವವರೆಗೂ ಸಾರ್ವಜನಿಕರು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಸೋಪಿನಿಂದ ಕೈ ತೊಳಿಯುವುದು ಜೀವನ ಶೈಲಿಗೆ ಬದಲಿಸಿಕೊಳ್ಳಬೇಕು ಎಂದರು.
ನ್ಯಾಯಾಧೀಶರಾದ ಚಂದ್ರಶೇಖರ ತಳವಾರ, ನ್ಯಾಯಾಧೀಶರಾದ ರಫೀಕ್ ಅಹ್ಮದ್, ತಹಶೀಲ್ದಾರ್ ಎಂ. ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ್, ವೈದ್ಯಾಧಿ ಕಾರಿಡಾ| ಕೆ.ಎಸ್. ರಡ್ಡಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಎಚ್.ಬಿ. ಕುರಿಮತ್ತಿತರಿದ್ದರು. ಜಾಥಾದಲ್ಲಿ ಅಂಗನವಾಡಿ, ಆಶಾಕಾರ್ಯಕರ್ತೆಯರು, ಗೃಹರಕ್ಷಕ ದಳ, ಕಲಾವಿದರು, ವಕೀಲರು ಭಾಗವಹಿಸಿದ್ದರು.