Advertisement

ಪೌರರಕ್ಷಣಾ ಘಟಕದಿಂದ ಕೋವಿಡ್‌ ಜಾಗೃತಿ

06:48 PM Apr 29, 2021 | Team Udayavani |

ಬಳ್ಳಾರಿ: ಇಲ್ಲಿನ ಬಳ್ಳಾರಿ ಪೌರರಕ್ಷಣಾಘಟಕದ ವತಿಯಿಂದ ಮಹಾನಗರಪಾಲಿಕೆ ಚುನಾವಣೆ ಸಮಯದಲ್ಲಿಮತದಾರರಲ್ಲಿ ಕೋವಿಡ್‌ ಬಗ್ಗೆಜಾಗೃತಿ ಮೂಡಿಸಲಾಯಿತು.

Advertisement

ಪಾಲಿಕೆಚುನಾವಣೆ ನಿಮಿತ್ತ ವಿವಿಧ ವಾಡ್‌ìಗಳಲ್ಲಿ ಪೌರರಕ್ಷಣಾ ಸದಸ್ಯರುಪೊಲೀಸರ ಸಹಯೋಗದೊಂದಿಗೆಮತಗಟ್ಟೆಗೆ ಮತದಾನ ಮಾಡಲುಬರುವ ಜನರಿಗೆ ಮಾಸ್ಕ್, ಸ್ಯಾನಿಟೈಸರ್‌ಮತ್ತು ಸಾಮಾಜಿಕ ಅಂತರವನ್ನುಕಾಪಾಡಿಕೊಳ್ಳಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಹಿರಿಯ ನಾಗರಿಕರುಹಾಗೂ ವೃದ್ಧರು ವ್ಹೀಲ್‌ಚೇರ್‌ ಮೂಲಕಮತಗಟ್ಟೆ ಕೇಂದ್ರಕ್ಕೆ ಬಂದು ಮತದಾನಮಾಡಲು ಪೌರರಕ್ಷಣಾ ಸಿಬ್ಬಂದಿಸಹಾಯ ಮಾಡಿದರು.ಪೌರರಕ್ಷಣಾ ಘಟಕದ ಮುಖ್ಯವಾರ್ಡನ್‌ ಎಮ್‌.ಎ. ಶಕೀಬ್‌,ಸಹಾಯಕ ಮುಖ್ಯವಾರ್ಡನ್‌ ಎನ್‌.ಎಸ್‌.ಲಕ್ಷ್ಮೀ ನರಸಿಂಹ, ಪೌರರಕ್ಷಣಾದಳದ ಡಿವಿಸನಲ್‌ ವಾರ್ಡನ್‌ ಪಿ.ಗೋವಿಂದರಾಜುಲು, ಕಚೇರಿ ಸಿಬ್ಬಂದಿಹೊಸಪೇಟೆ ಜಡೆಪ್ಪ, ಮನೋಜ್‌,ಈಶ್ವರಪ್ಪ, ಎರ್ರಿಸ್ವಾಮಿ, ಕಿರಣ್‌ಕುಮಾರ್‌, ಪ್ರಕಾಶ್‌, ಮುನೀರ್‌ಭಾಷ, ಖೈರುನ್‌ ಬೀ, ಜಮಿಲಾಬಾನು,ಶಮೀಮಬಾನು ಹಾಗೂ ಇತರರುಜನರಲ್ಲಿ ಕೋವಿಡ್‌ ಬಗ್ಗೆ ಜಾಗೃತಿಮೂಡಿಸುವ ಕೆಲಸ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next