Advertisement

ಕೋವಿಡ್ ವಿರುದ್ಧದ ಹೋರಾಟಕ್ಕೆ ಶ್ರೀಗಳ ಸಾಥ್‌­

06:57 PM May 24, 2021 | Team Udayavani |

ಚಿಕ್ಕೋಡಿ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲರೂ ಮನೆಯಲ್ಲಿ ಇದ್ದು ಸರ್ಕಾರದ ಮಾರ್ಗಸೂಚಿ ಪಾಲಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ನಗರದ ಪ್ರತಿವಾರ್ಡಿನಲ್ಲಿ ಪುರಸಭೆ ಸದಸ್ಯರೊಂದಿಗೆ ಕೊರೊನಾ ಜಾಗೃತಿ ಮೂಡಿಸಿದರು.

Advertisement

ಜಾಗೃತಿ ಸಂದರ್ಭದಲ್ಲಿ ಮಾತನಾಡಿದ ಅವರು, ಮಠಾಧೀಶರು ತಮ್ಮ ತಮ್ಮ ಭಾಗದಲ್ಲಿ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಎರಡನೇ ಅಲೆಗೆ ಹೆಚ್ಚು ಯುವಕರು ಬಲಿಯಾಗುತ್ತಿದ್ದಾರೆ. ಇದು ನಿಲ್ಲಬೇಕು. ನಮ್ಮ ಯುವ ಶಕ್ತಿ ಬೆಳೆಯಬೇಕು ಅದಕ್ಕಾಗಿ ಎಲ್ಲರೂ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ನಿಮಗೂ ತೊಂದರೆಯಾಗುತ್ತದೆ. ಮನೆಯಲ್ಲಿ ಇದ್ದು ಕೊರೊನಾ ಗೆಲ್ಲೋಣ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ನಿಮ್ಮ ಮನೆಯ ನೆರೆಹೊರೆಯವರಿಗೂ ಧೈರ್ಯ ತುಂಬಿರಿ. ಅವರಿಗೆ ಸಹಾಯ, ಸಹಕಾರ ನೀಡಿರಿ. ಅಲ್ಲದೇ ಮೂರನೇ ಅಲೆಯ ಬಗ್ಗೆಯೂ ಎಚ್ಚರಿಕೆ ಇರಲಿ. ಮಕ್ಕಳನ್ನು ಕಾಪಾಡುವ ಜವಾಬ್ದಾರಿ ಪಾಲಕರ ಮೇಲಿದೆ. ಈ ಸಂದರ್ಭದಲ್ಲಿ ಒಬ್ಬರನೊಬ್ಬರು ದೂರುವುದನ್ನು ಬಿಟ್ಟು ಒಬ್ಬರಿಗೊಬ್ಬರು ಸಹಾಯ ಮಾಡಿರಿ. ಕೊರೊನಾ ದೇಶ ಬಿಟ್ಟು ತೊಲಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಜಾಗೃತಿ ಮೂಡಿಸಿದರು. ಚಿಕ್ಕೋಡಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಮುಖ್ಯಾ ಧಿಕಾರಿ ಡಾ| ಸುಂದರ ರೋಗಿ, ಬಾಬು ಮಿರ್ಜೆ, ನಾಗರಾಜ ಮೇದಾರ, ಸಂತೋಷ ಕಾಮಗೌಡ, ಸಿದ್ದಪ್ಪ ಡಂಗೇರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next