ನವದೆಹಲಿ: ಕೋವಿಡ್ ಸಂಬಂಧಿತ ನಿಯಮಗಳು, ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳ ಮಾರ್ಗಸೂಚಿಗಳ ಅನ್ವಯವೇ 2022ರ ಸಾಲಿನ ಹಜ್ ಯಾತ್ರೆಗೆ ಆಯ್ಕೆ ನಡೆಯಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಶುಕ್ರವಾರ ಹಜ್ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, “2022ರ ಹಜ್‌ಗೆ ಸಂಬಂಧಿಸಿದ ಅಧಿಕೃತ ಘೋಷಣೆಯನ್ನು ನವೆಂಬರ್ ಮೊದಲ ವಾರದಲ್ಲಿ ಮಾಡಲಾಗುವುದು. ಅದರೊಂದಿಗೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಲಿದೆ’ ಎಂದಿದ್ದಾರೆ.
ಎಲ್ಲ ಹಜ್ ಯಾತ್ರಾರ್ಥಿಗಳಿಗೂ ಡಿಜಿಟಲ್ ಹೆಲ್ತ್ ಕಾರ್ಡ್, ಮೆಕ್ಕಾ-ಮದೀನಾದಲ್ಲಿ ವಸತಿ ಹಾಗೂ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಒಳಗೊಂಡ “ಇ-ಮಸೀಹಾ’ ಆರೋಗ್ಯ ಸೇವೆ ಮತ್ತು “ಇ-ಲಗೇಜ್ ಪ್ರೀ-ಟ್ಯಾಗಿಂಗ್’ ನೀಡಲಾಗುವುದು.
ಇದನ್ನೂ ಓದಿ:ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫಲ್ಯ
ಎರಡೂ ಡೋಸ್ ಲಸಿಕೆ ಪಡೆದವರಿಗಷ್ಟೇ ಯಾತ್ರೆಗೆ ಅನುಮತಿ ನೀಡಲಾಗುದುವು ಎಂದೂ ನಖ್ವಿ ತಿಳಿಸಿದ್ದಾರೆ. ಮುಂದಿನ ವರ್ಷದ ಹಜ್ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಕೊರೊನಾ ಮಾರ್ಗಸೂಚಿ ಪಾಲನೆ ಸಂಬಂಧ ಎಲ್ಲ ಯಾತ್ರಿಗಳಿಗೂ ವಿಶೇಷ ತರಬೇತಿ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.