Advertisement
ಉದಯವಾಣಿ ಕಿರು ಸಂದರ್ಶನಲ್ಲಿ ಕೋವಿಡ್ ನಿಯಂತ್ರಣದ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ
Related Articles
Advertisement
ಪರಿಸ್ಥಿತಿ ಸುಧಾರಿಸುತ್ತಿದೆ.ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿದೆ. ಸೋಂಕಿ ನಿಂದ ಗುಣಮುಖರಾಗುತ್ತಿರುವವ ಸಂಖ್ಯೆಯೂ ಹೆಚ್ಚಾಗುತ್ತಿದೆ.ಮರಣ ಪ್ರಮಾಣ ಇಳಿಮುಖ ಆಗುತ್ತಿದೆ. ಸರ್ಕಾರದ ಸ್ಪಂದನೆ ಇಲ್ಲದ ಕಾರಣ ಇದು ನನಗೆ ತೃಪ್ತದಾಯಕವಾಗಿಲ್ಲ. ಕೋವಿಡ್ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಜನರ ಹಿತಾಸಕ್ತಿ ಮುಖ್ಯ. ಸೇವಾ ಕಾರ್ಯಕ್ಕೆ ಕಾಂಗ್ರೆಸ್‌ಕಾರ್ಯಕರ್ತರ ತಂಡ ರಚನೆ ಮಾಡಿದ್ದೇನೆ.
ಕೋವಿಡ್ ಸಂಕಷ್ಟಕ್ಕೆ ಪರಿಹಾರ ಸಿಕ್ಕಿದೆಯೇ?
2ನೇ ಅಲೆ ತೀವ್ರ ಸ್ವರೂಪ ಪಡೆದು ನಿತ್ಯ ನೂರಾರು ಸೋಂಕಿತರು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಆಕ್ಸಿಜನ್ ಬೆಡ್‌ಕೊರತೆ ಉಂಟಾಗಿತ್ತು. ಇದನ್ನುಭರಿಸುವಂತೆ ಸರ್ಕಾರಕ್ಕೆ ಹಾಗೂಜಿಲ್ಲಾಡಳಿತಕ್ಕೆ ಮನವಿಸಲ್ಲಿಸಲಾಗಿತ್ತು.
ಇದರ ಬಗ್ಗೆಸರ್ಕಾರದಿಂದಾಗಲಿ,ಜಿಲ್ಲಾಡಳಿತದಿಂದಾಗಲಿ ಯಾವುದೇಪರಿಹಾರ ಸಿಗಲಿಲ್ಲ. ಆಕ್ಸಿಜನ್ ಬೆಡ್‌ಗಾಗಿ ಆಸ್ಪತ್ರೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವಜಿ.ಸಿ.ಮಾಧುಸ್ವಾಮಿ ನಮ್ಮಲ್ಲಿ ಆಕ್ಸಿಜನ್ ಕೊರತೆ ಇದೆ, ಅದನ್ನುನೀವೆ ಮಾಡಿಕೊಳ್ಳಿ ಎಂದು ಹೇಳಿ ಕೈತೊಳೆದುಕೊಂಡರು. ತಾಲೂಕಿನ ಜನರ ಜೀವ ಉಳಿಸುವ ದಿಸೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 70ಆಕ್ಸಿಜನ್ ಬೆಡ್, ಸಪ್ತಗಿರಿ ಶಾಸಗಿ ಆಸ್ಪತ್ರೆಯಲ್ಲಿ 20ಆಕ್ಸಿಜನ್ ಬೆಡ್, ಶಾಮೀರ್ ಆಸ್ಪತ್ರೆಯಲ್ಲಿ 10ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಎಂ.ಎಂಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೆಡ್ ವ್ಯವಸ್ಥೆಗೆಮಾತುಕತೆ ನಡೆದಿದ್ದು, ಇದಕ್ಕೆ ಡಾ.ರವಿಕುಮಾರ್‌ಸಹಮತ ವ್ಯಕ್ತ ಪಡಿಸಿದ್ದಾರೆ.
ಕೋವಿಡ್ ಆಸ್ಪತ್ರೆ, ಆರೈಕೆ ಕೇಂದ್ರಗಳಿಗೆ ಭೇಟಿಕೊಟ್ಟಿದ್ದೀರಾ?
ಹೌದು ಕೊಟ್ಟಿದ್ದೇನೆ, ನಿತ್ಯ ಆಸ್ಪತ್ರೆಗಳಿಗೂ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಕೋವಿಡ್ ಕೇರ್‌ಸೆಂಟರ್‌ಗಳಿಗೂ ಭೇಟಿ ಕೊಟ್ಟು ಮಾಹಿತಿ ಪಡೆಯುತ್ತಿದ್ದೇನೆ. ಗುಣಮಟ್ಟದ ಆಹಾರ ಪೂರೈಕೆ, ಸ್ವತ್ಛತೆ, ಮೂಲ ಸೌಕರ್ಯಕ್ಕೆ ಸೂಚನೆ ನೀಡಿದ್ದೇನೆ.ಸೋಂಕಿತರಿಗೆ ಚಿಕಿತ್ಸೆ ನೀಡಿ ಆತ್ಮಸ್ಥೈರ್ಯತುಂಬುತ್ತಿದ್ದೇನೆ. ವಾರಕ್ಕೊಮ್ಮೆ ಕೋವಿಡ್‌ವಿಚಾರದಲ್ಲಿ ಅಧಿಕಾರಿಗಳ ಹಾಗೂ ಪಿಡಿಒಗಳ ಸಭೆನಡೆಸಿ ಮಾಹಿತಿ ಪಡೆಯುತ್ತಿದ್ದೇನೆ.
ಕೋವಿಡ್ ವಿಚಾರದಲ್ಲಿ ಶಾಸಕರಾಗಿ, ಒಬ್ಬವ್ಯಕ್ತಿಯಾಗಿ ಏನು ಕೊಡುಗೆ?ಶಾಸಕನಾಗಿ ಸೋಂಕಿತರ ಚಿಕಿತ್ಸೆಗೆ ಬೇಕಾದವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಂಡಿದ್ದೇನೆ. ರೋಟರಿ ಬೆಂಗಳೂರು ಸೌತ್ ಪರೇಡ್‌ನವರಿಗೆ ಮನವಿಮಾಡಿ ಈಗಾಗಲೇ 10 ಆಕ್ಸಿಜನ್ ಸಾಂದ್ರಕಗಳವ್ಯವಸ್ಥೆ ಮಾಡಿದ್ದೇನೆ.ಇನ್ನೂ ಹತ್ತು ಸಾಂದ್ರಕಗಳು ಬರಲಿದೆ. ಒಂದುಸಾವಿರ ಸೋಂಕಿತರಿಗೆ ಪಲ್ಸ್ ಆಕ್ಸಿಮೀಟರ್,ಥರ್ಮಮೀಟರ್, ಮಾತ್ರೆ, ಮಾಸ್ಕ್ ಸೇರಿದಂತೆಕೋವಿಡ್ ಕಿಟ್ ನೀಡಲಾಗಿದೆ. ಡಿಕೆಎಸ್‌ಚಾರಿಟ್ರಬಲ್ ಟ್ರಸ್ಟ್ ವತಿಯಿಂದ ಆ್ಯಂಬುಲೆನ್ಸ್‌ಹಾಗೂ ಬ್ಲಾ ಕ್ ಫಂಗಸ್ ನಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆ ವ್ಯವಸ್ಥೆ, ಕೋವಿಡ್‌ಸೋಂಕಿತರ ಮಾಹಿತಿಗಾಗಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಯಾವ ಬೇಡಿಕೆಗಾಗಿ ಸರ್ಕಾರಕ್ಕೆ ಮನವಿಮಾಡಿದ್ದೀರಾ? ಪಟ್ಟಣದಲ್ಲಿ ಶವ ಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ ಅಳವಡಿಸಲು ಕಟ್ಟಡ ನಿರ್ಮಾಣವಾಗಿದೆ. ಆದರೆ,ವಿದ್ಯುತ್ ಚಿತಾಗಾರಕ್ಕೆ ಬೇಕಾದ ಯಂತ್ರೋಪಕರಣಗಳಿಗೆ ಒಂದು ಕೋಟಿ ರೂ. ಬಿಡಗಡೆ ಹಾಗೂ ಆಕ್ಸಿಜನ್ ಪ್ಲಾಟ್, ಐಸಿಯು ಬೆಡ್‌ಹೆಚ್ಚಳ, ಮಕ್ಕಳ ಆಸ್ಪತ್ರೆಗೆ ಸರ್ಕಾರಕ್ಕೆ ಮನವಿಮಾಡಲಾಗಿದೆ. ಕೆ.ಎನ್.ಲೋಕೇಶ್