Advertisement

3ನೇ ಅಲೆಗೆ ಮಧ್ಯಾಂತರ ಯೋಜನೆ!

11:57 PM Aug 02, 2021 | Team Udayavani |

ಬೆಂಗಳೂರು: ಕೊರೊನಾ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸರಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, 1,471 ಕೋಟಿ ರೂ. ಮೊತ್ತದ ಮಧ್ಯಾಂತರ ಯೋಜನೆ ಸಿದ್ಧ ಪಡಿಸಿದೆ.

Advertisement

ವಾರದಿಂದ ಗಡಿ ಜಿಲ್ಲೆಗಳಲ್ಲಿ  ಕೊರೊನಾ  ಪ್ರಕರಣ ಏರು ಗತಿಯಲ್ಲಿದ್ದು, 3ನೇ ಅಲೆ ಉಂಟಾ ಗುವ ಲಕ್ಷಣಗಳು ಗೋಚರಿಸ ಲಾರಂಭಿಸಿವೆ.

ಆಸ್ಪತ್ರೆ ಮೂಲಸೌಕರ್ಯ ವೃದ್ಧಿ  :

ಜಿಲ್ಲಾಸ್ಪತ್ರೆ:

  • 35ರಿಂದ 500 ಆಮ್ಲಜನಕಯುಕ್ತ ಹಾಸಿಗೆ
  • ಹೆಚ್ಚುವರಿ 13 ಕಿಲೋ ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ)
  • 8 ಜಿಲ್ಲಾಸ್ಪತ್ರೆಗಳಿಗೆ ಸಾವಿರ ಎಲ್‌ಪಿಎಂ ಆಮ್ಲಜನಕ ಉತ್ಪಾದನ ಘಟಕ
  • 10 ಮಕ್ಕಳ ಐಸಿಯು ಹಾಸಿಗೆ ಸಹಿತ 50 ಐಸಿಯು ಹಾಸಿಗೆ
  • 5 ಮಕ್ಕಳ ಐಸಿಯು ಹಾಸಿಗೆಗಳಿಗೆ ವೆಂಟಿಲೇಟರ್‌

ತಾಲೂಕು ಆಸ್ಪತ್ರೆ :

  •  ಹೆಚ್ಚುವರಿ 50 ಆಮ್ಲಜನಕಯುಕ್ತ ಹಾಸಿಗೆ
  • 6 ಕಿಲೋ ದ್ರವ ವೈದ್ಯಕೀಯ ಆಮ್ಲಜನಕ ಘಟಕ (ಎಲ್‌ಎಂಒ)
  • 5 ಮಕ್ಕಳ ಐಸಿಯು ಹಾಸಿಗೆ ಸಹಿತ 25 ಐಸಿಯು ಹಾಸಿಗೆ
  •  2 ಮಕ್ಕಳ ವೆಂಟಿಲೇಟರ್‌ ವ್ಯವಸ್ಥೆಯ ಐಸಿಯು ಹಾಸಿಗೆ
Advertisement

ಇದೇ ತಿಂಗಳು 3ನೇ ಅಲೆ? :

2ನೇ ಅಲೆಯ ಆಗಮನದ ಬಗ್ಗೆ ಸರಿಯಾದ ಭವಿಷ್ಯ ನುಡಿದಿದ್ದ ಸಂಶೋಧಕರು ಆಘಾತಕಾರಿ ಸುದ್ದಿಯೊಂದನ್ನು ನೀಡಿದ್ದು, ಇದೇ ತಿಂಗಳು 3ನೇ ಅಲೆ ಆರಂಭವಾಗಲಿದೆ ಎಂದಿದ್ದಾರೆ. ಐಐಟಿ ಕಾನ್ಪುರದ ತಜ್ಞರು ಈ ಅಂದಾಜು ಮಾಡಿದ್ದಾರೆ. ಈ ಅವಧಿಯಲ್ಲಿ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಪ್ರಕರಣಗಳು ಕಂಡುಬರಬಹುದು ಎಂದಿದ್ದಾರೆ. ಸಮಾಧಾನಕರ ವಿಷಯವೆಂದರೆ ಮೂರನೇ ಅಲೆ 2ನೇ ಅಲೆಯಷ್ಟು ಗಂಭೀರವಾಗಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next