Advertisement

ಹಳ್ಳಿಗಳಿಗೂ ವ್ಯಾಪಿಸಿದ ಕೋವಿಡ್ 2ನೇ ಅಲೆ ಸೋಂಕು

01:08 PM May 01, 2021 | Team Udayavani |

ಯಳಂದೂರು: ಈ ಬಾರಿ ಕೋವಿಡ್‌ನ‌ 2ನೇ ಅಲೆ ಯಳಂದೂರು ಪಟ್ಟಣಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿ ಕಂಡುಬರುತ್ತಿದ್ದು, ಗ್ರಾಮಿಣ ಜನರ ಆತಂಕಕ್ಕೆ ಕಾರಣವಾಗಿದೆ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಹಳ್ಳಿಗಳಲ್ಲೂ ಕೋವಿಡ್‌ ಸ್ಫೋಟ ವಾಗಲಿದೆ.

Advertisement

ಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಇದುವರೆಗೆ 62 ಪ್ರಕರಣಗಳು ದಾಖಲಾಗಿವೆ. ಗುಂಬಳ್ಳಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 61, ಅಗರ-ಮಾಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 58, ಗೌಡಹಳ್ಳಿ ವ್ಯಾಪ್ತಿಯಲ್ಲಿ 32 ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕೋವಿಡ್‌ 2ನೇ ಅಲೆಯ ಅಬ್ಬರ ಹೆಚ್ಚಾಗಿದೆ. ಯಳಂದೂರು ಪಟ್ಟಣದಲ್ಲಿ ಇದುವರೆಗೆಕೇವಲ 17 ಪ್ರಕರಣ ಮಾತ್ರ ದಾಖಲಾಗಿದ್ದು, ಒಟ್ಟು 280 ಪ್ರಕರಣಗಳು ತಾಲೂಕಿನಲ್ಲಿ ದಾಖಲಾಗಿವೆ.

ಕಳೆದ ವರ್ಷದ ನಿರ್ಬಂಧ ಈಗಿಲ್ಲ: ಕಳೆದ ವರ್ಷಕೋವಿಡ್‌ನ‌ ಸಂದರ್ಭದಲ್ಲಿ ಕೆಲ ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮ, ಬೀದಿಗಳಿಗೆಸ್ವಯಂ ನಿರ್ಬಂಧ ಹೇರಿಕೊಂಡಿದ್ದರು. ಅಲ್ಲದೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಂದ ಬರುವ ಜನರಿಗೆ ನಿರ್ಬಂಧ ವಿಧಿಸಿದ್ದರು. ಅವರದ್ದೇಆದ ನಿಯಮಗಳನ್ನು ರೂಪಿಸಿಕೊಂಡಿದ್ದರು.ಇದನ್ನು ಮೀರಿದವರಿಗೆ ದಂಡವನ್ನು ಕೆಲ ಭಾಗದಲ್ಲಿವಿಧಿಸ ಲಾಗುತ್ತಿತ್ತು. ಆದರೆ ಈ ಬಾರಿ ಇಂತಹಯಾವುದೇ ನಿರ್ಬಂಧ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿಲ್ಲ.

ಮಾರ್ಗಸೂಚಿ ಉಲ್ಲಂಘನೆ: ಕೋವಿಡ್‌ ಎರಡನೇ ಅಲೆಯ ತೀವ್ರತೆ ಆತಂಕದ ಬಗ್ಗೆ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿಯೇ ಜನರು ಹೆಚ್ಚಿನ ನಿರ್ಲಕ್ಷಿಸುತ್ತಿದ್ದಾರೆ. ಒಂದೆಡೆ ಮಾರ್ಗಸೂಚಿ ನಿಯಮ ಪಾಲಿಸುತ್ತಿಲ್ಲ, ಉಲ್ಲಂಘನೆ ಮಾಡಿದವ ರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿಲ್ಲ, ಮತ್ತೂಂದೆಡೆ ಬಹುತೇಕರು ಸೋಂಕನ್ನು ಕಡೆಗಣಿಸುವ ಹಳೆ ಚಾಳಿ ಪ್ರದರ್ಶಿಸುತ್ತಿದ್ದಾರೆ. ಸಮರ್ಪಕವಾಗಿ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ, ಜನರು ಕೂಡ ಜನರು ಗುಂಪಿನಲ್ಲಿ ಸೇರುವಿಕೆ ಎಲ್ಲೆಂದರಲ್ಲಿ ಉಗುಳುವುದು,ಮಾಸ್ಕ್ ಹಾಕದೇ ಹೊರ ಭಾಗದಲ್ಲಿ ಸಂಚಾರಸೇರಿದಂತೆ ಇದರಿಂದ ಹೆಚ್ಚಾಗಿ ಪ್ರಕರಣಗಳು ಕಂಡುಬರುತ್ತಿದೆ.

ಸೋಂಕಿತರ ನಿರ್ಲಕ್ಷ್ಯ: ಕೆಲ ಸೋಂಕಿತರು ತಮಗೆ ಏನೂ ಬಂದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅಲ್ಲಿಲ್ಲಿ ಅಡ್ಡಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ತಾಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿಸೋಂಕಿತ ಆಸ್ಪತ್ರೆಗೆ ತೆರಳದೆ ಅಡ್ಡಾಡಿ ಪೊಲೀಸರ ನೆರವಿನೊಂದಿಗೆ ಈತನನ್ನು ಆಸ್ಪತ್ರೆಗೆ ಸೇರಿಸಿರುವ ಘಟನೆಯೂ ಇದಕ್ಕೆ ಸಾಕ್ಷಿಯಾಗಿದೆ.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ನಿಯಂತ್ರಿಸಲು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಸೋಂಕಿತರಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನುತ್ವರಿತವಾಗಿ ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆಗೊಳಪಡಿಸಬೇಕು. ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕಿದೆ.

ಗ್ರಾಮೀಣ ಭಾಗದಲ್ಲಿ ಕೋವಿಡ್‌ ನಿಯಮ ಪಾಲನೆಗೆ ಆದ್ಯತೆನೀಡಲಾಗಿದೆ. ಈಗಾಗಲೇ ತಾಲೂಕು ಪಂಚಾಯ್ತಿ ಇಒ, ಗ್ರಾಮ ಪಂಚಾಯ್ತಿಪಿಡಿಒ, ಪೊಲೀಸ್‌ ಇಲಾಖೆಯ ತಂಡ ಗ್ರಾಮೀಣ ಭಾಗದಲ್ಲಿ ಸಕ್ರಿಯವಾಗಿದೆ.ಕೋವಿಡ್‌ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಯಪ್ರಕಾಶ್‌, ತಹಶೀಲ್ದಾರ್‌

 

ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next