Advertisement

ಕೋವಿಡ್ 2ನೇ ಅಲೆ ತಡೆಗೆ ಜಿಲ್ಲೆ ಸಜ್ಜು

01:50 PM Apr 10, 2021 | Team Udayavani |

ಕೋಲಾರ: ಜಿಲ್ಲೆಯ ಮಟ್ಟಿಗೆ ಕೋವಿಡ್ ಮೊದಲ ಅಲೆಯನ್ನು ವೈದ್ಯಕೀಯ ಸೇವೆಗಳ ಕೊರತೆಗಳನಡುವೆ ಎದುರಿಸಿದ್ದ ಆರೋಗ್ಯ ಇಲಾಖೆ, 2ನೇ ಅಲೆಯನ್ನು ಅಗತ್ಯ ವೈದ್ಯಕೀಯ ಸೇವೆ, ಲಸಿಕೆ ಜೊತೆಗೆ ಆತ್ಮವಿಶ್ವಾಸದಿಂದಲೇ ಎದುರಿಸಲು ಸಜ್ಜಾಗಿರುವುದು ಕೊಂಚ ಸಮಾಧಾನ ಮೂಡಿಸಿದೆ.

Advertisement

ಕೊರೊನಾ ರಾಜ್ಯಕ್ಕೆ ಕಾಲಿಟ್ಟ 50 ದಿನಗಳ ನಂತರ ಜಿಲ್ಲೆಗೆ ಬಂದಿತ್ತು. ಮೊದಲ ಸೋಂಕಿತರು ಮುಳಬಾಗಿಲಿನಲ್ಲಿ ಪತ್ತೆಯಾದಾಗ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಆತಂಕ ಕ್ಕೊಳಗಾಗಿತ್ತು.ಏಕೆಂದರೆ, ಕೊರೊನಾ ವೈರಸ್‌ ಅನ್ನು ಹೇಗೆಎದುರಿಸಬೇಕೆಂಬ ಬಗ್ಗೆ ಸಿದ್ಧ ಸೂತ್ರ ಗಳಿರಲಿಲ್ಲ. ಆದರೂ, ಮೊದಲಿಗೆ ಪತ್ತೆಯಾದ ಐವರು ಸೋಂಕಿತರನ್ನು ಮುಕ್ತಗೊಳಿಸಿ ಜಿಲ್ಲಾ ಎಸ್‌ಎನ್‌ಆರ್‌ ಆಸ್ಪತ್ರೆ  ಮುಂಭಾಗ ಹಣ್ಣು ಬುಟ್ಟಿ ನೀಡಿ ಪುಷ್ಪಾರ್ಚನೆಮೂಲಕ ಬೀಳ್ಕೊಟ್ಟಿದ್ದು ಸರ್ಕಾರಿ ಸೇವೆ ಬಗ್ಗೆಸಾರ್ವಜನಿಕ ವಲಯದಲ್ಲಿ ಹೆಚ್ಚು ನಂಬಿಕೆ ಹುಟ್ಟುವಂತೆಯೂ ಮಾಡಿತ್ತು.

ಇದು ಎಷ್ಟರ ಮಟ್ಟಿಗೆ ಎಂದರೆ ಕೋವಿಡ್ ಸೋಂಕಿಗೆ ಸರಕಾರಿ ಆಸ್ಪತ್ರೆಗಳ ಚಿಕಿತ್ಸೆಯೇ ಅತ್ಯುತ್ತಮ ಎಂಬಷ್ಟರ ಮಟ್ಟಿಗೆ. ಇದರ ಜೊತೆಗೆ ಕೋಲಾರ ಜಿಲ್ಲಾಸ್ಪತ್ರೆಗೂಎಟುಕದ ಅನೇಕ ವೈದ್ಯಕೀಯ ಸೌಲಭ್ಯ, ತಾಲೂಕು ಆಸ್ಪತ್ರೆಗಳನ್ನು ತಲುಪುವಂತಾಗಿದ್ದು ಕೋವಿಡ್ ದಿಂದ ಆದ ಲಾಭ ಎಂದೇ ಭಾವಿಸಲಾಗುತ್ತಿದೆ.

ಇದೀಗ ಕೋಲಾರ ಜಿಲ್ಲೆಯಲ್ಲಿಯೂ 2ನೇ ಅಲೆ ಲಕ್ಷಣ ಆರಂಭವಾಗಿದ್ದು, ಈ ಹಂತದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಕೊರೊನಾ ಸೋಂಕು ಎದುರಿಸಲು ಹೇಗೆಲ್ಲಾ ಸಜ್ಜಾಗಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿಏನೆಲ್ಲಾ ಸೌಲಭ್ಯಗಳಿವೆ ಎಂಬ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಉದಯವಾಣಿ ಮಾಡಿದೆ.

ಕೋವಿಡ್‌ ಆಸ್ಪತ್ರೆಗಳು: ಕೋಲಾರ ಜಿಲ್ಲಾ ಎಸ್‌ಎನ್‌ ಆರ್‌ ಆಸ್ಪತ್ರೆ, ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗಳನ್ನುಕೋವಿಡ್‌ ಆಸ್ಪತ್ರೆಗಳೆಂದು ಗುರುತಿಸಲಾಗಿತ್ತು. ಮೊದಲ ಅಲೆ ಕಡಿಮೆಯಾದ ನಂತರ ಜಾಲಪ್ಪ ಆಸ್ಪತ್ರೆಗೆ ಯಾವುದೇ ಸೋಂಕಿತರನ್ನು ಚಿಕಿತ್ಸೆಗಾಗಿಶಿಫಾರಸು ಮಾಡುತ್ತಿಲ್ಲ. ಎಸ್‌ಎನ್‌ಆರ್‌ ಆಸ್ಪತ್ರೆ ಯಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಕೆಜಿಎಫ್ ಹಾಗೂ ಮುಳಬಾಗಿಲು ತಾಲೂಕುಆಸ್ಪತ್ರೆಗಳನ್ನು ಕೋವಿಡ್‌ ಆರೋಗ್ಯ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.

Advertisement

ಬೆಡ್‌ಗಳ ಸಂಖ್ಯೆ: ಎಸ್‌ಎನ್‌ಆರ್‌ ಆಸ್ಪತ್ರೆ 300ಬೆಡ್‌, ಜಾಲಪ್ಪ ಆಸ್ಪತ್ರೆ 530 ಸೇರಿ ಒಟ್ಟು 830 ಬೆಡ್‌ ಗಳ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ 58 ಬೆಡ್‌ಗಳು ಬಳಕೆಯಾಗುತ್ತಿದ್ದು, 772 ಬೆಡ್‌ಗಳು ಸೇವೆಗೆಸಿದ್ಧವಾಗಿವೆ. 76 ಐಸಿಯು ಬೆಡ್‌ಗಳಲ್ಲಿ 7ಬಳಕೆಯಾಗುತ್ತಿವೆ. 69 ಸೇವೆಗೆ ಸಜ್ಜಾಗಿವೆ. ಈಎರಡೂ ಆಸ್ಪತ್ರೆಗಳಲ್ಲಿ 48 ವೆಂಟಿಲೇಟರ್‌ ಬೆಡ್‌ಗಳಿದ್ದು, ಸದ್ಯಕ್ಕೆಯಾವುದೇ ಬೆಡ್‌ ಬಳಕೆಯಾಗುತ್ತಿಲ್ಲ.ಉಳಿದಂತೆ ಎಲ್ಲಾ ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿತಲಾ 50 ಬೆಡ್‌ಗಳು, ಕೆಜಿಎಫ್ನಲ್ಲಿ 20 ಸೇರಿದಂತೆಒಟ್ಟು 220 ಬೆಡ್‌ಗಳ ಸೌಲಭ್ಯವನ್ನು ಹೊಂದಿವೆ. ಈಪೈಕಿ 5 ಬೆಟ್‌ ಬಳಕೆಯಾಗುತ್ತಿದ್ದು, 215 ಬೆಡ್‌ಗಳು ಖಾಲಿಯಾಗಿವೆ.

ಸದ್ಯಕ್ಕೆ ವಿಸ್ತರಣೆ ಅಗತ್ಯವಿಲ್ಲ: ಕೋಲಾರ ಜಿಲ್ಲೆಯಲ್ಲಿಸದ್ಯಕ್ಕೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲುಬೆಡ್‌ಗಳ ಸಂಖ್ಯೆಯನ್ನು ವಿಸ್ತರಿಸುವ ಅಗತ್ಯಕಾಣಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಸಾಕಷ್ಟುಬೆಡ್‌ಗಳನ್ನು ಜಿಲ್ಲಾ, ತಾಲೂಕು ಹೋಬಳಿ ಮಟ್ಟದಆಸ್ಪತ್ರೆಗಳವರೆಗೂ ಸಿದ್ಧಪಡಿಸಿಟ್ಟುಕೊಂಡಿರುವುದರಿಂದ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗುವ ಅನಿವಾರ್ಯತೆ ಇಲ್ಲವಾಗಿದೆ.

ಆಸ್ಪತ್ರೆವಾರು ಚಿಕಿತ್ಸೆ ಸೌಲಭ್ಯ, ಬೆಡ್‌ ಮೀಸಲು :

ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಒಟ್ಟು 300ಬೆಡ್‌ಗಳಿದ್ದು, ಈ ಪೈಕಿ 100 ಕೋವಿಡ್‌ ಚಿಕಿತ್ಸೆಗಾಗಿಮೀಸಲಿಡಲಾಗಿದೆ. ಈ ಪೈಕಿ 57 ಬೆಡ್‌ಬಳಕೆಯಾಗುತ್ತಿವೆ. 43 ಖಾಲಿಯಾಗಿವೆ. ಇದೇ ಆಸ್ಪತ್ರೆಯಲ್ಲಿ 10 ಎಚ್‌ಡಿಯು ಬೆಡ್‌ಗಳಿದ್ದು, 10 ಬಳಕೆಯಾಗುತ್ತಿವೆ. ಆಮ್ಲಜನಕಸಹಿತ 110 ಬೆಡ್‌ಗಳಿದ್ದು, 57 ಬಳಕೆ ಆಗುತ್ತಿದ್ದು, 53 ಖಾಲಿಯಾಗಿವೆ.ವೆಂಟಿಲೇಟರ್‌ ಸಹಿತ ಐಸಿಯು 40 ಬೆಡ್‌ಗಳಿದ್ದು, ಎಲ್ಲವೂ ಖಾಲಿಯಾಗಿವೆ. ವೆಂಟಿಲೇಟರ್‌ ಇಲ್ಲದ40 ಬೆಡ್‌ ಇದ್ದು, ಎಲ್ಲವೂ ಬಳಕೆಯಾಗುತ್ತಿವೆ.

ಬಂಗಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ 100ಬೆಡ್‌ಗಳಿದ್ದು, 50 ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ.41 ಆಮ್ಲಜನಕ ಸಹಿತ ಎಚ್‌ಡಿಯು ಬೆಡ್‌ಗಳು, 9ಐಸಿಯು ಬೆಡ್‌ಗಳಲ್ಲಿ 3 ವೆಂಟಿಲೇಟರ್‌ ಸಹಿತ 6ವೆಂಟಿಲೇಟರ್‌ ರಹಿತ ಬೆಡ್‌ಗಳಾಗಿವೆ.

ಶ್ರೀನಿವಾಸಪುರ ತಾಲೂಕು ಆಸ್ಪತ್ರೆಯಲ್ಲಿ 100ಬೆಡ್‌ಗಳಿದ್ದು, 50 ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ.47 ಆಮ್ಲಜನಕ ಸಹಿತ ಎಚ್‌ಡಿಯು ಬೆಡ್‌ಗಳು, 3ಐಸಿಯು ಬೆಡ್‌ಗಳಲ್ಲಿ 3 ವೆಂಟಿಲೇಟರ್‌ ಸಹಿತ ಬೆಡ್‌ಗಳಾಗಿವೆ.

ಮುಳಬಾಗಿಲು ತಾಲೂಕು ಆಸ್ಪತ್ರೆಯಲ್ಲಿ 100 ಬೆಡ್‌ಗಳಿದ್ದು, 50 ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ. 47 ಆಮ್ಲಜನಕ ಸಹಿತ ಎಚ್‌ಡಿಯು ಬೆಡ್‌ಗಳು, 3 ಐಸಿಯು ಬೆಡ್‌ಗಳಲ್ಲಿ 3 ವೆಂಟಿಲೇಟರ್‌ ಸಹಿತ ಬೆಡ್‌ಗಳಾಗಿವೆ.

ಮಾಲೂರು ತಾಲೂಕು ಆಸ್ಪತ್ರೆಯಲ್ಲಿ 100 ಬೆಡ್‌ಗಳಿದ್ದು, 50 ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ. 47ಆಮ್ಲಜನಕ ಸಹಿತ ಎಚ್‌ಡಿಯು ಬೆಡ್‌ಗಳು, 3ಐಸಿಯು ಬೆಡ್‌ಗಳಲ್ಲಿ 3 ವೆಂಟಿಲೇಟರ್‌ ಸಹಿತಬೆಡ್‌ಗಳಾಗಿವೆ.

ಕೆಜಿಎಫ್ ಉಪ ಜಿಲ್ಲಾಆಸ್ಪತ್ರೆಯಲ್ಲಿ 150 ಬೆಡ್‌ಗಳಿದ್ದು, 150 ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ.145 ಆಮ್ಲಜನಕ ಸಹಿತ ಎಚ್‌ಡಿಯು ಬೆಡ್‌ಗಳು, 5 ಐಸಿಯು ಬೆಡ್‌ಗಳಲ್ಲಿ 5 ವೆಂಟಿಲೇಟರ್‌ ಸಹಿತ ಬೆಡ್‌ಗಳಾಗಿವೆ. ಕೆಜಿಎಫ್ ಇಡಿ ಆಸ್ಪತ್ರೆಯಲ್ಲಿತಾಲೂಕು ಆಸ್ಪತ್ರೆಯಲಿ 20 ಬೆಡ್‌ಗಳಿವೆ. ಬೇತಮಂಗಲ ಹೋಬಳಿ ಆಸ್ಪತ್ರೆಯಲ್ಲಿ 30ಬೆಡ್‌ಗಳಿದ್ದು, 30 ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ.20 ಆಮ್ಲಜನಕ ಸಹಿತ ಬೆಡ್‌ಗಳಿವೆ. ಗೌನಿಪಲ್ಲಿಹೋಬಳಿ ಆಸ್ಪತ್ರೆಯಲ್ಲಿ 30 ಬೆಡ್‌ಗಳಿದ್ದು, 30ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ. 20 ಆಮ್ಲಜನಕ ಸಹಿತ ಬೆಡ್‌ಗಳಿವೆ.

ಆಮ್ಲಜನಕ, ವೆಂಟಿಲೇಟರ್‌ ಸಮಸ್ಯೆ ಇಲ್ಲ  :

ಮೊದಲ ಹಂತದ ಕೋವಿಡ್ ಸೋಂಕಿತ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಐಸಿಯು ಮತ್ತು ವೆಂಟಿಲೇಟರ್‌, ಆಮ್ಲಜನಕ ಸಹಿತ ಬೆಡ್‌ಗಳ ಕೊರತೆ ಎದುರಿಸಿದ್ದೆವು. ಈಗ ತಾಲೂಕು, ಹೋಬಳಿ ಮಟ್ಟದ ಆಸ್ಪತ್ರೆಗಳಲ್ಲಿಯೂ ಈಸೌಲಭ್ಯ ಒದಗಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಕೊರತೆ ಇದ್ದ ಮಾನವಸಂಪನ್ಮೂಲ ತುಂಬಿಸಿಕೊಳ್ಳಲಾಗಿದೆ. ಅಗತ್ಯ ಜೀವರಕ್ಷಕ ಔಷಧಗಳ ದಾಸ್ತಾನು ಇಡಲಾಗಿದೆ. ಆಮ್ಲಜನಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಪ್ರಯೋಗಾಲಯಸೌಲಭ್ಯವಿದೆ. ಖಾಸಗಿ ಸಹಭಾಗಿತ್ವದಲ್ಲಿ ಜಾಲಪ್ಪ ಆಸ್ಪತ್ರೆಯಲ್ಲಿ ಕೋವಿಡ್ಸೋಂಕಿತರ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತಿತ್ತು. ಈಗ ಸಂಪೂರ್ಣ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡುವ ಮೂಲಕ 2ನೇ ಅಲೆ ಸಮರ್ಥವಾಗಿ ಎದುರಿಸಲಾಗುತ್ತಿದೆ. -ಡಾ.ಚಾರಿಣಿ, ಕೋವಿಡ್‌ ನೋಡಲ್‌ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next