Advertisement

ರಬಕವಿ-ಬನಹಟ್ಟಿಯಲ್ಲಿ ಕೋವಿಡ್ 2ನೇ ಅಲೆ: ಬಾಗಲಕೋಟೆಗೂ ಬಂತು `ಮಹಾ ಆತಂಕ’

01:32 PM Mar 17, 2021 | Team Udayavani |

ಬನಹಟ್ಟಿ: ನೇಕಾರ ನಗರಿ ರಬಕವಿ-ಬನಹಟ್ಟಿ ಕಳೆದ ಮೂರು ತಿಂಗಳಿಂದ ಕೊರೊನಾ ಜಂಜಾಟವಿಲ್ಲದೆ ಶಾಂತಗೊಂಡಿತ್ತು. ಆದರೆ ಮಂಗಳವಾರ (16-3-2021) ತಾಲೂಕಿನ ರಬಕವಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಕೋವಿಡ್ ಸೋಂಕು ತಗುಲಿದ್ದು, ಎರಡನೇ ಅಲೆ ಒಕ್ಕರಿಸಿದ್ದರ ಹಿನ್ನಲೆ ಜನ ಆತಂಕಗೊಂಡಿದ್ದಾರೆ.

Advertisement

ಈಚೆಗೆ ಮಹಾರಾಷ್ಟ್ರದ ಸೊಲ್ಲಾಪೂರಕ್ಕೆ ತೆರಳಿದ್ದ ಇಲ್ಲಿನ ಕುಟುಂಬ ವಾಪಸ್ ರಾಜ್ಯಕ್ಕೆ ಬರುವ ಸಂದರ್ಭ ಸೊಲ್ಲಾಪೂರದ ಗಡಿಯಲ್ಲಿ ಸ್ವ್ಯಾಬ್ ಪರೀಕ್ಷೆ ನಡೆಸಿತ್ತು. ನಂತರ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಮಾಜಿ ಸಚಿವ, ಬಿಜೆಪಿ ಮುಖಂಡ ದಿಲೀಪ್ ಗಾಂಧಿ ಕೋವಿಡ್ ನಿಂದ ಸಾವು

ಬುಧವಾರ ಮಧ್ಯಾಹ್ನ ಇವರಿಬ್ಬರ ಸ್ವ್ಯಾಬ್ ಪರೀಕ್ಷೆಯು ಫಲಿತಾಂಶ ಪಾಸಿಟಿವ್ ಬಂದ ಕಾರಣ ಎರಡನೇ ಅಲೆಯಿಂದ ರಬಕವಿ-ಬನಹಟ್ಟಿ ಜನತೆ ಕಟ್ಟೆಚ್ಚರ ವಹಿಸಬೇಕಾದುದು ಅನಿವಾರ್ಯವಾಗಿದೆ.

‘ಈಗಾಗಲೇ ಸೋಂಕು ಕಂಡು ಬಂದ ಇಬ್ಬರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇವರಿಬ್ಬರಿಗೂ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗುವದು’ಎಂದು ತಾಲೂಕು ವೈದ್ಯಾಧಿಕಾರಿ ಗೈಬುಸಾಬ ಗಲಗಲಿ ತಿಳಿಸಿದ್ದಾರೆ

Advertisement

ಲಸಿಕೆ ಹಾಕಿಸದವರಿಗೆ ಕಾದಿದೆಯಾ ಆಪತ್ತು

ತಾಲೂಕಿನಾದ್ಯಂತ ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಸಮುದಾಯ ಆಸ್ಪತ್ರೆಗಳಲ್ಲಿ ದಿನಂಪ್ರತಿ ಮೂನ್ನೂರಕ್ಕೂ ಅಧಿಕ ಜನರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಆದರೂ ಜನತೆ ನಿರ್ಲಕ್ಷ್ಯ ಹಾಗು ಬೇಸರದಿಂದ ಲಸಿಕೆ ಪಡೆಯುವಲ್ಲಿ ಹಿಂದೇಟು ಹಾಕುವಲ್ಲಿ ಕಾರಣವಾಗಿದೆ.

ಇದನ್ನೂ ಓದಿ: ಮೂಲ ಸೌಕರ್ಯಗಳೊಂದಿಗೆ ಹಣಕಾಸು ಸಂಸ್ಥೆಗಳ ಅಭಿವೃದ್ಧಿ : ನಿರ್ಮಲಾ ಸೀತಾರಾಮನ್

Advertisement

Udayavani is now on Telegram. Click here to join our channel and stay updated with the latest news.

Next