Advertisement

ನಾಲ್ಕು ಆಸ್ಪತ್ರೆಯಲ್ಲಿ ಕೋವಿಡ್‌-19 ವಾರ್ಡ್‌

04:25 PM Apr 13, 2020 | mahesh |

ಕೋಲಾರ: ಜಿಲ್ಲೆಯಲ್ಲಿ ಇವರೆಗೂ ಕೋವಿಡ್-19 ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ ವಾದ್ರೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಂದು ವೇಳೆ ಪಾಸಿಟಿಲ್‌ ಪ್ರಕರಣ ಬಂದರೂ ಅದಕ್ಕೆ ಬೇಕಾದ ಐಸೋಲೇಷನ್‌ ವಾರ್ಡ್‌ಗಳನ್ನು ನಾಲ್ಕು ಆಸ್ಪತ್ರೆಗಳಲ್ಲಿ ಈಗಾಗಲೇ ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ ನಗರದ ಎಸ್‌ಎನ್‌ಆರ್‌, ಆರ್‌.ಎಲ್‌. ಜಾಲಪ್ಪ, ಕೆಜಿಎಫ್ನ ಸಂಭ್ರಮ ಆಸ್ಪತ್ರೆ ಮತ್ತು ಬಂಗಾರಪೇಟೆ ಶ್ಯಾಮ್‌
ಆಸ್ಪತ್ರೆಗಳನ್ನು ಕೋವಿಡ್‌ -19 ಆಸ್ಪತ್ರೆಗಳೆಂದು ಗುರುತಿಸಲಾಗಿದೆ.

Advertisement

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ 500 ಹಾಸಿಗೆ, 5 ಐಸಿಯು, 5 ವೆಂಟಿಲೇಟರ್‌ ಗಳಿದ್ದು, ಕೋವಿಡ್‌-19 ಗಾಗಿ 12 ಹಾಸಿಗೆ, 5 ಐಸಿಯು, 2 ವೆಂಟಿಲೇಟರ್‌, ಜಾಲಪ್ಪ ಆಸ್ಪತ್ರೆಯಲ್ಲಿ 1200 ಹಾಸಿಗೆ, 65 ಐಸಿಯು, 35 ವೆಂಟಿಲೇಟರ್‌ಗಳಿದ್ದು, ಕೋವಿಡ್‌ 19 ಗಾಗಿ 100 ಹಾಸಿಗೆ, 65 ಐಸಿಯು, 35 ವೆಂಟಿಲೇಟರ್‌, ಸಂಭ್ರಮ ಆಸ್ಪತ್ರೆಯಲ್ಲಿ 650 ಹಾಸಿಗೆ, 15 ಐಸಿಯು, 2 ವೆಂಟಿಲೇಟರ್‌ಗಳಿದ್ದು, ಕೋವಿಡ್‌ 19 ಗಾಗಿ 100 ಹಾಸಿಗೆ, 15 ಐಸಿಯು, 2 ವೆಂಟಿಲೇಟರ್‌, ಶ್ಯಾಂ ಆಸ್ಪತ್ರೆಯಲ್ಲಿ 100 ಹಾಸಿಗೆ, 15 ಐಸಿಯು, 5 ವೆಂಟಿಲೇಟರ್‌ಗಳಿದ್ದು, ಕೋವಿಡ್‌ 19 ಗಾಗಿ 50 ಹಾಸಿಗೆ, 15 ಐಸಿಯು, 5 ವೆಂಟಿಲೇಟರ್‌ಗಳನ್ನು ಮೀಸಲಿಡಲಾಗಿದೆ.

ತುರ್ತು ಸಂದರ್ಭ ನಿಭಾಯಿಸಲು 241 ಆಮ್ಲಜನಕ ಸಿಲಿಂಡರ್‌ಗಳಿದ್ದು, 155 ಕಾರ್ಯನಿರ್ವಹಿಸುತ್ತಿವೆ, 69 ಸಿಲಿಂಡರ್‌ ಗಳು ಖಾಲಿಯಾಗಿವೆ. 26 ಜಂಬೋ ಆಮ್ಲ
ಜನಕ ಸಿಲಿಂಡರ್‌ಗಳನ್ನು ಮೀಸಲಿಡಲಾಗಿದ್ದು, ಒಟ್ಟು 62 ಹಾಸಿಗೆಗಳು ಕೋವಿಡ್‌ 19 ಚಿಕಿತ್ಸೆಗೆ ಸಿದ್ಧವಾಗಿವೆ.

ಕೇವಲ 13 ಫಿವರ್‌ ಆಸ್ಪತ್ರೆ: ಜಿಲ್ಲೆಯಲ್ಲಿ ಪ್ರಸ್ತುತ ಕೇವಲ 13 ಫಿವರ್‌ ಆಸ್ಪತ್ರೆಗಳು ಕಾರ್ಯಾರಂಭ ಮಾಡುತ್ತಿದ್ದು, ಮತ್ತಷ್ಟು ಆಸ್ಪತ್ರೆಗಳನ್ನು ತೆರೆಸಲು ಯೋಜಿಸಲಾಗುತ್ತಿದೆ. ಸದ್ಯಕ್ಕೆ ಕೋಲಾರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್‌ ಕೇಸುಗಳಿಲ್ಲವಾದ್ದರಿಂದ ಆಸ್ಪತ್ರೆಯಲ್ಲಿ ಐಸೋಲೇಷನ್‌ ವಾರ್ಡ್‌ಗಳಿವೆಯಾದರೂ, ಯಾರ‌ನ್ನೂ ಕ್ವಾರಂಟೈನ್‌ ಮಾಡಿಲ್ಲ.ಪ್ರಸ್ತುತ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 366 ಮಂದಿ ಕ್ವಾರಂಟೈನ್‌ ಗೊಳಗಾಗಿದ್ದು, ಈ ಪೈಕಿ 338 ಮಂದಿ 14 ದಿನಗಳನ್ನು ಪೂರ್ಣ ಗೊಳಿಸಿದ್ದಾರೆ.

ಸಾಮಾಜಿಕ ಅಂತರ: ಜಿಲ್ಲೆಯಲ್ಲಿ ತರಕಾರಿ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಎಪಿಎಂಸಿ ಹಾಗೂ ರೇಷ್ಮೆ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿವೆ. ತರಕಾರಿ ಖರೀದಿಗೆ ಬೆಳಗಿನ ಜಾವ 6 ರಿಂದ 9ರ ವರೆಗೂ ಸಡಿಲಿಕೆ ನೀಡಲಾಗಿದ್ದು, ಸಾಮಾಜಿಕ ಅಂತರದ ಷರತ್ತು ವಿಧಿಸಲಾಗಿದೆ. ಆರಂಭಿಕ ದಿನಗಳಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತಾದರೂ ಕ್ರಮೇಣ ಸಾಮಾಜಿಕ ಅಂತರಕ್ಕೆ ಜನ ಒಗ್ಗಿಕೊಳ್ಳುತ್ತಿದ್ದಾರೆ.

Advertisement

ಹಾಲು ಕೊಟ್ಟವರಿಗೇ ಕೊಡ್ತಾರೆಂಬ ಆರೋಪ
ಜಿಲ್ಲಾದ್ಯಂತ ಪ್ರತಿನಿತ್ಯ10 ಸಾವಿರ ಲೀಟರ್‌ ಹಾಲುವಿತರಣೆ ಮಾಡಲಾಗುತ್ತಿದೆ. ಕೋಲಾರ, ಕೆಜಿಎಫ್ಗೆ ತಲಾ 2 ಸಾವಿರ ಹಾಗೂ ಉಳಿದಂತೆ ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು ತಾಲೂಕಿಗೆ ತಲಾ 1500 ಲೀಟರ್‌ ಹಾಲು ಕಳುಹಿಸಲಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆಯ  ಉಪನಿರ್ದೇಶಕ ಜಗದೀಶ್‌ ವಿವರಿಸಿದ್ದಾರೆ. ನಿತ್ಯವೂ ಹಾಲು ವಿತರಣೆಯಾಗುತ್ತಿಲ್ಲ, ಕೊಟ್ಟವರಿಗೆ ಕೊಡುತ್ತಿದ್ದಾರೆ ಎಂಬ ಇತ್ಯಾದಿ ದೂರುಗಳು ಕೇಳಿ ಬರುತ್ತಿವೆಯಾದರೂ ಸ್ಥಳೀಯ ಸಂಸ್ಥೆಗಳು ನಿಗದಿತ ಸ್ಥಳಗಳಲ್ಲಿ ಮಾತ್ರವೇ ಹಾಲು ವಿತರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಹಾಲು ಸಿಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next