Advertisement

ಕೋವಿಡ್ 19 ತಲ್ಲಣ : ಅಮೆರಿಕದಲ್ಲಿ ವೆಂಟಿಲೇಟರ್ಸ್ ಅಭಾವ

09:51 AM Mar 28, 2020 | Hari Prasad |

ವಾಷಿಂಗ್ಟನ್‌: ಜಗತ್ತಿನ ದೊಡ್ಡಣ್ಣ ಪಟ್ಟದಲ್ಲಿರುವ ಅಮೆರಿಕದಲ್ಲೂ ಕೋವಿಡ್ 19 ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ 452ಕ್ಕೇರಿದೆ. 34,717 ಮಂದಿಗೆ  ಸೋಂಕು ದೃಢಪಟ್ಟಿದೆ. 178 ಮಂದಿ ಗುಣ ಮುಖರಾಗಿದ್ದಾರೆ. ಸೋಂಕು ದೃಢಪಟ್ಟ ಮೊದಲ ಸೆನೆಟರ್‌ ಪೌಲ್‌ ಆಗಿದ್ದು ಈಗ ಕ್ವಾರೆಂಟೈನ್ನಲ್ಲಿದ್ದಾರೆ. ನ್ಯೂಯಾರ್ಕ್‌ನಲ್ಲಿ 15,000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 5,418ಹೊಸ ಪ್ರಕರಣಗಳು ದಾಖಲಾಗಿವೆ.

Advertisement

ನ್ಯೂಯಾರ್ಕ್‌ಲ್ಲಿ 114 ಜನರು ಸಾವಿಗೀಡಾಗಿದ್ದು ಒಂದು ದಿನದಲ್ಲಿ 58 ಪ್ರಕರಣಗಳು ವರದಿಯಾಗಿವೆ. ಮುಂದಿನ 10 ದಿನಗಳಲ್ಲಿ ನ್ಯೂಯಾರ್ಕ್‌ನಲ್ಲಿ ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೂ ಹೊಡೆತ ಬೀಳುವ ಸಾಧ್ಯತೆ ಇದೆ. 10 ದಿನಗಳಲ್ಲಿ ವೈದ್ಯಕೀಯ ವಸ್ತುಗಳ ಪೂರೈಕೆ ಕುಂಠಿತವಾಗಲಿದ್ದು, ಅಲ್ಲೂ ಅಗತ್ಯ ಸಂಖ್ಯೆಯಲ್ಲಿ ವೆಂಟಿಲೇಟರ್‌ ಸಿಗದೇ ಇದ್ದರೆ ಜನರ ಜೀವನಕ್ಕೆ ಅಪಾಯ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇಟಲಿಯಲ್ಲಿ ರೋಗಿಗಳ ಸಂಖ್ಯೆಗಳು ಹೆಚ್ಚಾದ ಪರಿಣಾಮ ಆಸ್ಪತ್ರೆಗಳಲ್ಲಿ ಸ್ಥಳಗಳ ಅಲಭ್ಯತೆ ಹೆಚ್ಚಾಗಿತ್ತು. ಇದರಿಂದ ವೆಂಟಿಲೇಟರ್‌ನ ಸಮಸ್ಯೆ ಉಂಟಾಗಿದ್ದು, ಜನರು ಸಾಯುತ್ತಿದ್ದಾರೆ.

ಕೊರಿಯಾದಲ್ಲಿ ನಿಯಂತ್ರಣ
ದಕ್ಷಿಣ ಕೊರಿಯಾದಲ್ಲಿ ಕೋವಿಡ್ 19 ವೈರಸ್ ನಿಯಂತ್ರಣದಲ್ಲಿದೆ. ಆರಂಭದಲ್ಲಿ ಇಟಲಿಯಂತೆ ಎರಿಕೆಯಾಗುತ್ತಾ ಇದ್ದರೂ ಬಳಿಕ ಹತೋಟಿಗೆ ಬಂದಿದೆ. ಕಳೆದ 24 ಗಂಟೆಗಳಲ್ಲಿ 64 ಪ್ರಕರಣಗಳು ಪತ್ತೆಯಾಗಿದ್ದು, 8,961 ಪ್ರಕರಣಗಳು ಮಾತ್ರ ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next