Advertisement
ಕೋವಿಡ್ 19 ವೈರಸ್ ಮಾರಿ ನಮ್ಮ ದೇಹವನ್ನು ಆಕ್ರಮಿಸದಿರಲು ವಹಿಸುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಒಂದು. ಮನೆಯಲ್ಲೇ ಇರಿ, ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಬೇಡಿ ಎಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಅದನ್ನೂ ನಿರ್ಲಕ್ಷ್ಯಿಸುವವರ ವಿರುದ್ಧ ಸಿಂಗಾಪುರ ಬರೀ ಕೆಲವು ಕಠಿನ ಕ್ರಮಗಳಕ್ಕೆ ಮುಂದಾಗಿಲ್ಲ. ಜತೆಗೆ ಹತ್ತು ಸಾವಿರ ಡಾಲರ್ ದಂಡ ವಿಧಿಸುತ್ತಿದೆ.
ಸಿಂಗಾಪುರ ಸರಕಾರದ ಪ್ರಕಾರ ಫಿಜಿಕಲ್ ಡಿಸ್ಟಾನ್ಸ್ ನಿಯಮಗಳಡಿ ಸಾರ್ವಜನಿಕ ಪ್ರದೇಶಗಳಲ್ಲಿ ಒಬ್ಬರಿಂದ ಮತ್ತೂಬ್ಬರಿಗೆ ಕನಿಷ್ಟ ಅಂದರೂ 1 ಮೀಟರ್‌ಅಂತರ ಇರಬೇಕು. ಇದನ್ನು ಉಲ್ಲಂ ಸುವವರಿಗೆ 10,000 ಡಾಲರ್ (5,22,342 ರೂ.) ವರೆಗೂ ದಂಡ ವಿಧಿಸಲು ಅಥವಾ ಆರು ತಿಂಗಳ ಕಾಲ ಜೈಲು ಅಥವಾ ಈ 2 ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಲ್ಲಿನ ಅಂಕಿಅಂಶದ ಪ್ರಕಾರ ಇಲ್ಲಿಯವರೆಗೆ 683 ಸೋಂಕು ಪೀಡಿತರಿದ್ದು, 2 ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಇನ್ನೂ 172 ಜನ ಗುಣಮುಖರಾಗಿದ್ದು, 17ಮಂದಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.