Advertisement
ನಗರದ ಹೊಸಬಸ್ ನಿಲ್ದಾಣ, ಕರಂದಕ್ಕಾಡ್ ಮೊದಲಾದೆಡೆ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಡೆದು ನಿಲ್ಲಿಸಿ ಸಂಪೂರ್ಣ ಮಾಹಿತಿ ಅಗತ್ಯವಿದ್ದರೆ ಮಾತ್ರ ಮುಂದುವರಿಯಲು ಬಿಡಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಬು ನೇತೃತ್ವ ವಹಿಸಿದ್ದಾರೆ.
ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬಂದಿ ಗ್ಲೌಸ್ ಮತ್ತು ಮಾಸ್ಕ್ ಧರಿಸಿರಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ (ಡಿಜಿಪಿ) ಲೋಕನಾಥ್ ಬೆಹ್ರಾ ಆದೇಶ ನೀಡಿದ್ದಾರೆ. ವಾಹನಗಳತ್ತ ಬಾಗಿ ತಪಾಸಣೆ ನಡೆಸುವ ಕ್ರಮ ಕೈಬಿಡಬೇಕು. ಗ್ಲೌಸ್ ಧರಿಸದೇ ಇರುವ ವ್ಯಕ್ತಿಗಳನ್ನು ಸ್ಪರ್ಶಿಸ ಬಾರದು. ವಾಹನಗಳ ಢಿಕ್ಕಿ ತೆರೆಯುವ ವೇಳೆ ಮುಂಜಾಗ್ರತೆ ವಹಿಸಬೇಕು. ವಾಹನಗ ಳಲ್ಲಿರುವವರ ಜತೆಗೆ ಮಾತನಾಡುವಾಗ ನಿಗದಿತ ಅಂತರ ಪಾಲಿಸಬೇಕು. ಮುಂದಿನ ಆದೇಶದ ವರೆಗೆ ಬ್ರಿàದ್ ಅನಲೈಸರ್ ಬಳಕೆ ಬೇಡ. ವೈರಸ್ ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಕೈಗಳನ್ನು ಆಗಾಗ ಸಾಬೂನು ಯಾ ಸಾನಿಟೈಸರ್ ಬಳಸಿ ಶುಚಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Related Articles
ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ನಿಷೇ ದಾಜ್ಞೆ ಹಿನ್ನೆಲೆಯಲ್ಲಿ ಸಪ್ಲೈಕೋ ಮಾರಾಟ ಶಾಖೆಗಳ ಚಟುವಟಿಕೆಯ ಸಮಯವನ್ನು ಪುನರ್ ರಚಿಸಲಾಗಿದೆ. ಮಾವೇಲಿ ಸ್ಟೋರ್, ಮಾವೇಲಿ ಸೂಪರ್ ಸ್ಟೋರ್, ಪೀಪಲ್ಸ್ ಬಝಾರ್, ಹೈಪರ್ ಮಾರ್ಕೆಟ್, ಅಪ್ನಾ ಬಝಾರ್ ಸಂಸ್ಥೆಗಳ ಚಟುವಟಿಕೆಗಳ ಸಮಯ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಇರುವುದು. ಮೆಡಿಕಲ್ ಸ್ಟೋರ್‌ಗಳ ಸಮಯ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಪುನರ್ ರಚಿಸಲಾಗಿದೆ ಎಂದು ವಲಯ ಪ್ರಬಂಧಕ ತಿಳಿಸಿದರು.
Advertisement
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸಹಾಯವಾಣಿ
ಡಾ| ಚಂದ್ರಮೋಹನ್ 94472 86592, ಹೆಲ್ತ್ ಇನ್‌ಸ್ಪೆಕ್ಟರ್ ರಿಜೋಯ್ – 7907883478, ಜೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್ ರಾಧಾ – 9400408514, ಬಿಜು – 7994288090, ಭಾಸ್ಕರನ್ – 9497167035, ಮೇಶಾìಬಾಲ್ 9605184761, ಜೆ.ಪಿ.ಎಚ್. ಎನ್. ದಿಲೀಪ್ ಕುಮಾರ್ – 8086116772. ತುರ್ತು ಸಹಾಯವಾಣಿ
ತುರ್ತು ಸಂದರ್ಭ ಪಾಸ್ ಸಂಬಂಧ ಅಗತ್ಯಗಳಿಗೆ ಕರೆ ಮಾಡಬಹುದಾದ ದೂರ ವಾಣಿ ಸಂಖ್ಯೆಗಳು: 04994-255001. ಮನೆಗಳಲ್ಲಿ ನಿಗಾದಲ್ಲಿ ರುವವರಿಗೆ ಆಹಾರದ ಅಗತ್ಯವಿದ್ದರೆ: 04994-255004. ಕಾನೂನು ಉಲ್ಲಂಘನೆ ಸಂಬಂಧ ಪೊಲೀಸರ ಸಹಾಯಕ್ಕೆ: 112, 1090, 04994-257371, 9497980941.
ಕೋವಿಡ್ 19 ಸಂಬಂಧ ಸಂಶಯಗಳ ದೂರೀಕರಣ, ತುರ್ತು ಸಹಾಯಕ್ಕೆ ಜಿಲ್ಲಾಧಿಕಾರಿ ಕಚೇರಿಯ ಕೋವಿಡ್ 19
ನಿಯಂತ್ರಣ ಘಟಕ: 04994-257700, 9446601700, ಜಿಲ್ಲಾ ಆಸ್ಪತ್ರೆಯ ಕೋವಿಡ್ 19 ನಿಯಂತ್ರಣ ಘಟಕ: 0467 2209901, 0467 2209902, 0467 2209904, 0467 2209906, 9946000493, 9946000293.