Advertisement

ಕೋವಿಡ್ ಸುಳ್ಳು: ಥಂಬ್ಸ್ ಅಪ್‌ ಮಾಡುತ್ತಿರುವುದು ವೈದ್ಯನಲ್ಲ

08:53 PM Apr 06, 2020 | Hari Prasad |

ಕೋವಿಡ್ 19 ವ್ಯಾಪಿಸುತ್ತಿರುವಷ್ಟೇ ವೇಗದಲ್ಲಿ ಅದರ ಕುರಿತಾದ ಸುಳ್ಳು ಸುದ್ದಿಗಳೂ ವ್ಯಾಪಿಸುತ್ತಿವೆ. ಸಾಮಾಜಿಕ ಜಾಲತಾಣಗಳ‌ಲ್ಲಿ ಹಬ್ಬುತ್ತಿರುವ ಸುದ್ದಿಗಳ ಸತ್ಯದರ್ಶನ ಇಲ್ಲಿರುತ್ತದೆ.

Advertisement

ಕೋವಿಡ್ 19 ವೈರಸ್ ಮಹಾಮಾರಿಯು ಜಗತ್ತಿನಾದ್ಯಂತ ಬಹಳಷ್ಟು ವೈದ್ಯಕೀಯ ಸಿಬಂದಿಯನ್ನೂ ಬಲಿಪಡೆದುಕೊಂಡಿದೆ. ಇದರ ನಡುವೆಯೇ ಇಟಲಿಯ 38 ವರ್ಷದ ವೈದ್ಯ ಜೂಲಿಯನ್‌ ಅರ್ಬನ್‌ ಎಂಬವರದ್ದು ಎನ್ನಲಾದ ಭಾವನಾತ್ಮಕ ವಿಡಿಯೋವೊಂದು ಹರಿದಾಡುತ್ತಿದೆ.

ಅದರಲ್ಲಿ, ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ವೈದ್ಯ ಜೂಲಿಯನ್‌ ಅವರು ಕೋವಿಡ್ 19 ವೈರಸ್ ನಿಂದಿಂದ ಸಾವಿಗೀಡಾಗುವ ಮುನ್ನ ತನ್ನ ಸಹೋದ್ಯೋಗಿಗಳಿಗೆ ಕೊನೆಯ ಬಾರಿಗೆ ಥಂಬ್ಸ್ ಅಪ್‌ ಮಾಡಿ ವಿದಾಯ ಹೇಳುತ್ತಿರುವ ದೃಶ್ಯ ಎಂಬ ಅಡಿ ಬರಹವನ್ನೂ ಬರೆಯಲಾಗಿದೆ.

ಆದರೆ, ಈ ವಿಡಿಯೋದ ಸತ್ಯಾಸತ್ಯತೆ ಈಗ ಬಯಲಾಗಿದ್ದು, ಇದು ಇಟಲಿಯ ವಿಡಿಯೋ ಅಲ್ಲ ಎಂಬುದು ಸಾಬೀತಾಗಿದೆ. ಚೀನದ ವುಹಾನ್‌ ನಲ್ಲಿ ಸೆರೆಹಿಡಿಯಲಾದ ಫೋಟೋವಿದು. ಇದರಲ್ಲಿರುವ ರೋಗಿಯು ವೈದ್ಯನಲ್ಲ. ಕೋವಿಡ್‌ ಸೋಂಕಿತನೊಬ್ಬ ಪಕ್ಕದಲ್ಲಿ ನಿಂತ ವೈದ್ಯರಿಗೆ ಧನ್ಯವಾದ ಹೇಳುತ್ತಿರುವ ದೃಶ್ಯವಿದು.

Advertisement

Udayavani is now on Telegram. Click here to join our channel and stay updated with the latest news.

Next