Advertisement
ಪಂಜಾಬ್, ಸಿಂಧ್ ಹಾಗೂ ಬಲೂಚಿಸ್ಥಾನ ಪ್ರಾಂತ್ಯಗಳಲ್ಲಿ ಅತಿ ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಆದರೆ ಇತರ ದೇಶಗಳಂತೆ ಪಾಕಿಸ್ಥಾನ ಇನ್ನೂ ಸಂಪೂರ್ಣ ಜಾಗೃತವಾಗಿಲ್ಲ. ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳು ಪಾಕ್ ನ ನಡೆಯ ಕುರಿತು ಆತಂಕವನ್ನೂ ವ್ಯಕ್ತಪಡಿಸಿವೆ.
ವಾರ್ಷಿಕ ತಬ್ಲಿ ಜಮಾಅತ್ ಸಭೆಯು ಲಾಹೋರ್ ಉಪನಗರವಾದ ರೈವಿಂಡ್ ನಲ್ಲಿ ನಡೆದಿತ್ತು. 90 ದೇಶಗಳ 2.50 ಲಕ್ಷ ಮಂದಿ ಭಾಗವಹಿಸಿದ್ದರು. ಇದರ ಪರಿಣಾಮವಾಗಿ ಇಬ್ಬರು ಪುರುಷರು ಪಾಕಿಸ್ಥಾನದಿಂದ ಹಿಂದಿರುಗಿದಾಗ ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ಇಸ್ಲಾಮಾಬಾದ್‌ನ ಉಪನಗರಗಳ 12 ಮಂದಿಗೂ ಸೋಂಕು ತಗುಲಿತ್ತು. ಬಳಿಕ ಸಿಂಧ್‌ನಲ್ಲಿ ಇತರ ನಾಲ್ವರಲ್ಲಿ ಪಾಸಿಟಿವ್ ಕಂಡುಬಂದಿದೆ. ಇದಕ್ಕೆ ಜಮ್ಮತ್‌ನ ಒಬ್ಬ ಕಿರ್ಗಿಸ್ತಾನ್ ಬೋಧಕನನ್ನು ಇತರ 13 ಮಂದಿಯೊಂದಿಗೆ ಬಂಧಿಸಲಾಗಿದೆ.
Related Articles
ಬ್ರಿಟನ್ ಮತ್ತು ಕೆನಡಾದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಉಭಯ ದೇಶಗಳಿಗೆ ತೆರಳಬೇಕಿದ್ದ ನಾಲ್ಕು ವಿಶೇಷ ವಿಮಾನಗಳ ಸಂಚಾರವನ್ನು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ನಿಷೇಧಿಸಿದೆ. ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ ಈ ಕ್ರಮ ಎಂದಿದೆ ಸರಕಾರ. ಶುಕ್ರವಾರ ಮತ್ತು ಶನಿವಾರ ನಿಗದಿಯಾಗಿದ್ದ ಲಂಡನ್, ಮ್ಯಾಂಚೆರ್ಸ್ಟ, ಬರ್ಮಿಂಗ್‌ಹ್ಯಾಮ್ ಮತ್ತು ಟೊರೊಂಟೊಗಳಿಗೆ ವಿಶೇಷ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
Advertisement
ಕ್ಯಾಂಪ್ ಗಳಲ್ಲ ಜೈಲುಗಳುಇರಾನ್ನಿಂದ ಪಾಕಿಸ್ಥಾನಕ್ಕೆ ಸೋಂಕು ಬರಬಾರದು ಎಂದು ಮುನ್ನೆಚ್ಚರಿಕೆ ವಹಿಸಿ ನಿರ್ಮಿಸಿರುವ ಕ್ಯಾಂಪ್ ಗಳ ಮೂಲಕವೇ ವೈರಸ್ ಹರಡುವ ಸಾಧ್ಯತೆ ಹೆಚ್ಚು ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ. ಚಿಕಿತ್ಸಾ ಸಲಕರಣೆಗಳಂತೂ ಇಲ್ಲವೇ ಇಲ್ಲ. ವೈದ್ಯರು ಹಾಗೂ ನರ್ಸ್‌ಗಳ ಕೊರತೆ ತುಂಬಾ ಕಾಡುತ್ತಿದೆ. ಈ ಕಾರಣಕ್ಕೆ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗುತ್ತಿವೆ. ಇವುಗಳು ಕ್ಯಾಂಪ್ ಗಳಲ್ಲ, ಜೈಲುಗಳು ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಸಿದ್ಧವಾಗದ ಪಾಕ್
ಕೋವಿಡ್ 19ವನ್ನು ನಿಗ್ರಹಿಸುವ ಹೊಣೆ ಈಗ ಪಾಕ್ ಸೇನೆಯ ಹೆಗಲ ಮೇಲಿದೆ. ಆದರೆ ವೈರಸ್ ಉಪಟಳವನ್ನು ಎದುರಿಸಲು ಸರಿಯಾದ ಸಿದ್ಧತೆಯನ್ನೇ ನಡೆಸಿಲ್ಲ. ಇತರ ದೇಶಗಳು ಸಾಮಾಜಿಕ ಅಂತರದ ಕುರಿತು ಹೆಚ್ಚು ಗಮನವಹಿಸಿದ್ದರೆ ಪಾಕ್ ಮಾತ್ರ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆರ್ಥಿಕ ಸ್ಥಿತಿ ಕಾರಣ?
ಪಾಕಿಸ್ಥಾನದ ಈ ಸ್ಥಿತಿಗೆ ಅಲ್ಲಿನ ಆರ್ಥಿಕ ಸ್ಥಿತಿಯೂ ಕಾರಣ ಎನ್ನಲಾಗುತ್ತಿದೆ. ಪ್ರಸ್ತುತ ಪಾಕಿಸ್ಥಾನದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಸಂಪನ್ಮೂಲಗಳ ಕೊರತೆ ಸಾಕಷ್ಟು ಬಾಧಿಸುತ್ತಿದೆ. ಈ ಸಂಬಂಧ ಇತ್ತೀಚೆಗಷ್ಟೇ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಜಗತ್ತಿನಾದ್ಯಂತ ಲಾಕ್‌ಡೌನ್ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಆ ಲಕ್ಷುರಿ ನಮಗೆ ಇಲ್ಲ. ಲಾಕೌಡೌನ್ ಮಾಡುವಷ್ಟು ಅದೃಷ್ಟ ನಮಗಿಲ್ಲ ಎಂದು ಹೇಳಿದ್ದರು. ಪಾಕಿಸ್ಥಾನದ ಪ್ರಕರಣಗಳು ಎಲ್ಲೆಲ್ಲೆ ಎಷ್ಟೆಷ್ಟು
ಒಟ್ಟು ಪ್ರಕರಣಗಳು 1238
ಸಾವುಗಳು 9
ಗುಣಮುಖ 21 ಸಿಂಧ್ 421
ಪಂಜಾಬ್ 419
ಇಸ್ಲಾಮಾಬಾದ್ 27
ಬಲೂಚಿಸ್ಥಾನ್ 131
ಖೈಬರ್‌ಪ್ರಾಂತ್ಯ 147
ಎಜೆಕೆ ಪ್ರಾಂತ್ಯ 93