Advertisement

ದೇಶದಲ್ಲಿ12-17 ವರ್ಷದ ಮಕ್ಕಳಿಗೂ ಕೊವೊವ್ಯಾಕ್ಸ್‌

10:30 PM Apr 29, 2022 | Team Udayavani |

ನವದೆಹಲಿ: ದೇಶದಲ್ಲಿ 12-17 ವರ್ಷದ ಮಕ್ಕಳಿಗೆ ಸಿರಂ ಇನ್‌ಸ್ಟಿಟ್ಯೂಟ್‌ನ “ಕೊವೊವ್ಯಾಕ್ಸ್‌’ ಲಸಿಕೆ ಬಳಸಬಹುದು ಎಂದು ಲಸಿಕೆ ಹಾಕಿಸುವುದಕ್ಕಾಗಿನ ರಾಷ್ಟ್ರೀಯ ತಾಂತ್ರಿಕ ಸಮಿತಿ(ಎನ್‌ಟಿಎಜಿಐ) ತಿಳಿಸಿದೆ.

Advertisement

ಶುಕ್ರವಾರದಂದು ಎನ್‌ಟಿಎಜಿಐ ಸಭೆ ನಡೆಸಿದ್ದು, ಅದರಲ್ಲಿ ಈ ಕುರಿತಾಗಿ ಚರ್ಚೆ ನಡೆಸಲಾಗಿದೆ. ಕೊವೊವ್ಯಾಕ್ಸ್‌ನ ವರದಿಗಳನ್ನು ಪರಿಗಣಿಸಿ ನಾವು ಈ ಸಲಹೆ ನೀಡುತ್ತಿದ್ದೇವೆ ಎಂದು ತಜ್ಞರು ತಿಳಿಸಿದ್ದಾರೆ.

ಹಾಗೆಯೇ ವಿವಿಧ ಕಾರಣಗಳಿಂದಾಗಿ ವಿದೇಶಗಳಿಗೆ ತೆರಳುವವರಿಗೆ 2ನೇ ಡೋಸ್‌ ಲಸಿಕೆ ಮತ್ತು ಮುನ್ನೆಚ್ಚರಿಕಾ ಡೋಸ್‌ ಲಸಿಕೆ ನಡುವಿನ ಅಂತರವನ್ನು 9 ತಿಂಗಳುಗಳಿಂದ 6 ತಿಂಗಳಿಗೆ ಇಳಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

5 ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಚರ್ಚೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತಾದರೂ ಅದರ ಬಗ್ಗೆ ತಜ್ಞರು ಚರ್ಚೆ ನಡೆಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next