Advertisement

ಕೋವಿಡ್ ವೈರಸ್ ಗೆ ಲಸಿಕೆಯೇ ಸಿಗದಿರಬಹುದು

02:22 AM May 16, 2020 | Hari Prasad |

ಕೋವಿಡ್ ವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸಲು ಅನೇಕ ದೇಶಗಳು ನಾಮುಂದು, ತಾಮುಂದು ಎಂದು ಪೈಪೋಟಿಗಿಳಿದಿರುವ ನಡುವೆಯೇ, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಕೊರೊನಾಗೆ ಲಸಿಕೆ ಸಿಗುವುದೇ ಅನುಮಾನ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Advertisement

ವ್ಯಾಪಕವಾಗಿ ಹಬ್ಬುತ್ತಿರುವ ಈ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಲು ಇನ್ನೂ ಒಂದು ವರ್ಷ ಕಾಯಬೇಕಾಗಬಹುದು ಅಥವಾ ಅದಕ್ಕೆ ಲಸಿಕೆಯೇ ಸಿಗದೇ ಇರುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.

ದೇಶವ್ಯಾಪಿ ಲಾಕ್‌ ಡೌನ್‌ ಅನ್ನು ಹಂತಹಂತವಾಗಿ ಸಡಿಲಿಸುವ ಕುರಿತು ಮಂಗಳವಾರ 50 ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next